ನೀವು ಫರ್ಸ್ಟ್ ಕ್ಲಾಸ್ ಹೌಸ್ವೈಫ್ ಆಗತೀರಿ ಬಿಡ್ರಿ.
ತಾನೇನು ನನ್ನುನ್ನು ಲಗ್ನ ಮಡಿಕೊಳ್ಳೂವವನಿದ್ಡನೆ? -ಛೆ, ದೇಸಾಯಿಯ
ಬಗ್ಗೆ ಹೀಗೆಲ್ಲ ವಿಚಾರಿಸಿದರೆ ಉಪಗಯೊಗವಿಲ್ಲ. ಸಂಭಾವಿತ, ಮಳ್ಳ ಗಂಡಸು ಅದು.
ಅವನ ದೃಷ್ಟಿಯಲ್ಲಿ ಯಾಕೋ ಮುಳ್ಳಿದ್ಡಂತೆ ಕಾಣುವುದಿಲ್ಲ. ತನ್ನ ಮೇಲಂತೂ ಬಹಳ
ಪ್ರೀತಿ, ಅಭಿಮಾನ. ಅದಕ್ಕೆ ಅವನೊಂದಿಗೆ ತಾನು ಫ಼್ರೀಯಾಗಿರುವುದು, ಎಷ್ಟು
ವರ್ಷಗಳಿಂದ ನೋಡುತಿದ್ದೆನೆ, ಒಮ್ಮೆಯೂ ಆತ ತನ್ನೆಡೆ ನೋಡುವ ದೃಷ್ಟಿಯಲ್ಲಿ
ಮುಳ್ಳಿನ ಮೊನೆಯಿಲ್ಲ.
ಹೊರಗಡೆ ರಸ್ತೆಯ ಮೇಲೆ ಯಾರೋ ಅಶ್ಲೀಲವಾದ ಹಾಡೊಂದನ್ನು
ಗುನುಗುನಿಸುತ್ತ ಹೊರಟಿರುವಂತಿದೆ.ಎದ್ದು ನೋಡಬೇಕು ಕಿಡಕಿಯೊಳಗಿನಿಂದ...
ಛೇ, ಬೇಡ, ತಾನೇನು ಕಾಲೇಜು ಹುಡುಗಿಯೇ ಹೀಗೆಲ್ಲ ಪ್ರಚೋದಿಸಲಿಕ್ಕೆ? ಆದರೂ
ಒಮ್ಮೆ ನೋಡಲಡ್ಡಿಯಿಲ್ಲ -ಆ ಹಾಡುವ ಕತ್ತೆಗೆ ಕಾಣದಂತೆ. ಗೋಡೆಯ ಮರೆಗೆ
ಕಾಣದಂತೆ ನಿಂತು, ಕನ್ನಡಿ ಹಿಡಿದು ರಸ್ತೆಯ ಮೇಲಿನ ದೃಶ್ಯ ನೋಡುವುದೇನು
ಹಾಸ್ಟೆಲಿನೊಳಗಿರುವವರಿಗೆ ಹೊಸದಲ್ಲ.
ಅರ್ಧ ಕುಡಿದ ಚಹಾದ ಕಪ್ಪನ್ನು ಟೇಬಲ್ಲಿನ ಮೇಲ್ಲಿಟ್ಟು ಶಾಂತಿ ಕನ್ನಡಿಯಿದ್ದ
ಕಡೆ ಬಂದಳು. ಹಾಡುವ ಕತ್ತೆಯ ಬಾಯಿಂದ ಹೇಸಿ ನಗೆಯ ಅಲೆಗಳು ಹೊರಟು
ಹಾಸ್ಟೆಲಿನ ಗೋಡೆಗಳನ್ನು ಭೇದಿಸಿ ಮುಳ್ಳಿನಂತೆ ಚುಚ್ಚು ತೊಡಗಿವೆ. ಥೂ,ಈ ಹೊಲಸು
ಕೆಲಸ ಬೇಡ.ಯಕೋ ಮತ್ತೆ ಒಮ್ಮೆಲೆ ಎಲ್ಲದರ ಬಗೆಗೂ ಹೇಳತೀರದ ಬೇಸರ
ಬರುತ್ತಲಿದೆ...
ಅರ್ಧಕ್ಕೆ ಬಿಟ್ಟ ಚಹಾದಲ್ಲಿ ನೊಣ ಬಿದ್ದು ಒದ್ದಾಡತೊಡಗಿದೆ.ಸಿಹಿ ಚಹಾದ
ಆಸೆಗೆ ಬಿದ್ದು ಬಂದಿದ್ದ ನೊಣ...ಇನ್ನೂ ಜೀವವಿದೆ,ತೆಗೆದು ಹೊರಗೆ ಹಾಕೊಣವೆ?
ಬದುಕಿಕೊಳ್ಳುಲಿ ಪಾಪ.
ಶಾಂತಿಯ ಕೈ ಕಪ್ಪಿನೆಡೆ ಹೋಗಿ ತಟ್ಟನೆ ಅಲ್ಲೇ ನಿಂತಿತು.ಈಗ ಎದನ್ನು ಹೊರಗೆ
ಹಾಕಿದರಾದರು ಉಪಯೊಗವೆನು? ಅದಕ್ಕೇನೂ ಮೊದಲಿನಂತೆ
ಹಾರಲಾಗುವುದಿಲ್ಲ. ಒದ್ದಾಡಿ ಎರಡು ನಿಮಿಷದ ನಂತರ ಸಾಯುವುದು ನಿಶ್ಚಿತ
.ಬೇಡ. ಕಪ್ಪಿನಲ್ಲಿ ನೊಣಸಹಿತ ಚಹಾವನ್ನು ಕಿಡಿಕಿಯಾಚೆ ಚೆಲ್ಲಿದಳು ಆಕೆ-ಇನ್ನು
ಲೆಕ್ಚರು ತಯಾರಿಸಬೇಕು. ಡ್ಯೂಟಿ- DO or die....
ಅವಳಿಗೆ ನಗು ಬಂತು. ಕಿಸಕ್ಕನೆ ನಕ್ಕಳು. ಕ್ಲಾಸಿನಲ್ಲಿ ಕಲಿಸುವುದು, ಅಂದರೆ
ಯಾವುದನ್ನು ಆ ನಿರ್ಭಾಗ್ಯ ಹುಡುಗರು ಓದಿ ಮನನ ಮಾಡಿಕೊಳ್ಳಬೇಕೋ,
ಯಾವುದರಿಂದ ಅವರ ಉದ್ದಾರ ಸಾಧ್ಯವೆಂದು ಹಿರಿಯರು ತಿಳುವಳಿಕೆಯೋ ಅದು
ಪುಟ:ನಡೆದದ್ದೇ ದಾರಿ.pdf/೧೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ನಡೆದದ್ದೇ ದಾರಿ