ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದ್ಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... ೪೨೧

ಮೂರ್ತಿ ‍ಏನೇ ಅಂದರೂ ನನ್ನನ್ನು ಎಷ್ಟೇ ಅಲಕ್ಷಿಸಿದರೂ ಅದಕ್ಕಾಗಿ ನನಗೆಷ್ಟೇ ಅಸಮಾಧಾನವಾಗಿದ್ದರೂ ಆತನನ್ನು ನೋಡಿದ ತಕ್ಷಣ ನನಗೆ ಎಲ್ಲ ಮರೆವಾಗಿ ಬಿಡುತ್ತದೆ. ಆತನ ಅಗಲವಾದ ಎದೆಯಲ್ಲಿ ಮುಖವಿಟ್ಟು ಆತನನ್ನು ಬಳಸಿ ಆತನಿಗೆ ಹತ್ತಿಕೊಂಡು ಮಲಗಿದಾಗ ಇಂದಿಗೂ ನನಗೆ ಮಧುಚಂದ್ರದ ರಾತ್ರಿಗಳದೇ ಅನುಭವ...." -ಕಮಲಾಳ ಈ ದೌರ್ಬಲ್ಯ ಬಹುಶಃ ಮೂರ್ತಿಗೆ ಗೊತ್ತಿತ್ತು. ತಾನವಳಿಗೆ ಏನೇ ಅಂದರೂ, ಅವಳೊಂದಿಗೆ ಹೇಗೆಯೇ ನಡೆದುಕೊಂಡರೂ ತನಗೆ ವಿರೋಧವಾಗಲೀ, ಆಕ್ಷೇಪಣೆಯಾಗಲೀ ಬರುವುದಿಲ್ಲೆಂದು ಆತನಿಗೆ ತಿಳಿದಿತ್ತು. ಅದಕ್ಕೆಂದೇ ಇರಬೇಕು, ತನಗೊಂದು ಮಗುವಾದರೂ ಆಗಬಾರದೇ ಅಂತ ಕಮಲಾ ಹಂಬಲಿಸುತ್ತಿದ್ದಳು. ಶಶಿಗೆ ನೆನಪಿದೆ, ಆಕೆಯೇ ಅನೇಕ ಸಲ ಕಮಲಾನನ್ನು ತನಗೆ ಪರಿಚಯದ ಗೈನಕಾಲಜಿಸ್ಟ್ ಕಡೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದಳು.ಆದರೆ ಕಮಲಾಳ ದುರ್ಭಾಗ್ಯ. ಮೂರು ನಾಲ್ಕು ಸಲ ಗರ್ಭ ನಿಂತರೂ ಮೂರು ತಿಂಗಳಾಗುವುದರೊಳಗೇ ಅವಳಿಗೆ ಗರ್ಭಪಾತವಾಗಿ ಬಿಡುತ್ತಿತ್ತು. ಕೊನೆಗೆ ನಿರಾಶಳಾದ ಕಮಲಾ ತನಗಿನ್ನು ಈ ಜನ್ಮದಲ್ಲಿ ಮಕ್ಕಳ ಭಾಗ್ಯವಿಲ್ಲವೆಂದು ಒಪ್ಪಿ ಸುಮ್ಮನಾಗಿ ಬಿಟ್ಟಿದ್ದಳು. ಮಕ್ಕಳಾಗಿದ್ದರೆ ಬಹುಶಃ ಶಿವಮೂರ್ತಿ ಹಾಗೂ ಕಮಲಾರ ಮಧ್ಯೆ ಬರಬರುತ್ತ ಬಿಡತೊಡಗಿದ್ದ ಬಿರುಕು ಸ್ವಲ್ಪವಾದರೂ ಸಹ್ಯವಾಗುತ್ತಿತ್ತೇನೋ ಅಂತ ಶಶಿಗೂ ಅನೇಕ ಸಲ ಅನ್ನಿಸಿತ್ತಿತ್ತು ಶಶಿಗೆ : "ಮೊನ್ನೆ ರಾತ್ರಿ ನನ್ನ ಜೀವನದ ಮಹಾ ದುರ್ದಿನ. ನಾಲ್ಕು ದಿನಗಳ ಮಟ್ಟಿಗೆ ಕಂಪನಿ ಕೊಲ್ಹಾಪುರಕ್ಕೆ ಹೋಗಿತ್ತು ನಾಟಕ ಪ್ರದರ್ಶನಕ್ಕಾಗಿ. ಮೈಯಲ್ಲಿ ಆರಾಮಿರಲಿಲ್ಲವೆಂದು ಮೂರ್ತಿಗೆ ಈ ಟ್ರಿಪ್ಪಿಗೆ ಬರಲಾಗಿರಲಿಲ್ಲ. ಅವನಿಲ್ಲದೆ ಹೋಗುವುದು ನನಗಿಷ್ಟವಿರಲಿಲ್ಲವಾದರೂ ನಾನು ಹೋಗದಿದ್ದರೆ ನಾಟಕಗಳು ಸಪ್ಪೆಯಾಗುವವೆಂದು ಮ್ಯಾನೇಜರ್ ಗಾಡಗೀಳ ಹಾಗೂ ಇತ್ತೀಚೆಗಷ್ಟೆ ನಮ್ಮ ನಾಟಕಗಳಲ್ಲಿ ಗೌರವನಟನಾಗಿ ಅಭಿನಯಿಸತೊಡಗಿದ್ದ ವಿನೋದ ಸಹಾನಿ ಇಬ್ಬರೂ ಒತ್ತಾಯಿಸಿದ್ದರಿಂದ ನಾನು ಹೋಗಿದ್ದೆ. ನಾಲ್ಕೇ ದಿನ ಹೋಗಿದ್ದರೂ ಮೂರ್ತಿಯನ್ನು ಕಾಣದೆ ಯುಗವಾದ ಹಾಗೆ ಅನ್ನಿಸಿತ್ತು. ಬಂದಕೂಡಲೆ ಆತನಿಗೆ ಫೋನ್ ಮಾಡೋಣಅಂದುಕೊಂಡೆ. ಅದರೆ ಅಷ್ಟರೊಳಗೆ ಆತನೇ ಬಂದ. 'ನಿನ್ನನ್ನು ನೋಡದ ಎಷ್ಟೋ ದಿನಾ ಆಧಾಂಗ