೨೨೨
ಎದೆಎದೆ ಬಡಿದುಕೊಳ್ಳುತ್ತ ಇಮಾಮ್ ಬೀ ತಿರುಗಿ ಬ ದಾಗಿನ ಸನ್ನಿವೆಶವನ್ನ ತೂ ಲಕ್ಶ್ಮಿಗೆ ಮರೆಯಲಗಿಲ್ಲ. ಆಕೆಯ ಅವಾಂತರ ಕೇಳಿ ಏನಾಯಿತೋ ಅಂತ ಗಾಬರಿಯಿಂದ ಹೊರಬಂದ ಮನೆಮಂದಿಗೆಲ್ಲಾ ಆಕೆ ಅಲ್ಲಾನ ಹೆಸರಲ್ಲಿ ಗಟ್ಟಿಯಾಗಿ ಅಳುತ್ತ ಹೇಳಿದ್ ಕತೆಯಲ್ಲಿ ಅರ್ಥವಾದದ್ದು; ಆಕೆಯ ತಮ್ಮ ಹುಸೇನಸಾಬನ ಮೊಮ್ಮಕ್ಕಳ ಮದುವೆಗೆ ಎಲ್ಲೆಲ್ಲಿಂದಲೊ ನೆಂಟರು ಬಂದಿದ್ದರು:ಆರಲ್ಲೊಬ್ಬಾತ ಲಖನೌದಲೀ ಬಟ್ಟೆ ವ್ಯ್ಯಾಪಾಅರಿಯಾಗಿದ್ದ ಮಹಮ್ಮದ ಗೌಸನೆಂಬ ನಡುವಯಸ್ಸು ಮೀರತೊಡಗಿದ್ದ ಶೋಕಿಲಾಲ; ಬೆಳಗಾವಿಯಲ್ಲಿ ಬಟ್ಟೆ ವ್ಯಾಪಾರಿಯೆ ಆಗಿದ್ದ ಇಮಾಮ್ ಬೀಯ ತಮ್ಮನಿಗೂ ಮಗಹಮ್ಮದ ಗೌಸನಿಗೂ ದೂರದ ನೆಂಟಸ್ತಿಕೆಯಲ್ಲದೆ ವ್ಯಾಪಾರಿ ಸ್ನೇಹ ಬೇರೆ,ಮದುವೆ ಮನೆಯಲ್ಲಿಎಲ್ಲರ ಕಣ್ಣು ಕುಕ್ಕುವಂತೆ ಓಡಾಡುತ್ತಿದ್ದ ಹಮೀದಾಬಾನುವಿನ ಮೇಲೆ ಮಹಮ್ಮದ ಗೌಸನ ಕಣ್ಣು ಬಿತ್ತು; ಲೋಭಿಯಾಗೊದ್ದ ಹುಸೇನ್ ಸಾಬನ ಕೂಡಾ ವ್ಯಾಪಾರ ಕುದುರಿಸುವುದು ಚಾಣಾಕ್ಷನಾಗಿದ್ದಗೌಸನಿಗೆ ತಡವಾಗಲಿಲ್ಲ;ಐದಾರೂ ನೂರು ರುಪಾಯಿ ಕೈ ಬದಲಾಯಿಸಿದವು ಸರೀ ಅದೆ ಮುಹೂರ್ತದಲ್ಲೆ ಮಹಮ್ಮದ ಗೌಸನ್ ಕೂಡ ಹಮೀದಾಬಾನುವಿನ ನಿಕಾಹ ಆಗಿ ಹೋಯಿತು.ಇಮಾಮ್ ಬೀ ಮುದುಕಿ ಪಾಪ ಈ ಮೊಮ್ಮಗಳ ಮದುವೆ ಮಾಡುವುದು ಆಗುತ್ತಿರಲಿಲ್ಲ,ಹುಸೇನ್ ಸಾಬ ಪುಣ್ಯ ಕಟ್ಟೀಕೊಂಡ ಅಲ್ಲಾ ಮೆಚ್ಚುವ ಕೆಲಸ ಮಾಡಿದ ಅಂದರು ಎಲ್ಲರೂ.ಇನ್ನೂ ಹದಿನೆಂಟೂ ದಾಟಿರದ ಚೆಲುವೆ ಹಮೀದಾ ಐವತ್ತರ ಅಂಚಿನಲ್ಲಿದ್ದ ಗೌಸನ ಬೀಬಿಯಾದಳು.ಕೂಡಿದ ಎಲ್ಲ ಜನರೆದುರು ಅತ್ತು ಕರೆದು ರಂಪ ಮಾಡಿದಳು ಇಮಾಮ್ ಬೀ.ಮೋಸ ಮಾಡಿದನೆಂದು ತಮ್ಮನಿಗೆ ಶಾಪ ಹಾಕಿದಳು.ಇನ್ನೇನು ತನ್ನ ಮೊಮ್ಮಗಳಿಗೆ ಆಫೀಸರ್ ಗಂಡ ಸಿಗುತ್ತಿದ್ದನೆ?