ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨೦
ನಡೆದದ್ದೇ ದಾರಿ

ನಾನು ಕಿಡಿಕಿಯ ಹೊರಗೆ ಕಾಣುವ ಮುಂಬಯಿಯ ಕಪ್ಪು ಆಕಾಶವನ್ನೇ
ನೋಡುತ್ತ ಎಚ್ಚರವಾಗಿರುತ್ತೇನೆ.ಅನೇಕ ಸಂಜೆಗಳು ಆತ ಬರುತ್ತಾನೆಂದು
ಬಾಲ್ಕನಿಯಲ್ಲೇ ನಿಂತಿರುತ್ತೆನೆ. ಸಂಜೆ ಸದ್ದಿಲ್ಲದೆ ಸರಿದುಹೋದಾಗ
ಒಳಬರಲೂ ಶಕ್ತಿಯಿಲ್ಲದ ಹಾಗೆ ಕಾಲುಗಳು ಜಡವಾಗಿ ಬಿಟ್ಟಿರುತ್ತವೆ.
'ಇತ್ತಿತ್ಲಾಗ ನೀ ಸರಿಯಾಗಿ ಊಟಾನೇ ಮಾಡೊದಿಲ್ಲಲ್ಲ ಆಂಟಿ?'
ಅನ್ನುತ್ತಾಳೆ ನೀಲಾ, ನನಗೆ ಊಟ-ನಿದ್ರೆ, ಕೆಲಸ-ಜೀವನವೇ
ಬೇಸರವೆನಿಸತೊಡಗಿದೆ. ನನು ನಂಬಿದ್ದ ಮೌಲ್ಯಗಳು ಒಮ್ಮಲೆ ಪೂ ಪೊಳ್ಳಾಗಿ
ನನ್ನ ಕಾಲ ಕೆಳಗಿನ ನೆಲವೇ ಕುಸಿಯುತ್ತಿರುವಂತೆ ಅನಿಸುತ್ತದೆ. ಇನ್ನು ಈ
ಪರಿಸ್ಥಿತಿ ತಾಳುವುದು ಅಶಕ್ಯವೆನಿಸಿ ನಿನ್ನೆ ಖಟ್ಟಿಗೆ ಹಚ್ಚಿ ಮೂರ್ತಿಯನ್ನು
ಕೇಳಿಯೇ ಬಿಟ್ಟೆ. ಆತ ನನ್ನನು ಲಗ್ನವಾಗಿದ್ದ ನಿಜವಾಗಿದ್ದ ಮೇಲೆ ನನ್ನ
ಆಸೆ -ಆಕಾಂಕ್ಸಗಳನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸುವುದು ಆತನ
ಕರ್ತವ್ಯವಲ್ಲವೇ? ಬಂಧು-ಬಾಂಧವರಿಂದ, ಸ್ವಜಾತಿಯವರಿಂದ, ನಿಕಟ
ಸ್ನೇಹಿತ ಮಾರ್ಗದಿಂದ ಇಡಿಯ ಸಮಾಜದಿಂದ ದೂರವಗಿ ಆತನನ್ನು
ಕಟ್ಟಿಕೊಂಡು ಸರ್ವಾಪ್ರಣ ಮಾಡಿದ್ದಕ್ಕೆ ಪ್ರತಿಯಾಗಿ ಆತನ
ಸಹವಾಸವಾದರೂ ನನಗೆ ಸಮಾಧಾನವಾಗುವಷ್ಟು ಸಿಗಕೂಡದೇ?
'ನೀನೇನು ನನಗೆ ಸರ್ವಾರ್ಪಣ ಮಾಡಿದ್ದು? ಅದೆಲ್ಲಾ ಮೊದಲೇ
ಯಾರಿಗೋ ಅರ್ಪಣ ಆಗಿತ್ತು. ಖಜಾನೆ ಖಾಲಿಯಾದ ಮೇಲೆ ಲೂಟಿ
ಮಾಡಿದವನ ಹಾಗೆ ನನ್ನ ಕರ್ಮ' -ಅಂದುಬಿಟ್ಟ ಆತ.
ಈ ಮೂರ್ತಿಗೇಕೆ ತಿಳಿಯುವುದಿಲ್ಲ? ಆರೇಳು ತಿಂಗಳು ನನ್ನಗೆ
ಬೇರೊಬ್ಬನ ಸಹವಾಸವಾದದ್ದು ಖರೆ. ಆದರೆ ಅದು ಮೂರ್ತಿಯ ಸಹವಾಸ
ನನ್ನಗೆ ಲಭಿಸುವ ಮೊದಲೇ. ನಂತರ ಅದೊಂದು ಕೆಟ್ಟ ಕನಸೆಂದು ನಾನು
ಮರೆತು ಬಿಟ್ಟೇ ಹಳೆಯ ಕಾಲವಾಗಿ ಹೋಯಿತು. ಆ ಮನುಷ್ಯನ ಬಗ್ಗೆ
ನನಗಿದ್ದುದು ಬರಿಯ ಇನ್ ಫ್ಯಾಚ್ಯುಯೇಶನ್.ಅದು
ಪ್ರೀತಿ ಅಲ್ಲ... ಅದು ಪ್ರೀತಿ ಅಲ್ಲ ವೇ ಅಲ್ಲ ... ನಾನು ನಿಜವಾಗಿ ಪ್ರೀತಿಸಿದ್ದು,ನಿಜವಾಗಿ ಪೂರ್ಣ
ಮನಸ್ಸಿನಿಂದ ಸರ್ವಪಣ ಮಾಡಿದ್ದು ಮೂರ್ತಿಯೊಬ್ಬನಿಗೆ ಮಾತ್ರ...
ನನ್ನ ಆರೇಳು ತಿಂಗಳ ಅವಧಿಯ ಬೇರೊಬ್ಬನ ಸಹವಾಸ ಇಷ್ಟೊಂದು
ಕಾಡುತ್ತದಲ್ಲ ಮೂರ್ತಿಯನ್ನು,ತನ್ನ ಇಡೀ ಜನ್ಮದ ಅವಧಿಯ
ಬೇರೊಬ್ಬಳೊಂದಿನ ಸಹವಾಸದ ಬಗ್ಗೆ,ಅದಕ್ಕಾಗಿ ನನ್ನಗೇನು
ಅನಿಸುತ್ತಿರಬಹುದೆಂಬುದರ ಬಗ್ಗೆ, ಆತನೆಂದೂ ಏನೂ ವಿಚಾರಿಸಿಯೇ
ಇಲ್ಲವೇ?