ಪುಟ:ನಡೆದದ್ದೇ ದಾರಿ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ನಡೆದದ್ದೇ ದಾರಿ ಮಗುವಿನ ಹಾಗೆ ಅಪ್ಪ ಒಬ್ಬರೇ ಎಲ್ಲಿಗೋ ನಡೆದಂತೆ, ಏನೋ ಕಸಿವಿಸಿ.... ಅಡಿಗೆಮನೆಯಲ್ಲಿ ಪಿಸುಧ್ವನಿ ಕೇಳಿಸಿದಾಗ ಆಕೆಗೆ ಒಮ್ಮೆಲೆ ನೆನಪಾಯಿತುತಾವು ಊಟಕ್ಕೆ ಕೂತಿದ್ದಾಗ ಸರಸವ್ವ ಎದುರಿಗೆ ಬಂದಿರಲಿಲ್ಲ. ರಮಾನೇ ಬಡಿಸಿದ್ದಳು ಎಲ್ಲರಿಗೂ. ಅಪ್ಪ ಈ ವಯಸ್ಸಿನಲ್ಲಿ ಇಷ್ಟೊಂದು ಕೆಲಸ ಮಾಡುತ್ತಾರಲ್ಲ, ಅವರು ಮಧ್ಯಾಹ್ನ ದಣಿದು ಊಟಕ್ಕೆ ಬಂದಾಗ ಡೈನಿಂಗ್ ಹಾಲ್ ಎಲ್ಲ ಖಾಲಿ. ಅಷ್ಟು ದೊಡ್ಡ ಟೇಬಲಿಗೆ ಅವರೊಬ್ಬರೇ ಕೂತು ಏನು ಉಣ್ಣುತ್ತಾರೋ.... “ಇನ್ನಿಷ್ಟ ಅನ್ನಾ ಹಾಕೇ ಸಾಹೇಬರ ? ನೀವೇನೂ ಉಣ್ಣುವಿಲಾ" ಸರಸವ್ವನ ಮೆತ್ತಗಿನ ಧ್ವನಿ. “ಸಾಕ ಸರಸ್ವತಿ, ಇವತ್ತ ಫ್ಯಾಕ್ಟರಿಯೊಳಗ ಕೆಲಸ ಭಾಳ ಆದ. ಭಾಳ ಉಂಡೆ ಅಂದ್ರ ಕೆಲಸಾ ಹ್ಯಾಂಗ ಮಾಡ್ಲಿ ? –ಗಡಿಬಿಡಿಯಿಂದ ಉಣ್ಣುತ್ತಿದ್ದ ಅಪ್ಪನ ಧ್ವನಿ. “ಹೊಟ್ಟೆಕಿಂತಾ ಕೆಲಸ ಹೆಚ್ಚಿನದಲ್ಲ. ಸಾವಕಾಶ ಊಟಾ ಮಾಡಿ." “ಸಾಕ ಸಾಕು, ನಂದು ಆಗೇ ಹೋತು." ಸಿಂಕ್‌ನಲ್ಲಿ ನಳ ತಿರುಗಿಸಿದ ಸಪ್ಪಳ : ಜೊತೆಗೇ ಅಪ್ಪನ ದೊಡ್ಡ ತೇಗು ; ನಂತರ, “ಅಡಿಕೀ ತಗೊಳ್ಳಿ." “ಅಂಧಾಂಗ ಸರಸ್ವತಿ, ಇವತ್ತ ನಮ್ಮ ಎಲ್ಲಾ ಕಾಟನ್ ಮಿಲ್ಸ್ನ ಮ್ಯಾನೇಜರ್ಸು ಬಾರ ಆಫೀಸಿಗೆ, ಮೀಟಿಂಗ್ ಆದ. ನಾ ಬರಿ ಕ್ಕೆ ತಡಾ ಆಗ್ತದ." “ಆದಷ್ಟ ಲಗೂ ಬರಿ. ಕಮಲಕ್ಕ ಬಂದಾರ." “ಆ ? ಕಮಲಾ ಬಂದಾಳು ? ಎಲ್ಲಿ ? ಯಾವಾಗ ? ಆ ಧ್ವನಿಯಲ್ಲಿನ ಪ್ರೀತಿ ತುಂಬಿದ ಆತುರತೆ ಗಮನಿಸಿದ ಕಮಲಾಗೆ ಇನ್ನೇನು ಅವರಿಲ್ಲಿ ಬಂದೇ ಬಿಟ್ಟರು ಅನಿಸಿ, ಯಾಕೊ ಅಪ್ಪನ ಮುಖ ನೋಡಲು ಆತಂಕ ಅನಿಸಿ, ಇನ್ನೇನು ಮಾಡುವುದು ಅನಿಸಿ, ತುಂಬ restless ಅನಿಸಿತು. ಆದರೆ ಮರುಕ್ಷಣ ಸರಸವ್ವ ಹೇಳಿದ್ದು ಕೇಳಿ ಹಾಯೆನಿಸಿತು : “ಅವು ರಾತ್ರಿ ಎಲ್ಲಾ ಪ್ರವಾಸ ಮಾಡಿ ದಣಿದು ಬಂದಾರ, ಸ್ವಲ್ಪ ವಿಶ್ರಾಂತಿ ತಗೋಳಿ ಬಿಡ್ರಿ. ಸಂಜೀನ್ಯಾಗ ಭೆಟ್ಟಿ ಆಗೀರಂತ." “ಅದೂ ಖರೇನು, ನಾ ಇನ್ನ ಬಡ್ತೀನಿ ಹಂಗಾರ" ಅನ್ನುತ್ತಲೇ ಆತ ಹೊರಟರು. ಆತನ ಬಟ್ಟಿನ ಟಪ್ ಟಪ್, ಕಾರು ಸ್ಮಾರ್ಟ್ ಆಗಿ ಹೊರಟ ಸದ್ದು ಕೇಳಿಸದಂತಾಗುತ್ತಿದ್ದಂತೆ ಕಮಲಾಗೆ ಜೊಂಪು ಹತ್ತತೊಡಗಿತು. ಜೊತೆಗೇ ಜಿಟಿಜಿಟಿ ಮಳೆಹನಿಯಂತಹ ಸಾವಿರ-ಸಾವಿರ ನೆನಪುಗಳು.... ಮೈತುಂಬ ಬಂಗಾರದೊಡವೆ ಧರಿಸಿ ಮುಗುಲ್ನಗುತ್ತಿದ್ದ ಅವ್ವ, ಅವಳನ್ನು ಕ್ಷಣಕಾಲವೂ ಬಿಟ್ಟಿರದೆ - ಲಗ್ನವಾಗಿ ಮೂವತ್ತೈದು ವರ್ಷಗಳ ನಂತರವೂ - ಅವಳ