ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೯೦ ನಡದದ್ದೇ ದಾರಿ
....ಮತ್ತೆ ಉಸಿರಾಡುವುದು ಸಾಧ್ಯವಾದಾಗ ಆಕೆ ಸೋತಧ್ವನಿಯಲ್ಲಿ ಮಾತನಾಡಿದಳು,"ಶಂಕರ...." "ಇನ್ನ ನಿನ್ನ ಪುರಾಣ ಸುರೂ ಮಾಡಬ್ಯಾಡ ಮಾರಾಯಳ್ಯ-ಟ್ರಾನ್ಸ್ ರ್ ಎಂದ ಮಾಡಿಸಿಗೋತೀ ಅಂತ. ಯಾಕೋ ಆಕೆಗೆ ಒಮ್ಮೆಲೆ ಅನಿಸಿತು-ಟ್ರಾನ್ಸಫರ‍್ ಮಾಡಿಸಿಕೊಳ್ಳಲು ಬಹುಶಃ ಈತ ಸೀರಿಯಸ್ಸಾಗಿ ಪ್ರಯತ್ನ ಮಾಡುತ್ತಲೇ ಇಲ್ಲ,ಟ್ರಾನ್ಸಫರ್ ಮಾಡಿಸಿಕೊಂಡು ಇಲ್ಲೇ ಬಂದು ಈ ಎಲ್ಲ ಜಂಜಾಟದಲ್ಲಿ ಮತ್ತೆ ಸಿಕ್ಕಿಕೊಳ್ಳಲು ಈತನಿಗೆ ಮನಸ್ಸಿಲ್ಲ,ಈತ ಬಹುಶಃ ಇನ್ನೊಂದೂ ಇಲ್ಲಿಗೆ ಟ್ರಾನ್ಸ್ ರ್ ಮಾಡಿಸಿಕೊಳುವುದೇ ಇಲ್ಲ.... ಉದ್ವಿಗ್ನಳಾಗಿ ಆಕೆ ಆತನತ್ತ ತಿರುಗಿ ಆತನ ಭುಜಗಳನ್ನು ಹಿಡಿದು ಮತ್ತೆ ಕರೆದಳು, "ಶಂಕರ....." "ವಿಮಲಾ, ಪ್ಲೀಜ್, ನನಗ ಭಯಂಕರ ನಿದ್ದಿ ಬಂದದ. ನಿನಗ ಏನು ಹೇಳೂದಿದ್ರೂ ಮುಂಜಾನೆ ಎದ್ದ ಮ್ಯಾಲೆ ಹೇಳು. ಎಲ್ಲಾ ಕೇಳ್ತೀನಿ. ಈಗ ನನಗ ಸುಮ್ನ ತ್ರಾಸ ಕೊಡಬ್ಯಾಡ." ಆಕೆ ಸುಮ್ಮನಾದಳು. ಮುಂದೆ ಎರಡೇ ಕ್ಶಣದಲ್ಲಿ ಆತನ ಗೊರಕೆ ಸುರುವಾಯಿತು. ಆತನ ಗೊರಕೆಯನ್ನೂ ನಡುಮನೆಯಿಂದ ಆಗೀಗ ಬರುತ್ತಿದ್ದ ಮಾವನವರ ನರಳಿಕೆಯನ್ನೂ ಡಬ್ಬಿಗಳ ಸಂದುಗಳಲ್ಲಿ ಓಡಾಡುತ್ತಿದ್ದ ಇಲಿಗಳ ಚಿಂವ್ ಗುಡುವಿಕೆಯನ್ನೂ ಸುಂಯ್ಯೆಂದು ಬೀಸುತ್ತಿರುವ ಹೊರಗಿನ ಗಾಳಿಯ ಸದ್ದನ್ನೂ ಕೇಳುತ್ತ ನಿದ್ರಿಸಲು ಆಕೆ ವ್ಯರ್ಥ ಪ್ರಯತ್ನ ಮಾಡಿದಳು. ದೂರದಲ್ಲೆಲ್ಲೊ ಕಚೇರಿಯ ಗಡಿಯಾರ ಎರಡು ಗಂಟೆ ಬಾರಿಸಿದ್ದು ಕೇಳಿಸಿತು. ಆಯಿತು, ಇನ್ನೇನು, ಇನ್ನೆರಡು ಗಂಟೆಗೆಲ್ಲ ನಳ ಬರುತ್ತದೆ. ಎದ್ದು ನೀರು ತುಂಬಬೇಕು. ಇತ್ತೀಚೆಗೆ ಹಾಳಾದ್ದು ನಳ ನಸುಕಿನ ನಾಲ್ಕಕ್ಕೇ ಬಂದು ಆರು ಗಂಟೆಯ ಒಳಗೇ ಹೋಗಿ ಬಿಡುತ್ತದೆ. ಆರಕ್ಕೆ ಸರಿಯಾಗಿ ಪಾಪು ಏಳುತ್ತಾನೆ. ಆಮೇಲೆಲ್ಲಿಯ ನಿದ್ರೆ? ಮಾವನವರಿಗೆ ಆರೂವರೆಗೆ ಸರಿಯಾಗಿ ಚಹಾ ಬೇಕು. ಒಮ್ಮೆ ಮಗ್ಗುಲಾಗಿ ಆ ನಸುಬೆಳಕಿನಲ್ಲಿ ಆಕೆ ಗಂಡನನ್ನು ನೋಡಿದಳು. ಉದ್ದಕ್ಕೂ ಮಲಗಿದ್ದಾನೆ. ಸುಖ ಉಂಡು ತ್ರುಪ್ತಿಗೊಂಡು ಮಲಗಿದ್ದಾನೆ. ಎಡಗಡೆ ಕಿವಿಯ ಹತ್ತಿರ ತುಸು ಬೆಳ್ಳಗಾಗಿದೆ ಕೂದಲು. ಅದು ಬಿಟ್ಟರೆ ಆತನಿನ್ನೂ ತರುಣನ ಹಾಗೆಯೇ ಕಾಣುತ್ತಾನೆ. ಆತನ ಜೀವನೋತ್ಸಾಹ ಒಂದಿಷ್ಟೂ ಕಡಿಮೆಯಾಗಿಲ್ಲ. ತನಗಿಂತ ಆರು ವರ್ಷಕ್ಕೆ ದೊಡ್ಡವನು. ತಾನೇಕೆ ಮುದುಕಿಯಾಗುತ್ತಿದ್ದೇನೆ? ಈ ಎರಡು ವರ್ಷದಲ್ಲಂತೂ ಮನೆಯ ಕೆಲಸ, ಆಫೀಸಿನ ಕೆಲಸ, ಮಕ್ಕಳನ್ನು