ಪುಟ:ನಡೆದದ್ದೇ ದಾರಿ.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ನಡೆದದ್ದೇ ದಾರಿ

ಕೊಡುಿದ್ದಳು. ಮಗಳ ಸ್ನಾನ, ಊಟ, ಆಟಪಾಟ   ಎಲ್ಲದರರ ಬಗೆಗೂ ತುಂಬ ಗಮನ ಕೂಟ್ಟು ಅತ್ಯಂತ ಕಾಳಜಿವಿಸುತ್ತಿದ ಕರಿಯನನ್ನು ಕಂಡು ಒಂದೊಂದು ಸಲ ಗೌಡರೂ ಹಾಸ್ಯ ಮಾಡುತ್ತಿದ್ದರು. ದಿನಗಳೆದಂತೆ ಇನ್ನೂ ಕೆಂಪಾಗಿ, ದುಂಡಾಗಿ ಚೆಲುವಾಗಿ  ಬೆಳೊತ್ತಿದ್ದ ಮಗಳನ್ನು ಎತ್ತಿಕೊಂಡಾಗೆಲ್ಲ ಕರಿಯನಿಗೆ ತನ್ನ ಬೆ ತನಗೇ ಕೀಳರಿಮೆ ಬರುವುದು.ಆತನೀಗ ದಿನವೂ  ಹಲ್ಲುಜ್ಜಿ ಮೈತಿಕ್ಕಿಕೊಂಡು ಜಳಕ ಮಾುವನು. ತನ್ನೆ್ಲಾ ಕೆಲಸವನ್ನೂ ಬೇಗ ಬೇಗನೆ  ಮಾಡಿ ಮುಗಿಸಿ ಸಂಜೆಯ ಹೂತ್ತು ಮಗಳನ್ನು ಊರಾೆ ತಿರುಗಾಡಲು  ಕೆದೊಯ್ಯುವನು. ಗೌಡರ ಮಗಳ ಹಳೇ ಫ್ರಾಕು ತೊಟ್ಟು ಗಾಳಿಯಲ್ಲಿ ಮಗಳು ಕುಣಿದು  ಕುಪ್ಪಳಿಸುತ್ತ ಓಡುವುದನ್ನು ನೋಡುತ್ತ,ವಿಚಿತ್ರ ಧನ್ಯತೆಯನ್ನ್ನುಭವಿಸುತ್ತ ನಿಲ್ಲುವನು "ಇದಲ್ಲಿಯ ಮಗಳನ್ನು ಗಂಟು ಹಾಕಿಕೊಂಡೆಯೋ ಕರಿಯಾ, ನಿನ್ನ ಜಾತಿಯ ಒಳ್ಳೇ ಹೆಣ್ಣನ್ನ ಲಗ್ನವಾದಿ ಸುಖವಾಗಿರಬಾರದೇ,ಇದೇನು ಗ್ರಹಚಾರ?"ಅಂತ ಹಿರಿಯಾರ್ಯರಾದರೂ ಹಿತವಾದ ಹೇಳಿದರೆ ಅದೊಂದೂ ಕರಿಯನ ಮನಸ್ಸು ತಟ್ಟುತ್ತಿರಲಿಲ್ಲ.ಪ್ರಾಯಕ್ಕೆ ಸಹಜವಾದ ದೈಹಿಕ ಬಯಕೆಗಳು ಈ ಮಗಳು ಮನೆಗೆ ಬಂದಾಗಿನಿಂದ ಆತನನ್ನೆಂದೂ ಕಾಡಲಿಲ್ಲ.

ಈ ಮಗಳ ಭವಿಷ್ಯವನ್ನು ಸುಂದರಗೊಳಿಸುವುದೊಂದೇ ಕರಿಯನ ಕನಸಾಗಿ ಬಿಟ್ಟಿತು.

 ಆದ್ದರಿಂದ,ಮಕ್ಕಳ ಶಾಲೆಗಾಗಿ ವಿಜಾಪುರದಲ್ಲಿ ಮನೆ ಮಾಡಲು ಹೊರಟ ಗೌಡರು ನೀನೂ ಬರುತ್ತೀಯಾ ಅಂತ ಕೇಳಿದಾಗ ಕರಿಯ ಹುರುಪಿನಿಂದ ಹೊರಟುಬಿಟ್ಟ.

ವಿಜಾಪುರದಲ್ಲಿ ಒಳ್ಳೆಯದೊಂದು ಮನೆ ಕೊಂಡುಕೊಂಡ ಗೌಡರು ಅಲ್ಲಿ ಸಣ್ಣ ಗೌಡತಿಯನ್ನೂ,ಮಕ್ಕಳನ್ನೂ,ಒಳಗೆಲಸಕ್ಕಾಗಿ ಒಬ್ಬ ಹೆಣ್ಣಾಳನ್ನೂ,ಹೊರಗೆಲಸಕ್ಕಾಗಿ ಕರಿಯನನ್ನೂ ಇಟ್ಟು,ಅಲ್ಲೇ ಹಿತ್ತಲ ಕಡೆ ಆತನಿಗಾಗಿ ತಗಡು ಹೊದಿಸಿದ ಒಂದು ಕೋಣೆಯ ವ್ಯವಸ್ಥೆ ಮಾಡಿದಾಗ ಕರಿಯನಿಗೆ ಬೇರೆಯದೇ ಜಗತ್ತಿನ ಬಾಗಿಲು ತೆರೆದಂತಾಗಿತ್ತು.'ಲಚ್ಚುಮಿಯನ್ನೂ ಸಾಲಿಗೆ ಸೇರಸ್ತೀನಿಯಪ್ಪಾ'ಅಂತ ಅವನು ಆಸೆಪಟ್ಟಾಗ ಗೌಡರು ದೊಡ್ಡ ಮನಸ್ಸು ಮಾಡಿ ಸಹಕರಿಸಿದಾಗ ಕರಿಯನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು.

   ಹಾಗೆ ಲಕ್ಹ್ಮಿ ಗೌಡರ ಮಕ್ಕಳೊಡನೆ ಶಾಲೆಗೆ ಹೋಗತೊಡಗಿದ್ದಳು.ಏಳೆಂಟು ವರ್ಷದ ಹುಡುಗಿ ನೋಡಿದವರನ್ನು ಮರುಳುಗೊಳಿಸುವಷ್ಟು ರೂಪವತಿಯಾಗಿದ್ದಳು.ತಿಮ್ಮಾಪುರದಲ್ಲಿರುವ ವರೆಗೂ ಅಪ್ಪನಿಗೆ ಸದಾ ಅಂಟಿಕೊಂಡೇ ಬೆಳೆದ ಹುಡುಗಿ ಅವಳು.ಆದರೆ ವಿಜಾಪುರಕ್ಕೆ ಬಂದನಂತರ,ಆಕೆ ಶಾಲೆಗೆ ಹೋಗತೊಡಗಿ ನಂತರ,ಅಪ್ಪನೊಂದಿಗಿನ ಮಗಳ ಬೆಸುಗೆ ಕ್ರಮೇಣವಾಗಿ