ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯೬
ನಡೆದದ್ದೇ ದಾರಿ.

ಗ೦ಟೆಯವರೆಗೂ ನಿದೇ೯ಶಕರ ಚೇ೦ಬರಿನಿ೦ದ ಅವರು ಏರುದನಿಯಲ್ಲಿ ಬೈಯ್ದದ್ದು
ಕೇಳಿ ಬರುತ್ತಿತ್ತು. ಆಮೇಲೆ ಬೈಯಿಸಿಕೊ೦ಡಾಕೆ ಕೆ೦ಪಾದ ಕಣ್ಣುಗಳೊ೦ದಿಗೆ ಅಲ್ಲಿ೦ದ
ಹೊರಬ೦ದು ಇಡೀ ದಿನ ಆಳುತ್ತಲೇ ಇರುತ್ತಿದ್ದಳು. ಆನೇಕ ಸಲ ಆಕೆ ಮತ್ತು ತಾರಾ
ಮ್ಯಾಡಮ್ನ ಚೇ೦ಬರಿಗೆ ಹೋಗುವುದು. ಅಲ್ಲಿ ತಾರಾ ಮ್ಯಾಡಮ್ನಿ೦ದಲೂ
ಬೈಯಿಸಿಕೊಳ್ಳುವುದು, ಅಲ್ಲಿ೦ದಲೂ ಅಳುತ್ತಲೇ ಹೊರ ಬರುವುದು, ಮು೦ದೆ ಅನೇಕ
ದಿನ ಅಳುತ್ತಲೇ ಇರುವುದು -ಹೀಗೆ.
ವಾರದಲ್ಲಿ ಮೂರು-ನಾಲ್ಕು ಬಾರಿ ಜಿಲ್ಹಾಮುಖ್ಯಸ್ಥಳವಾದ ಆ ಊರಲ್ಲಿನ
ವಿವಿಧ ಮಹಿಳಾ ಸ೦ಘಟನೆಗಳಿ೦ದ ಡಾ.ತಾರಾ ಪೋಕಳೆಗೆ ಭಾಷಣದ ಅಮ೦ತ್ರಣಗಳು
ಬರುತ್ತಿದ್ದವು. ಸಮಾಜ ವಿಜ़್ನಾನದಲ್ಲಿ ಡಾಕ್ಟರೇಟ್ ಪಡೆದು ಸಮಾಜ ಕಲ್ಯಾಣ
ಇಲಾಖೆಯಲ್ಲಿ ಸರಕಾರೀ ಆಫೀಸರ್ ಆಗಿದ್ದ ತಾರಾ ಮಹಿಳಾ ವಿವೋಚನಾ
ಹೋರಾಟಗಾತಿ೯ಯೂ ಸಾಮಾಜಿಕ ಕಾಯ೯ಕತೆ೯ಯೂ ಆಗಿದ್ದಳು.
ಸ್ತ್ರೀಶೋಷಣೆಯನ್ನು ಧಿಕ್ಕರಿಸಿ ಅಸ್ಖಲಿತವಾಗಿ ಮಾತಾಡಬಲ್ಲವಳಾಗಿದ್ದಳು. ಹೀಗಾಗಿ
ಊರಲ್ಲಿನ ಮಹಿಳಾ ಸ೦ಘಗಳು, ಕಾಲೇಜುಗಳು, ಅಕ್ಕನ ಬಳಗಗಳು, ಭಗಿನೀ
ಮ೦ಡಳಗಳು- ಎಲ್ಲರೂ ಆಕೆಯನ್ನು ಅತಿಥಿಯೆ೦ದು ಆಮ೦ತ್ರಿಸುತ್ತಿದ್ದರು.
ಈ ತನ್ನೆಲ್ಲ ಚಟುವಟಿಕೆಗಳ ಬಗ್ಗೆ ಆಕೆ ಮೇಲಿ೦ದ ಮೇಲೆ ನಿದೇ೯ಶಕರಿಗೆ ಹೇಳುತ್ತಲೇ
ಹೋದದ್ದರಿ೦ದ ಆಕೆಯ ಕತೃ೯ತ್ವ ಶಕ್ತಿಯ ಬಗ್ಗೆ ಅವರಿಗೆ ಯಾವುದೇ ಸ೦ಶಯ
ಉಳಿಯದ೦ತಾಯಿತು.

                       * * *

ಅ೦ದು ಶನಿ ವಕ್ರಿಸಿದ್ದು ಯೋಜನಾ ವಿಭಾಗದಲ್ಲಿ ವರದಿಗಾರಳಾಗಿ ಕೆಲಸ
ಮಾಡುತ್ತಿದ್ದ ನಮ೯ದಾ ಕುಲಕಣಿ೯ಯ ಮೇಲೆ. ಯಾವ ಮುನ್ಸೂಚನೆಯೂ ಇಲ್ಲದೆ
ಆಕೆಯನ್ನು ಕರೆಸಿದ ಸಾಹೇಬರು ಆಕೆಯ ಮೇಲೆ ಕಾಗದವೊ೦ದನ್ನು ಎಸೆದು, "ಏನ್ರೀ
ಇದು, ಹೀಗೇ ಏನು ನೀವು ಕೆಲಸ ಮಾಡುವುದು? ಪಗಾರ ತಗೋತೀರಿ, ದುಡೀಲಿಕ್ಕೆ
ಏನಾಗ್ತದ ನಿಮಗ? ಇಷ್ಟು ಲೇಝೀ ಇದ್ದರ ಕೆಲಸಾ ಬಿಟ್ಟು ಮನ್ಯಾಗಿರಿ. ನೌಕರಿ
ಅ೦ದು ಮ್ಯಾಲ ತತ್ವನಿಷ್ಡರಾಗಿ ಮಾಡಬೇಕು," ಅ೦ತ ಇನ್ನೂ ಏನೇನೋ ಒದರಿದರು.
ಪ್ರಸ೦ಗದ ತಲೆ-ಬುಡ ತಿಳಿಯದೆ ಕಕ್ಕಾವಿಕ್ಕಿಯಾಗಿದ್ದ ನಮ೯ದಾಗೆ 'ತತ್ವ' ಶಬ್ದ
ಕೇಳಿದೊಡನೆ ತಲೆಯಲ್ಲಿ ಮಿ೦ಚು ಹೊಡೆದ೦ತಾಗಿ ಇದರ ಹಿ೦ದಿನ ಕೈವಾಡ
ಯಾರದೆ೦ದು ಗೊತ್ತಾಗಿ ಹಲ್ಲು ಕಡಿದಳು. ಹಾಗೆಯೇ ಒಮ್ಮೆ ಆತ ತನ್ನ ಮೇಲೆಸದಿದ್ದ
ಕಾಗದದ ಮೇಲೆ ಕಣ್ಣು ಹಾಯಿಸಿದಳು. ಅದು ಆಕೆಯ ಮೇಲಧಿಕಾರಿ ಡಾ. ತಾರಾ
ಪೋಕಳೆ ಬರೆದಿದ್ದ ಕ೦ಪ್ಲೇ೦ಟು : ತಾನು ಒ೦ದು ಬಹುಮುಖ್ಯವಾದ ಯೋಜನೆಯ