ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೮ ನಡೆದದ್ದೇ ದಾರಿ

ಅನಸ್ತದೇನು? ಹಂಗಾರ ನೀ ಇನ್ನೂ mature ಆಗಿಲ್ಲ ಅಂಧಾಂಗಾತು. ನೋಡು ಶಂಕರ, ಖರೇ ಪ್ರೀತಿ ಅಂದರ ಮನಸ್ಸಿನ ಪ್ರೀತಿ. ಈ ದೈಹಿಕ ಸಂಬಂಧದಿಂದ ಮನಸ್ಸಿನ ಪ್ರೀತಿ ಹೊಲಸು ಆಗತದ. ನನಗೆ ಅಂಥಾ ಪ್ರೀತಿ ಬ್ಯಾಡ. ನನ್ನ ಖರೇ ಪ್ರೀತಿ ಮಾಡೋವಂಥಾವನ್ನ ನಾ ಲಗ್ನಾಗ್ತೀನಿ. ಗಂಡಸು- ಹೆಂಗಸು ದೈಹಿಕ ಸಂಬಂಧ ನೆನಸಿದರ ಹೇಸಿಗೆ ಬರ್ತದ ನನಗ. ನಾವೇನು ನಾಯಿಗಳs ಹಂದಿಗಳs? ಮನುಷ್ಯರಾಗಿ ಹುಟ್ಟಿದ್ದಕ್ಕೆ ಪ್ರಾಣಿಗಳಿಗಿಂತ ಬ್ಯಾರೇ ಇರಬೇಕೋ ಬ್ಯಾಡೋ? ಇದೆಲ್ಲಾ ನಮ್ಮ ಸಮಾಜದಾಗಿನ ಕೆಟ್ಟ ಪದ್ಧತಿ. ಹೆಂಗಸಿನ್ನ ತನ್ನ ಆಳಾಗಿ ಇಟಗೋಳ್ಲಿಕ್ಕೆ ಗಂಡಸು ಹೂಡಿರೋ ಸಂಚು. ನನಗೆ ಇದು ಸೇರೋದಿಲ್ಲ ನೋಡು, ಏನಂತೀ? "

     ಕತ್ತಲಲ್ಲಿ ಶಂಕರ ನಗುತ್ತಿದ್ದುದು ಮಸುಕಾಗಿ ಕಂಡು ಆಕೆ ಒಮ್ಮೆಲೆ ಸಿಟ್ಟಾದಳು.

" ನಗತೀ ಯಾಕ?"

     "ನಾ ಎಲ್ಲೆ ನಗ್ತೀನಿ?" ಅನ್ನುತ್ತ ಆತ ಗಟ್ಟಿಯಾಗಿ ನಕ್ಕಾಗ ಆಕೆಗೆ ಅವಮಾನವಾಯಿತು.
    " ನೀಯೇನೂ ನಮ್ಮನೀ ತನಕಾ ಕಳಸ್ಲಿಕ್ಕೆ ಬರೋದು ಬ್ಯಾಡ, ನಾಯೆಲ್ಲಾ ಹೋಗ್ತೀನಿ ಒಬ್ಬಾಕೀನೇ" - ಅಂತ ಆಕೆ ಬಿರಬಿರನೆ ಮುಂದೆ ನಡೆದಳು.
    "ಏ ಶಾಂತೀ, ತಡೀಯೇ.... ಸಿಟ್ಟಾಗಬ್ಯಾಡ ಮಾರಾಯಳ, ನಂದು ತಪ್ಪಾತು. ನೀ ಹೇಳಿದ್ದೆಲ್ಲಾ ಅಗದೀ ಕರೆಕ್ಟ್...."
     - ಶಂಕರ ಹಿಂದಿನಿಂದ ಕೂಗುತ್ತಲೇ ಇದ್ಧ.
                          *  *  *  

"ಶಂಕರ, ನೀ ಎಷ್ಟೇ ಹೇಳಿದ್ರೂ ನನಗ ನಿಮ್ಮವ್ವನದೇ ಹೆದರಿಕಿ. ಆಕೀಗೆ ಮೊದ್ಲಿನಿಂದ್ಲೂ ನನ್ನ ಕಂಡರ ಆಗೂದಿಲ್ಲ. ಆಕೀಗೆ ನಮ್ದು ವಿಷಯ ಗೊತ್ತಾದರ ಏನಂತಾಳೋ."

        "ಏನೂ ಅನ್ನೂದಿಲ್ಲ ಶಾಂತೀ. ಒಂದ ವ್ಯಾಳ್ಯಾ ಏನರೆ ಅಂದಳು ಅಂತ ತಿಳಕೋ. ಆಕೀನ್ನ ನಾಯೇನು ಕೇಳೂದಿಲ್ಲ. ಶಾಂತೀ, ನಾ ನಿನ್ನ ಭಾಳ- ಭಾಳ ಪ್ರೀತಿ ಮಾಡ್ತೀನಿ. ನಾ ನಿನ್ನ ಲಗ್ನಾ ಆಗ್ಲಿಕ್ಕೆ ಈ ಜಗತ್ತಿನ್ಯಾಗಿನ ಯಾವ ಶಕ್ತೀನೂ ಅಡ್ಡ ಬರೂದಿಲ್ಲ. ನಾ ಎಲ್ಲ face ಮಾಡ್ತೀನಿ ನಿನ್ನ ಸಲುವಾಗಿ."
    - ಅವಳ ಕೈಮೇಲೆ ಕೈ ಹಾಕಲು ಆತ ಕೈ ಮುಂದೆ ಮಾಡಿದಾಗ ಒಂದು ಕ್ಷಣ ಹಿಂತೆಗೆದು, ನಂತರ ಕೈನೀಡಿ, ಆತ ತನ್ನ ಕೈ ಹಾಕುತ್ತಿದ್ದಂತೆ ತಟ್ಟನೆ ಆಕೆ ಕೈ ಹಿಂತೆಗೆದುಕೊಂಡಳು.
     "ನಾಯೇನ ಅಸ್ಪೃಶ್ಯರವಾ ಏನs? ಹಿಂಗ್ಯಾಕ ಮೈಲಿಗಿ ಆದವರ್ ಹಾಂಗ ಮಾಡ್ತೀ?"