ಪುಟ:ನಡೆದದ್ದೇ ದಾರಿ.pdf/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೪

ನಡೆದದ್ದ ದಾರಿ

- ಜಾತಿ-ಕುಲ ಬಿಟ್ಟು ಈತನನ್ನು ಲಗ್ನವಾಗಿದ್ದಕ್ಕೆ ಬಂಧು-ಬಳಗ,
ಸ್ನೇಹಿತರು ಪರಿಚಿತರು ಎಲ್ಲರಿಂದ ದೂರವಾದವಳ ನಾನು. ರಂಗದ ಮೇಲೆ
ನನ್ನ ಅಭಿನಯ ನೋಡಿ ಹೊಗಳುವ ಜನ ಹಿಂದೆ ನನ್ನ ಬಗ್ಗೆ ಆಡಿಕೊಳುತ್ತಾರೆ.
ನನ್ನ ಮನೆಯಲ್ಲಿ , ಈ ಗೂಡಿಗೆ ಮನೆ ಅನ್ನುವದಾದರೆ , ಯಾವ
ಹಬ್ಬಹರಿದಿನಗಳೂ ನಡೆಯುವುದಿಲ್ಲ : ಗೌರಿ- ಗಣೇಶರ ಪೂಜೆಗೆ ಇಲ್ಲಿ
ಆರಿಷಿಣ ಕುಂಕುಮಕ್ಕೆಂದು ಯಾವ ಮುತ್ತ್ಯದೆಯೂ ಬರುವುದಿಲ್ಲ ; ಯಾವ
ಆತಿಥಿ - ಆಭ್ಯಾಗತರೂ ಇಲ್ಲಿ ಬಂದು ಇದ್ದು ಉಪಚಾರ ಪಡೆಯುವಂತಿಲ್ಲ ;
ನಾನೆಂದೂ ಗಂಡನೆನ್ನುವವನನ್ನು ಸೀರೆಗಾಗಿ, ಒಡವೆಗಾಗಿ, ಸಿನೆಮಾಕ್ಕಾಗಿ,
ಸಂಜೆ ವಾಕಿಂಗಿಗಾಗಿ, ಯಾತಕ್ಕಾಗೆಯೂ ಕಾಡಿಸಿ ಪೀಡಿಸುವ ಸುಖದ ಅನುಭವ
ಪಡೆದಿಲ್ಲ ... ಯಾರ ತ್ಯಾಗ ದೊಡ್ಡದು?
ಐದಾರು ವರ್ಷಗಳ ಹಿಂದಿನ ದಿನಗಳು ಆವು. ಕಮಲಾ ಮಾನಸಿಕವಾಗಿ ಬಹಳ
ಹಿಂಸೆಯನ್ನನುಭವಿಸುತ್ತಿದ್ದಿರಬೇಕು ಆಗ. ಶಶಿಗೆ ನೆನಪಿದೆ, ಆ ದಿನಗಳಲ್ಲಿ ಕಮಲಾ
ಬಹಳ ವಿನೀಮಿಕ್ ಆಗಿದ್ದಳು. ಶಶಿ ಅನೇಕ ಸಲ ಒತ್ತಾಯಿಸಿದ ನಂತರ ಕೊನೆಗೊಮ್ಮೆ
ಅವಳೊಂದಿಗೆ ದೊಡ್ದಾಸ್ಪತ್ರೆಗೆ ಹೋಗಿ ಪೂರ ಪರೀಕ್ಷೆ ಮಾಡಿಸಿಕೊಳ್ಳಲು
ಒಪ್ಪಿದ್ದಳು. ಆಗ ಆಕೆಯ ಹೊಟ್ಟೆಯಲ್ಲಿ ಟ್ಯೂಮರ್ ಬೆಳದಿದೆಯೆಂದೂ ತಕ್ಷಣ
ಆಪರೇಶನ್ ಮಾಡಿ ತೆಗೆಯಬೇಕೆಂದೂ ಗೊತ್ತಾಯಿತು. ಕಮಲಾ ಯಾಕೋ
ದವಾಖಾನೆ- ದಾಕ್ಟರುಗಳಿಗೆ ಮೊದಲಿನಿಂದಲೂ ಹೆದರುತ್ತಿದ್ದಳು. ಆಪರೀಶನ್ನಿನ
ಹೆಸರು ಕೆಲಿಯಂತೂ ಎದೆ ಒಡೆದುಕೊಂಡು ಬಿಟ್ಟಿದ್ದಳು. ಶಶಿ ಎಷ್ಟು ಹೇಳಿದರೂ
ಆಕೆಯ ಹೆದರಿಕೆ ಕಡಿಮೆಯಾಗಲಿಲ್ಲ. ಕೊನೆಗೆ ಆಪರೇಶನ್ ಆಗುವವರೆಗೂ
ಶಿವಮೂರ್ತಿ ಆಕೆಯ ಹತ್ತಿರವೇ ಇರುತ್ತೆನೆಂದು ಮಾತುಕೊಟ್ಟು ನಂತರ ಆಕೆ
ಒಪ್ಪಿದ್ದಳು. ಶಶಿಗೆ ಆಶ್ಚರ್ಯವೆನ್ನಿಸಿತ್ತು - ಎಂಥೆಂಥ ಡಾಕ್ಟ್ರುಗಳಿಗಿಂತ ಈ
ಶಿವಮೂರ್ತಿ ಹೆಚ್ಚಿನ ಔಷಧವಾದನಲ್ಲ ಈಕೆಯ ಜಡ್ಡಿಗೆ ಅಂತ. ಶಿವವೂರ್ತಿಯ
ಸಾಮೀಪ್ಯ ಮಾತ್ರದಿಂದ ಕಮಲಾಗೆ ಎಂತಹ ದ್ಯೆರ್ಯ- ಸಮಾಧಾನ ಆನಿಸುತ್ತಿತ್ತೆಂದು
ಶಶಿಗೆ ಆಗ ಕಲ್ಪನೆಗೂ ನೆಳುಕದ ವಿಷಯವಾಗಿತ್ತು;
"ಮೂರ್ತಿ ನನ್ನ ಹತ್ತಿರ ಇದ್ದರೆ ಸಾಕು. ನಾನು ಸತ್ತರೂ ಚಿಂತೆಯಿಲ್ಲ.
ಆದರೆ ಮೂರ್ತಿ ಇಲ್ಲದೆ ಆಪರೇಷನ್ ನಡೆದು ಒಂದು ವೇಳೆ ಏನಾದರು
ಹೆಚ್ಚುಕಮ್ಮಿ ಆದರೆ ಕೊನೆಗಳಿಗೆಯಲ್ಲಿ ಮೂರ್ತಿಯ ಮುಖ ನೋಡಿದೇ ನಾ
ನು ಸಾಯಬೇಕಾದರೆ ಸತ್ತ ನಂತರವೂ ನಾನು ಅತೃಪ್ತಲಾಗಿರಬೇಕಾಗುತ್ತದೆ.
ಮೂರ್ತಿ ಬತಿಯಿದ್ದಾಗ ಸಾವು ಬಂದರೂ ಸ್ವಾಗತಿಸಲು ನಾನು ಸಿದ್ಧಳು".