ಪುಟ:ನಡೆದದ್ದೇ ದಾರಿ.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸಿವು/ಕಾಯುತ್ತಲಿದ್ದ ಕರಿಯ..... ೨೧೧ ಹೋಗಿಬಿಟ್ಟರು.ಹೋಗುವಾಗ ಒಂದೇ ಒಂದು ಸಲ ಆ ಅಪ್ಸರೆ ಕರಿಯನ ಕಡೆ ನೋಡಿ ಸ್ವರ್ಗೀಯವಾದೊಂದು ಮುಗುಳ್ನಗೆಯನ್ನು ಬೀರಿದಳು, ಅಥವಾ ಕರಿಯನಿಗೇ ಹಾಗೆನಿಸಿತೋ.ಆ ಕ್ಷಣ ಆತನಿಗೆ ಆ ನಗೆಯಲ್ಲಿ ನೂರು ಅರ್ಥ ಕಾಣಿಸಿದಂತಾಯಿತು. ಈ ಮಗು ನಿನ್ನದೇ,ಇದನ್ನ ನೀನೇ ನೋಡಿಕೋ,ಅಂತ ಹೇಳಿದಳೇ ಆಕೆ?ಹಾಗೆಂದು ಯೋಚಿಸಿ ಆತ ನಿರ್ವಿಣ್ಣನಾದ .ಆದರೆ ಮಗುವನ್ನು ಅನಾಥಾಶ್ರಮಕ್ಕೆ ಕೊಡುವುದೆಂದು ಗೌಡರು ನಿರ್ಧರಿಸಿದಾಗ ಮಾತ್ರ ಕರಿಯನಿಗೆ ತಡೆಯಲಾಗಲಿಲ್ಲ.ಆ ಮಗು ತನ್ನದೇ ಅಂತ ನಂಬಲು ಆತನಲ್ಲೇನೊ ಬಲವಾದ ಸಾಕ್ಷಾಧಾರಗಳಿರಲಿಲ್ಲ.ಅದು ತನ್ನದೇ ಯಾಕಾಗಿರಬಾರದು? ಎಂದು ಗೌಡರೆದುರು ತಲೆಯೆತ್ತಿ ಏನೂ ಕೇಳಲಾರದ ಕರಿಯ ಆ ದಿನ ಅವರೆದುರು ನಿಂತು ಕಣ್ನೀರು ತುಂಬಿ ಕೇಳಿಕೊಂಡ:'ಯಪ್ಪಾ, ನಾ ಬಡವ ದಿಕ್ಕಿಲ್ಲದಾಂವ. ನನಗ ಭಿಕ್ಸಾ ಕೊಡ್ರಿ. ಮಗೀನ್ನ ನಾ ಸಾಕಿಕೊಂತೀನಿ.ಒಲ್ಲೆನಬ್ಯಾಡ್ರಿಯಪ್ಪಾ,ನಿಂ ಪಾದಕ್ಕ ಬೀಳ್ತೀನಿ.'

 ಗೌಡರು ಮೂಕವಿಸ್ಮಿತರಾದರು.ಬಳಗದ ಮಗು.ತಮ್ಮ ಕಣ್ಣ ಮುಂದೆ ಬೆಳೆದರೂ ಆದೀತು ಅನ್ನಿಸಿತೇನೋ.ಕರಿಯನ ವಿನಂತಿಯನ್ನು ಮನ್ನಿಸಿದರು.
   ಕರಿಯನ ಮಂಕು-ಚಿಂತೆ-ವಿಭ್ರಮೆ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ ಆತ ಜಿಂಕೆಯಂತಾದ. ಗೌಡರ ಧೋತರದಲ್ಲಿ ಮಗುವನ್ನು ಜೋಪಾನವಾಗಿ ಸುತ್ತಿ ಎದೆಗವಚಿಕೊಂಡು ಆತ ತಾನೇ ಮುಂದಾಗಿ ಹೋಗಿ ಟ್ಯಾಕ್ಸಿಯಲ್ಲಿ ಕೂತ."ನನ ಬಾಗ್ಯದ ಲಚ್ಚುಮೀ' ಅಂತ ಅಲ್ಲೇ ಪ್ರೀತಿಯಿಂದ ಮಗುವಿಗೆ ನಾಮಕರಣವನ್ನೂ ಮಾಡಿದ.ಟ್ಯಾಕ್ಸಿ ಧೂಳೆಬ್ಬಿಸುತ್ತ ತಿಮ್ಮಾಪುರದ ಕಡೆ ಹೊರಟಾಗ ಆತನಿಗೆ ಗಾಲಿಯಲ್ಲಿ ಮೋಡಗಳು ಮೇಲೆ ತೇಲುತ್ತಿರುವ ಅನುಭವ.
   ಭಾಗ್ಯಧ ಲಕ್ಷ್ಮಿ ಮಗಳಾಗಿ ಕರಿಯನ ಮನೆ ತುಂಬಿದಂದಿನಿಂದ ಆತನ ದಿನಚರಿ ಪೂರ್ಣ ಬದಲಾಯಿತು.ಗೌಡರು ಹಿತ್ತಿಲಾಚೆ ತುಸು ದೂರದಲ್ಲಿದ್ದ ಆತನ ಗುಡಿಸಲೀಗ ಒಳಗೂ-ಹೊರಗೂ ಥಳಥಳಿಸತೊಡಗಿತು.ಮೊದಮೊದಲು ಊರವರ ಅಚ್ಚರಿಯ ಹಾಸ್ಯಾದ ವಸ್ತುವಾದ 'ಕರಿಯನ ಬಿಳಿಮಗಳು' ಬರಬರುತ್ತ ಎಲ್ಲರಿಂದ ಅನುಕಂಪ-ಪ್ರೀತಿ ಪಡೆಯುತ್ತ ಬೆಳೆಯತೊಡಗಿದಳೂ.ಮಕ್ಕಳಾಗದೇ ಇದ್ದ ಹಿರೀ ಗೌಡತಿ ಕರಿಯನ ಮಗಳಿಗಾಗಿ ತಪ್ಪದೇ ಅಕ್ಕಿಯನ್ನೂ ಒಂದಷ್ಟು ಹಾಲನ್ನು ಕೊಡುತ್ತಿದ್ದಳು.ಒಬ್ಬ ಮಗ-ಒಬ್ಬ ಮಗಳನ್ನು ಹಡೆದಿದ್ದ ಸಣ್ಣ ಗೌಡತಿ ಕರಿಯನ ಮಗಳಿಗೆ ತನ್ನ ಮಕ್ಕಳ ಹಳೆ ಬಟ್ಟೆ ಆಟಕೆ ಇತ್ಯಾದಿ ಅಲ್ಲದೆ ಆಗೀಗ ಮಾಡಿದ ವಿಶೇಷ ತಂಡಿತಿನಸುಗಳನ್ನೂ