ಪುಟ:ನಡೆದದ್ದೇ ದಾರಿ.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ಮರೀಚಿಕೆ ೩೧೭

  ಪೇಜಿನಲ್ಲೇ ಇಟ್ಟು, ಅಲ್ಲೇ ಆತ ಬಿಟ್ಟು ಹೋಗಿದ್ದ ಹ್ಯಾಂಡ್ ಬ್ಯಾಗಿನ ಮೇಲೆ ಪುಸ್ತಕ ಇಟ್ಟಳು.
      "ಹೋಗಿ ಬರ್ತೀರೇನು ? ನಮಸ್ಕಾರ," ಅಂತ ಆತ ಹತ್ತಿರ ಬರುತ್ತಿರುವುದನ್ನು ಕಂಡು "ನಮಸ್ಕಾರ," 
  ಅಂತ ಅವಸರದಿಂದ ಹೇಳಿ ಹೊರಟೇಬಿಟ್ಟಳು ಅಲ್ಲಿಂದ.
                                * * *   
      - ಮಧ್ಯಾಹ್ನ ಎರಡು ಗಂಟೆ. ಆಕೆ ಕೂತಲ್ಲಿ ಕೂಡಲಾಗದೆ ನಿಂತಲ್ಲಿ ನಿಲ್ಲಲಾಗದೆ ಚಡಪಡಿಸಿದಳು. ನಾಲ್ಕಕ್ಕೆ 
  ಇನ್ನೂ ಎರಡು ತಾಸು. ಏನಂತ ಫೋನ್ ಮಾಡಬಹುದು ಆತ ? ಇಂಥ ಹೋಟೆಲಿಗೆ ಬಾ ಅಂತ ? ಇಂಥ 
  ಪಾರ್ಕಿನಲ್ಲಿ ಭೆಟ್ಟಿಯಾಗೋಣ ಅಂತ ?
      ಅಲ್ಲ, ಹಾಗೆ ಒಂದು ವೇಳೆ ಭೆಟ್ಟಿ ಆಯಿತು ಅಂತಿಟ್ಟುಕೊಂಡರೆ ಮುಂದೆ ? ಆತ ನನಗೆ ನೀನು ಬೇಕು 
  ಅಂದರೆ - ?
      - ಅಂದರೇನು ? ತಾನು ಆತನಿಗೆ ತಿಳಿಸಿ ಹೇಳಬೇಕು : ನಾನು ಬಯಸಿ ಕಾದಿದ್ದ ಅಪೂರ್ವ 
  ಅನುಭವವೊಂದನ್ನು ನನಗೆ ತಂದು ಕೊಟ್ಟದ್ದಕ್ಕಾಗಿ ನಿನಗೆ ಋಣಿ. ನನ್ನ ಜೇವನವನ್ನು ನಿನ್ನ ಒಂದು ರಾತ್ರಿಯ 
  ಸಹವಾಸದಿಂದ ಇಷ್ಟು ಸುಂದರವನ್ನಾಗಿ ಮಾಡಿದ್ದೀಯ. ನಾವು ಸ್ನೇಹಿತರಂತೆ ಆಗಲೋಣ. ನನ್ನ ವರ್ತನೆ ನಿನ್ನಲ್ಲಿ 
  ಬೇರೆ ಏನಾದರೂ ನಿರೀಕ್ಷೆ ಹುಟ್ಟಿಸಿದ್ದರೆ ಅದಕ್ಕಾಗಿ ನನ್ನನ್ನು ಕ್ಷಮಿಸು. ನನ್ನ ಉದ್ದೇಶ ಅದಾಗಿರಲಿಲ್ಲ. ನನಗೆ 
  ಸಂಸಾರವಿದೆ ನಿನ್ನನ್ನು ಯಾವಾಗಲೂ ನೆನಪಿಡುವೆ, ಬಾಯ್...
      ಕಾಲಿಂಗ್ ಬೆಲ್ ಕೇಳಿ ತಟ್ಟನೆ ನಿಂತಲ್ಲೆ ನಿಂತಳು ಆಕೆ. ಇದೇನು, ಮನೆಗೇ ಬಂದನೇ ಆತ ಅಂತ ಎದೆ 
  ಒಂದು ಕ್ಷಣ ವೇಗವಾಗಿ ಬಡಿದುಕೊಂಡಿತು. ಆತನನ್ನು ಎದುರಿಸುವ ಧೈರ್ಯ ಒಮ್ಮೆಲೆ ಸೋರಿಹೋದಂತೆನಿಸಿತು.
      ಬಂದವನು ಪ್ರಕಾಶ. "ನೀ ಇವತ್ತ ಊರಿಂದ ಬಂದೀ ಅಂತ ಮಧ್ಯಾಹ್ನ ಲೀವ್ಹ್ ಹಾಕಿ 
  ಬಂದ್ಬಿಟ್ಟೆ,ಸಿನೇಮಾಕ್ಕೆ ಹೋಗೋಣ ?" ಅಂದ ಆತ, ಅವಳಿಂದ ಉತ್ತೇಜಕ ಪ್ರತಿಕ್ರಿಯೆ ನಿರೀಕ್ಷಿಸುತ್ತ.
      "ಅಂದರ ? ನೀ ಮಧ್ಯಾಹ್ನೆಲ್ಲಾ ಮನ್ಯಾಗೇ ಇರ್ತೀಯೇನು ? ಅಂದರ ನೀ ಆಫೀಸಿಗೆ ಹೋಗೋದೇ  
  ಇಲ್ಲೇನು ? ಅಂದರ -?" ಅವಳ ಧ್ವನಿ ಗಂಟಲಲ್ಲೇ ಸಿಲುಕಿತು.
      "ಅಂದರ ನಾ ಇವತ್ತ ಬಾಯಿಸಾಹೇಬರ ಹುಕುಮಿನ ಗುಲಾಮ ಅಂತ. ಹಿಂಗ್ಯಾಕಾಗೇದ ನಿನ್ನ ಮಾರಿ ? 
  ಆರಾಮಿಲ್ಲೇನು ?"