೪೫೦ ನಡೆದದ್ದೇ ದಾರಿ
ಹಾಗಿರುವ ಕನಸು ಕಾಣುತ್ತಿದ್ದೆ.ಆದರೆ ಈ ವಿಷಯದಲ್ಲಿ ಮೂರ್ತಿಗೆ ನೆನಪಿನ ಶಕ್ತಿ ಕಡಿಮೆ.ಹಿಂದೆಲ್ಲ ಆತ ಇಂಥ ದಿನಗಳಲ್ಲಿ ನನ್ನೊಂದಿಗಿರದಿದ್ದರೆ ಅತ್ತು ಕರೆದು ಒಂದಿಷ್ಟು ರಂಪ ಮಾಡಿ ಆತ ರಮಿಸಿ ಮುದ್ದು ಗರೆದ ನಂತರವೇ ಸುಮ್ಮನಾಗುತ್ತಿದ್ದೆ.ಇತ್ತೀಚಿನ ವರ್ಷಗಳಲ್ಲಿ ಆತ ರವಿಸುವುದೂ,ಮುದ್ಧುಗರೆಯುವುದೂ ಬಿಟ್ಟು ಬಿಟ್ಟ ನಂತರ ನಾನೂ ಆಳುವುದು-ಹಟ ಹಿಡಿಯುವುದು ಬಿಟ್ಟು ಬಿಟ್ಟಿದ್ದೆ .ಆದರೆ ಎಲ್ಲಾ ಬಿಟ್ಟಿದ್ದರೂ ಮೂರ್ತಿಯ ಸಾಮೀಪ್ಯದ ಆಸೆ ಮಾತ್ರ ನನ್ನಲ್ಲಿನ್ನೂ ಪ್ರಬಲವಾಗಿ ಉಳಿದೇ ಇತ್ತು. ಈ ಸಲ ಯಾಕೋ ನಮ್ಮ ಲಗ್ನದ ಹುಟ್ಟುಹಬ್ಬದಂದು ಆತನೊಂದಿಗೆ ಇರಬೇಕು ಅಂತ ಪ್ರಬಲವಾಗಿ ಅನ್ನಿಸಿತ್ತು.ಅದರೊಂದಿಗೆ ಹಿಂದಿನ ಆ ತೀವ್ರ ಸೆಳೆತ, ಹುಚ್ಚು , ಉನ್ಮಾದ, ಇಡಿಯ ಜಗತ್ತಿನ ವಿರೋಧವನ್ನೇ ಎದುರಿಸಿಯೇವೆಂಬ ಗಟ್ಟಿತನ, ಜೊತೆಗಿರುವಾಗ ಅನಿಸುವ ಸಾರ್ಥಕತೆ -ಎಲ್ಲವನ್ನೂ ಮೆಲುಕು ಹಾಕುವ ಇಚ್ಛೆಯಾಗಿತ್ತು.ಆದಕ್ಕೆಂದೇ ನಾಲ್ಕಾರು ದಿನ ಮೊದಲಿನಿಂದಲೇ ಮೂರ್ತಿಗೆ ಆ ಬಗ್ಗೆ ಹೇಳುತ್ತ ಬಂದಿದ್ದೆ. ಆತನೂ ಶನಿವಾರ ನನ್ನೊಂದಿಗೆ ಕಳೆಯುವ ಮಾತು ಕೊಟ್ಟಿದ್ದ.ನಾನು ಆ ದಿನ ಮುಂಜಾನೆ ಬೇಗನೆ ಎದ್ದು ತಲೆಗೆ ಸ್ನಾನ ಮಾಡಿ ಸಿಹಿ ತಯಾರಿಸಿ ನಮ್ಮ ರೂಮನ್ನು ಅಲಂಕರಿಸಿ ನಾನೂ ಶೃಂಗಾರವಾಗಿ ಮೂರ್ತಿಗಾಗಿ ಉಡುಗೊರೆಗಳೊಂದಿಗೆ ಕಾಯುತ್ತ ಕೂತೆ, ಹತ್ತಾರು ವರ್ಷಗಳ ಹಿಂದೆ ಕಾಯುತ್ತಿದ್ದ ಹಾಗೆಯೇ.
ಮುಂಜಾನೆ ಸದ್ದಿಲ್ಲದೆ ಸರಿಯಿತು ಮಧ್ಯಾಹ್ನವೂ ಕಳೆಯಿತು,'ನೀ ಊಟಾನರೆ ಮಾಡು ಅಂಟೀ,ಎಷ್ಟೊತ್ತು ಉಪವಾಸ ಇರಿತ್ತೇ?' ಅಂದಳು ನೀಲಾ. ಊಟ ಮಾಡಲು ಮನಸ್ಸು ಬರಲಿಲ್ಲ.ಮೂರ್ತಿಗೆ ಏನೋ ತೀರ ಅರ್ಜೆಂಟಾದ ಕೆಲಸವಿರಬೇಕು. ಇನ್ನು ಆತ ಸಂಜೆಗೇ ಬರುವುದು ಅನ್ನಿಸಿ ಒಂದು ಕಪ್ಪು ಕಾಫಿ ಕುಡಿದು ಹಾಗೆಯೇ ಮಲಗಿದೆ. ಸಂಜೆಯೂ ಹಾಗೆಯೇ ಕಳೆಯಿತು.ರಾತ್ರಿಯಾಗತೊಡಗಿತು. ಮೂರ್ತಿ ಏಕೆ ಬರಲಿಲ್ಲ ? ಮೈಯಲ್ಲಿ ಆರಾಮವಿರದಿದ್ದರೆ ಫೋನ್ ಮಾಡಿ ತಿಳಿಸಬಹುದಿತ್ತು. ಏನಾಯಿತು ನನ್ನ ಮೂರ್ತಿಗೆ ? ಬರುತ್ತೇನೆಂದು ಮಾತು ಕೊಟ್ಟು ಯಾಕೆ ಬರಲಿಲ್ಲ ಅವನು? ನಾನು ಹುಚ್ಚಿಯ ಹಾಗೆ ಕಾಯುತ್ತೇನೆಂದು ಆತನಿಗೆ ಗೊತ್ತಿಲ್ಲವೇ ? ಊಟ-ನಿದ್ದೆ ಬಿಟ್ಟು ಆತ ಬರುವ ದಾರಿಯಲ್ಲಿ ಕಣ್ಣುನೆಟ್ಟು, ಜೇವನೆಟ್ಟು ಕೂತಿರುತ್ತೇನೆಂದು ಗೊತ್ತಿಲ್ಲವೇ? -ಆ ರಾತ್ರಿ ಸದ್ದಿಲ್ಲದೆ ನನ್ನ ದಿಂಬು ತೋಯುತ್ತಿತ್ತು .