ಪುಟ:ನಡೆದದ್ದೇ ದಾರಿ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು / ಅತಿಥಿ

೨೫

ಹೊಣೆಗಾರಿಕೆಯ ಬಗ್ಗೆ ? ಅವರು ಸ್ವತಂತ್ರ ವಿಚಾರದವರಾಗಬೇಕು, ಗಂಡಸರ
ದಾಸ್ಯದಲ್ಲಿ ಬಿದ್ದು ಕೊಳೆಯಬಾರದು, ಗಂಡಸರ ದಬ್ಬಾಳಿಕೆಯನ್ನು ಸಹಿಸಬಾರದು.
ಗಂಡಸರ ಅಧಿಕಾರವನ್ನು ವಿರೋಧಿಸಬೇಕು. ಎಂದೆ ? ತಾನು ಎಲ್ಲಿ ಅತಿಥಿಯಾಗಿ
ಹೋದರೂ ಇದೇ ಬಗೆಯ ಭಾಷಣ ಮಾಡುತ್ತೆನೆಂದು, ಸುಮ್ಮನೆ ಇದರದೊಂದು
ಟೇಪ್ರಿಕಾಡು೯ ಮಾಡಿಸಿಬಿಡೆಂದು ಮೊನ್ನೆ ತನ್ನ ಅಣ್ಣ ಚೇಷ್ಟೆ ಮಾಡಿದ್ದನಲ್ಲವೆ?
ಅವನೂ ಅಯೋಗ್ಯ. ಅವನಿಗಾದರೂ ಏನು ತಿಳಿಯುತ್ತದೆ? ಬುದ್ದಿಯಿಲ್ಲದೆ
ಏನಾದರೊಂದು ಬೊಗಳುತ್ತಾನೆ. ಗಂಡಸಲ್ಲವೆ ಮತ್ತೆ?
"ಗಂಡಸರ ಮ್ಯಾಲ ಇಷ್ಟ್ಯಾಕ ಕೆಂಡ ಕಾರತೀರಿ ನೀವು?"-ಕಾಲೇಜಿನಲ್ಲಿ
ಚಚಾ೯ಕೂಟ ನಡೆದಾಗ ತನ್ನ ಸಹೋದ್ಯೋಗಿಯೊಬ್ಬ ಕೇಳಿದ್ದ ಮೊನ್ನೆ-ಮೊನ್ನೆ.
ಯಾಕೋ! ಗೊತ್ತಿಲ್ಲ. ಒಟ್ಟು ಗಂಡುಪ್ರಾಣಿಯನ್ನು ನೋಡಿದರೆ ತನಗೆ
ಹೇಳತೀರದ ಸಿಟ್ಟು ಬರುತ್ತದೆ. ಅವರು ಹೆಂಗಸರ ಮುಗ್ಧತೆಯ ದುರುಪಯೋಗ
ತೆಗೆದುಕೋಳ್ಳುತ್ತಾರೆಂದು, ಸರ್ವಶಕ್ತಿಯನ್ನು ಪ್ರಯೋಗಿಸಿ ತಾನದನ್ನು
ವಿರೋಧಿಸಬೇಕೆಂದು ಅನಿಸುತ್ತಿದೆ. ಈ ಪುರುಷದ್ವೇಷ ಈಗ ಹೆಚ್ಚಾಗತೊಡಗಿದೆಯೇ?
ಅಥವಾ ಮೋದಲಿನಿಂದಲೂ ಇತ್ತೋ? -ಮೋದಲು? ತಾನು ಪ್ರೋಫೆಸರ ಆಗುವ
ಮೊದಲು? ವ್ಹಯ್ಸ್ ಪ್ರಿನ್ಸಿಪಾಲ ಆಗುವ ಮೊದಲು? ಹಾಸ್ಟೆಲಿನ ವಾರ್ಡನ್ ಆಗುವ
ಮೊದಲು? ಇಪ್ಪತ್ತು ವರ್ಷಗಳ ಮೊದಲ?...ತಾನು ಎಂ.ಎಸ್.ಸಿ ಗೆ
ಓದುತ್ತಿದ್ದಾಗ?
"ಮಿಸ್ ನಾಯಿಕ, ಈ ಸರೆ ದೀಪಾವಳಿ ಸೂಟಿಯೊಳಗ ಹಂಪಿಗೆ ಟ್ರಿಪ್
ಇಡೋಣಂತ ವಿಚಾರ ಮಾಡೀವಿ. ನೀವು ಬರ್ತೀರಲ್ಲಾ?
-ಯಾರು ಕೇಳಿದ್ದು?
"ಮಿಸ್ ಲೀಲಾವತಿ, ಈ ಹಳದಿ ಸೀರೆಯೊಳಗ ನೀವು ವಂಡರ್ಫುಲ್ ಕಾಣಸ್ತೀರಿ."
-ಯಾರು ಹೇಳಿದ್ದು?
"ಮಿಸ್ ಲೀಲಾ, ಭಾಳ ದಿವಸದಿಂದ ಕೇಳಬೇಕಂದಿದ್ದ ಪ್ರಶ್ನೆ ಇವತ್ತ‌ ಧೈರ್ಯ
ಮಾಡಿ ಕೇಳಲಿಕ್ಹತ್ತೀನಿ. ನೀವು ನನ್ನ ಲೈಫ್ ಪಾರ್ಟನರ್ ಆಗತೀರಾ?
-ಒಹ್ ಎಲ್ಲಿಂದ ಬಂದಿತು ಈ ಧ್ವನಿ?
ಅದು ಬಂದದ್ದು-ಈಗಲ್ಲ, ಇಪ್ಪತ್ತು ವರ್ಷಗಳ ಹಿಂದೆ-ತನ್ನ ಪ್ರಾಕ್ಟಿಕಲ್ಸ್ ದ
ಪಾರ್ಟನರ್ ಸದಾನಂದನಿಂದ. ಎಮ್.ಎಸ್ ಸಿಯಲ್ಲಿ ಪ್ರಾಕ್ಟಿಕಲ್ಸ್ ಮಾಡುವಾಗ ತನ್ನ ಟೇಬಲ್ಮೇಟ್ ಆಗಿದ್ದ ಆತ.