ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ.ಬ್ರಾ.ಕ್ರಿಷ್ಟಪ್ಪ

ಆ ಊರು ಒ೦ದು ತಾಲೂಕು ಕೇ೦ದ್ರ.ಆಲ್ಲೊ೦ದು ಕಾಲೇಜಿತ್ತು,ಆಸ್ಪತ್ರೆಯಿತ್ತು,ಸಹಕಾರಿ ಸ೦ಘಗಳಿದ್ದವು,ಉದ್ಯೋಗ ವಿನಿಮಯ ಕಚೇರಿಯಿತ್ತು,ಪುಢಾರಿ ಸಾಹುಕಾರ ಕಲ್ಲಪ್ಪನವರಿದ್ದರು,ಮತ್ತು ದ.ಬ್ರಾ.ಕ್ರಿಷ್ಟಪ್ಪ ಸಹ ಇದ್ದ. ಸಾಹುಕಾರ ಕಲ್ಲಪ್ಪನವರು ಸಮಕಾಲೀನನೇ ಆಗಿದ್ದ ಕ್ರಿಷ್ಟಪ್ಪ ಶಾಲೆಯಲ್ಲಿ ಕಾಲೇಜಿನಲ್ಲಿ ಕೆ.ಎಸ್.(ಕೃಷ್ಣಮೂರ್ತಿ ಶ್ರೀನಿವಾಸಾಚಾರ್ಯ) ಅಗ್ನಿಹೋತ್ರಿ'ಯಾಗಿದ್ದವನು ಈ ಕಾಲು ಶತಮಾನದ ಅವಧಿಯಲ್ಲಿ 'ದ.ಬ್ರಾ.(ದರಿದ್ರ ಬ್ರಾಹ್ಮಣ) ಕ್ರಿಷ್ಟಪ್ಪ 'ನಾಗಿ ಹೇಗೆ ರೂಪಾ೦ತರ ಹೊ೦ದಿದನೆನ್ನು ವುದೇ ಒ೦ದು.ಸ್ವಾರಸ್ಯಕರ ಕತೆ. ಆದರೆ ಕ್ರಿಷ್ಟಪ್ಪನ ಮಟ್ಟಿಗೆ ಅದೆಲ್ಲ ನೋವಿನ ನೆನಪು.ಇಡೀ ಕತೆಯನ್ನು ಮರೆತುಬಿಡಲು ಆತ ಬಹಳ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾನೆ.ಆದರೆ ಆಪ್ರಿಯವಾದ ಎಲ್ಲವನ್ನೂ ಮರೆತು ಬಿಡಲು ಮನುಷ್ಯ ಮಾತ್ರನಾದವನಿಗೆ ಹೇಗೆ ಸಾಧ್ಯ? ಕೆಲವು ಘಟನೆಗಳ೦ತೂ ತಿರುತಿರುಗಿ ನೆನಪಾಗಿ ಕಾಡಿ ದ.ಬ್ರಾ.ಕ್ರಿದಷ್ಟನನ್ನು ಇತ್ತೀಚೆಗೆ ದ.ದ.ಬ್ರಾ.(ದರಿದ್ರಾತಿ ದರಿದ್ರ ಬ್ರಾಹ್ಮಣ) ಕ್ರಿಷ್ಟಪ್ಪನನ್ನಾಗಿ ಮಾಡುತ್ತಿವೆ. ಮತ್ತು ಅವನು ಈ ಸ್ಥಿತಿಗೂ ಹೊ೦ದಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಕೆಳಮಧ್ಯಮ ವರ್ಗದಿ೦ದ ಬ೦ದ ಕ್ರಿಷ್ಟಪ್ಪನಿಗೆ ತಾಲೂಕಾ ಆಫೀಸಿನಲ್ಲಿ ಗುಮಾಸ್ತೆಯ ಕೆಲಸವಿತ್ತ ಅವನು ಬಿ.ಎ.ಓದಿದ ನ೦ತರ ಹಲವಾರು ವರ್ಷ್ ಕೆಲಸಕ್ಕಾಗಿ ಅಲೆದೂ ಸುಸ್ತಾಗಿ,ಲ೦ಚ ಕೊ ಸಾಧ್ಯವಿಲ್ಲದೇ ಮನಸ್ಸೂ ಇಲ್ಲದೇ, ಸ೦ಸಾರ ನಿರ್ವಹಣೆ ಮಾಡಲು ಬಹಳ ಪಾಡುಪಟ್ಟಿದ್ದ ಪಿತ್ರಾರ್ಜಿತವಾಗಿದ್ದ ನಾಲ್ಕೆಕರ ಭೂಮಿ ಟೆನನ್ಸಿ ಕಾಯಿದೆ ಪ್ರಕರ ರೈತರಿಗೆ ಸೇರಿ ಹೋಗಿತ್ತು.ಕೊನೆಗೆ ಕ್ರಿಷ್ಟಪ್ಪನಿಗೆ ಗುಮಾಸ್ತೆಯ ಕೆಲಸ ಸಿಕ್ಕಾಗ ಹೋಗಲಿ,ಇಲ್ಲೇ ಡಿಪಾರ್ಟ್ ಮೆ೦ಟು ಪರೀಕ್ಷೆ ಪಾಸುಮಾದಡಿ ಬಡ್ತಿ ಪಡೆದರಾಯಿತು ಅ೦ತ ಸಮಾಧಾನ ಪಟ್ಟುಕೊ೦ಡಿದ್ದ.ಅ೦ದರೆ ಅವನಿಗೆ ಸ್ವತಃ ಆಂತಹ ಮಹತ್ವಾಕಾಂಕ್ಷೆಗಳೇನೂ ಇರಲಿಲ್ಲ. ಆದರೆ ಆತ ಬಹಳ ಭಕ್ತಿಯಿರಿಸಿದ್ದ ಆತನ ವಯಸ್ಸಾದ ತಾಯಿಗೆ ಸ್ವಂತದ್ದಾದ ಒಂದು ಪುಟ್ಟಮನೆ ಬೇಕೆಂಬ ಆಸೆಯಿತ್ತು.ತಾಯಿಯ ಆಸೆ ಪೂರೈಸಲು ಏನಾದರೂ ಮಾಡಿ.