ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೪ ನಡೆದದ್ದೇ ದಾರಿ

ಸಹಿಸುವ ಗಟ್ಟಿತನ ನಾನಲ್ಲಿ ಉಳಿದಿರಲಿಲ್ಲವಾದ್ದರಿಂದ, ಈ ಎಲ್ಲ ಕ್ರಿಯೆಯಲ್ಲಿ ನಾನು ಅಗಾಧ ಮೌನ ತಾಳಿ ಬಿಡುತ್ತಿದೆ.

       ಆದರೆ ಇಂದಿನ ಪರಿ ಬೇರೆಯದೇ ಬಗೆದೆನಿಸ ತೊಡಗಿತು. ಪೂರ್ತಿ ಧಿಗಂಬರನಾಗಿ ನನ್ನೆದುರು ನಿಂತು ಮಹಾರಾಜನ ಠೀವಿಯಲ್ಲಿ ಕೈ ಚಾಚಿ ಆತ ಆಜ್ಞಾಪಿಸುವ ಹಾಗೆ ಹೇಳಿದ, 'ಗೆಟ್ ಅಪ್, ಗೋ ಅಂಡ್ ಫೇತ್ಚ್ ಥಟ್ ನೀಸ್ ಆ ಯೌರ್ಸ್'. ಕಂಕನ್ನು ಬಿಡುತ್ತ ನಾನು ಕೇಳಿದೆ, 'ಏನಂದಿ ಮೂರ್ತಿ ಶುದ್ದಿ ಮ್ಯಾಲಿದ್ದಿಯೋ ಇಲ್ವೋ? ಆತ ಪಶುವಿನಹಾಗೆ ಗರ್ಜಿಸಿದ 'ನಾ ಷಿದ್ಧಿ ಮ್ಯಾಲಿದ್ದೀನಿ ನೀವೇಲ್ಲಾರು ಬೇಶುದ್ದ ಆಗಿ ಬೆಹವೇ ಮಾಡ್ಲಿಕ್ಹತ್ತೀರಿ ನಿಮನ್ನ ಷಿದ್ಧಿ ಮ್ಯಾಲ ತರಬೇಕಾಗೇದ. ಅದಕ್ಕ ಹೇಳಿದ, ಕರಕೊಂಡು ಬಾ ಹೋಗು ಆ ನೀಲಿನ್ನ. ನೀ ಎದ್ದು ಹೋಗ್ತಿಯೋ ಏನು ನಾನಾ ಹೋಗಾಲ್ಯೊ?'
       ಒಂದು ಕ್ಷಣ ನನ್ನ ಬುದ್ದಿಗೆ ಮಂಕು ಕವಿಯಿತು. ಮರು ಕ್ಷಣ ಆತನ ಮಾತಿನ ಅರ್ಥ ಹೊಳೆದು ಮಯ್ಯಲ್ಲಾ ಬೆಂಕಿ ಆಯಿತು. ಆದರೆ ನಾನೇನು ಮಾಡಬಹುದಿತ್ತು? ತಿರುಗಿ ಮಾತಾಡಿದರೆ ಆತ ನನ್ನನ್ನು ಹೊಡೆಯಲು, ಹಿಂಸಿಸಲು, ಸಾಯಿಸಲು ಸಿದ್ಧನಿದ್ದ ಹಾಗೆ ಕಾಣಿಸಿತು.ಚಲ್ಲ್ಯಾನ್ಜ್ ಮಾಡಿದರೆ ನನ್ನನ್ನು ಒದ್ದು ಕೆಡವಿ ಸೀದಾ ಹೋಗಿ ಒಳಗೆ ಮಲಗಿರುವ ನೀಲಾಳನ್ನು ಹಿಡಿದೆಳೆಯಲು ತಯಾರಿದ್ದ ಹಾಗೆ ಕಾಣಿಸಿತ್ತು. ಆತನನ್ನು ತಡೆಯಲು ಮನೆಯಲ್ಲಿ ಬೇರಾರು ಗಂಡಸಿರಲಿಲ್ಲ. ಹಾಗೆಂದೇ ಇಷ್ಟು ಉರಿಯುತ್ತಿರುವನಲ್ಲವೇ ಈತ?ನನಗೂ ಒಬ್ಬ ವಯಸ್ಸಿಗೆ ಬಂಡ ಮಗನಿದ್ದಿದ್ದರೇ ಹೀಗೆಲ್ಲ ಆಡುವ ಧೈರ್ಯವಾಗುತಿದ್ದೀ ಈತನಿಗೆ?.... ನಾನು ಅನುನಯದಿಂದ ಆತನ ಕೈ ಹಿಡಿದು ಮಂಚದ ಕಡೆ ಕರೆದೊಯಅಳೆತೆನಿಸುತ್ತ ಅಳುದನಿಯಲ್ಲಿ ಅಂದೇ, 'ಹಿಂಗ್ ಯಾಕ ಮಾಡ್ತಿ, ಮೂರ್ತಿ? ನೀಲಾ ನಿನ್ನ ಮಗಳ ಸಮಾನ, ಮಾತಾಡಬಾರದು.'
       ಬಿರುಸಾಗಿ ಕೈ ಕೊಸರಿಕೊಂಡು ಆತ ಮತ್ತೆ ಒದರಿದ, 'ನನ್ನ ಮಗಳ ಹೆಸರು ತಗದರ ನಿನ್ನ ಕುತ್ತಿಗಿ ಹಿಚುಕಿ ಬಿಡ್ತೀನಿ. ಈ ರಾಂಡಿ ಮಧ್ಯಾಹ್ನ ಸಿನಿಮಾ ನೋಡಿ ಏನೇನೂ ಮಜಾಮಾಡಿ ಬಂದಾಳೋ ಯಾರ್ರಿಗ್ಗೊತ್ತು? ಎದುರಿನ ಮಣಿ ಪ್ರಕಾಶರಾಜೋಡಿ ಮಲಗಿದರೆ ನಡೀತದ ಆಕಿಗೆ.ಮತ್ತ ನನ್ನ ಜೋಡಿ ಮಲಗಿದರೆ ಏನಾಗ್ತದ?ಕರಿ ಆಕಿನ. ನಾನು ಒಂದು ಕೈ ನೋಡ್ತೀನಿ.....'