ಪುಟ:ನಡೆದದ್ದೇ ದಾರಿ.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ನಡೆದದ್ದೇ ದಾರಿ

ಗಮನಿಸುತ್ತಿದ್ದ ಕರಿಯ ಇದೆಲ್ಲದರ ಅರ್ಥವೇನಿದ್ದೀತೆಂದು ಆಶ್ಚರ್ಯ ಕೆಳವಳಪಡುತ್ತಿದಾಗ ಗೌಡರು ಆತನನ್ನು ಕರೆದು ಗುಟ್ಟಾಗಿ ಹೇಳಿದರು: ರಾಮನಗೌಡರ ಮಗಳಿಗೆ ಏನೋ ಕಾಯಿಲೆ. ಎರಡು ತಿಂಗಳು ಇಲ್ಲೇ ಇರುತ್ತಾಳೆ. ಆದರೆ ಅವಳಿರುವ ವಿಷಯ ಯಾರಿಗೊ ಹೇಳಬಾರದು.

ಕರಿಯ ತಲೆದೂಗಿದ. ಗೌಡರ ಆಜ್ಞೆಯನ್ನು ಆತನೆಂದೂ ಮೀರಿದುದಿರಲಿಲ್ಲ. ಆದರೆ ಆ ಬಂಗಾರದಂಥ ಹೆಣ್ಣಿಗೆ ಅದೆಂಥ ಕಾಯಿಲೆಯಿದ್ದೀತು ? ಅ೦ತ ಆತ ಹಗಲಿರುಳೂ ಚಿಂತಿಸಿದ.

ಮೂಂದೆಉಮ್ಮ ಒಂದು ಅಮವಾಸ್ಯೆಯ ದಿನ ಗೌಡರು ಕರಿಯನನ್ನು ಕರಕೊಂಡು ವಿಜಾಪುರೆಕ್ಕೆ ಹೋಗಿ ಬಾಡಿಗೆಯ ಕಾರೋಂದನ್ನು ತೆಗೆದುಕೊಂಡು ತಿಮ್ಮಾಪುರಕ್ಕೆ ಬಂದು ಅದೇ ರಾತ್ರಿ ಆ ಕಾರಿನಲ್ಲಿ ರಾಮನಗೌಡರ ಮಗಳನ್ನೂ, ಮನೆಯಲ್ಲಿರುವ ದೂರದ ಬಳಗದ ಒಂದು ಅಜ್ಜೆಯನ್ನೂ ಕರಕೊಂಡು ತಿರುಗಿ ವಿಜಾಪುರಕ್ಕೆ ಹೋದರು. ಊರಿನ ಆಚೆ ದೂರದಲ್ಲಿರುವ ಒಂದು ಖಾಸಗಿ ದವಾಖಾನೆಯೊಳಗೆ ರಾಮನಗೌಡರ ಮಗಳೂ ಆಜ್ಜೆಯನ್ನೂ ಡಾಕ್ಟರಮ್ಮನೆಊಂದಿಗೆ ಮಾಯವಾದ ನಂತರ ಸೆಂಗನಗೌಡರು ಬೆಪ್ಪಾಗಿದ್ದ ಕರಿಯನ ತೀರಾ ಹತ್ತಿರ ಬಂದು ವ್ಯಥಿತ ಧ್ವನಿಯಲ್ಲಿ ಹೇಳಿದರು: ರಾಮನಗೌಡರ ಮಗಳು ಅರಿಯದ ಹುಡುಗಿ. ಪಾಪ! ಇನ್ನೂ ಮದುವೆಯಿಲ್ಲ. ಯಾರಿಗೋ ಬಸಿರಾಗಿಬಿಟ್ಟಿದ್ದಾಳೆ. ಪುಣೆಯಲ್ಲಿ ಅವರಿಗೆ ಮರಿಶೆರರ್ನದಯ ಪ್ಪಶ್ನೆ. ಹಾಗಂತ ರಿಕಗಾರಿಗೂ ತಿಳಿಂಕುದುತೆ ಹೆರಿಗಯಾಗುವ ತನಕ ಅವರು ತಮ್ಮ ಹತ್ತಿರ ಅವಳನ್ನು ಬಿಟ್ಟು ಹೋದದ್ದು. ನಾಳೆ ದೊಡ್ಡೆ ಮನೆಗೆ ಮದುವೆಯಾಗಿ ಹೋಗಲಿರುವ ಹುಡುಗಿ. ಅವಳ ಭವಿಷ್ಯ ಹಾಳಾಗಬಾರದಲ್ಲ...

ಕರಿಯನ ಮಬ್ಬುತಲೆಯಲ್ಲಿ ಮಿಂಚೆಊಂದು ಮಿಂಚಿತು. ಆತ ಮುಕನಾಗಿ ನಿಂತ. ಆತನ ಗಂಟಲು ಉಬ್ಬುಬ್ಬಿ ಬರತೊಡಗಿತು. ಹಲವಾರು ತಿಂಗಳ ಹಿಂದೆ ಮಬ್ಬುಗತ್ತಲಲ್ಲಿ ಊರ ಗುಡ್ಡದ ವಾರೆಯಲ್ಲಿ ಕನಸೋ ಎಂಬಂತೆ ನಡೆದುಹೋದ ಘಟನ ಮರಳಿ ಮರಳಿ ಕಣ್ಣೆದುರು ಕಟ್ಟಿ. ಕೈಕಾಲಲ್ಲಿನ ಶಕ್ತಿ ಉಡುಗಿಹೋದಂತಾಗಿ ಆತ ಅಲ್ಲೇ ಬೆಂಚಿನ ಕೆಳಗೆ ಕುಸಿದುಕೂತ.

ಆ ರಾತ್ರಿ ಬಹಳ ಹೊತ್ತಿನ ನಂತರ ಆಕೆಗೆ ಹೆರಿಗೆಯಾಯಿತು. ಕರಿಯ ದೂರದಿಂದ ಮಗುವನ್ನು ನೋಡಿದ. ಹೊಳೆಯುವ ಕಣ್ಣುಗಳ. ಮಿಂಚುವ ಕೂದಲಿನ. ಬೆಳ್ಳಗಿನ ದ೦ತದ ಗೊಂಬೆಯ ಹಾಗಿರುವ. ತಾಯಿಗಿಂತಲೂ ಚೆಲುವಾದ ಹೆಣ್ಣುಮಗು.

ನಂತರ ಎರಡು ಮೂರು ದಿನಗಳಿಗೆ ಕಾರುಸಹಿತ ಬಂದ ರಾಮನಗೌಡರು ಸಂಗನಗೌಡರೆಉಂದಿಗೆ ಮಾತನಾಡಿ ಮಗಳೆಊಬ್ಬಳನ್ನೇ ಕರಕೂಂಡು ಪುಣೆಗೆ