ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೦ ನಡೆದದೇ ದಾರಿ

                                ಹರಿದು ಬಾ ತಾಯಿ


 ರಾಜಾಪುರ ಶಾಹಿಪುರ ಜಿಲ್ಲೆಗಳ ಗಡಿಯಲ್ಲಿನ ಒಂದು ಚಿಕ್ಕ ಹಳ್ಳಿ ಹನಮಾಪುರ. ವರ್ಷದಲ್ಲಿ

ಹನ್ನೆರಡೂ ತಿಂಗಳು ಅಲ್ಲಿ ಬೇಸಿಗೆ. ಮಳೆಯನ್ನೆಂತೂ ಹಲವಾರು ವರ್ಷಗಳ ಕಾಲ ಅಲ್ಲಿನವರು ಕಂಡಿರುತಿರಲಿಲ್ಲ . ಎಲ್ಲಿ ನೋಡಿದಲ್ಲಿ ಉದ್ದಕ್ಕೂ-ಅಗಲಕ್ಕೂ ಚಾಚಿರುವ ಕಪ್ಪು ಎರೆಮಣ್ಣಿನ ಬಯಲು. ಕಲ್ಲುಗುಡ್ಡಗಳು . ಊರ ಹೊರಗಿನ ಕೆರೆಯ ನೀರೇ ಕುಡಿಯಲು ಬಳಸಲು ಗತಿ. ಕಡುಬೇಸಿಗೆಯಲೀ, ಕೆರೆ ಬತ್ತಿದಾಗ ದನಕರುಗಳು,ಮನುಷ್ಯರು, ಗಿಡಗಂಟಿಗಳು ಎಲ್ಲವೂ - ಎಲ್ಲರೂ ಸಾಯತೊಡಗುತ್ತಿದ್ದರು. ಇದೊಂದು ಆನಾಹುತವೆಂದಾಗಲೀ ದುರಂತವೆಂದಾಗಲೀ ಊರಿನ ಜನರೆಂದೂ ವಿಶೇಷ ತಲೆಕೆಡಿಸಿಕೊಂಡವರಲ್ಲ . ಇದೇ ಪ್ರಕ್ರುತಿ ನಿಯಮ, ಇದೇ ಜೀವನ , ಎಂದು ಸಮಚಿತ್ತಭಾವದಿಂದ ಇದನ್ನು ಸ್ವಿಕರಿಸಿ ಆವರು ಕಾಲಾಂತರದಿಂದ ತೆಪ್ಪಗೆ ಇದ್ದರು.

         ಇಂತಹ ಬರಗಾಲಪೀಡಿತ ಹಳ್ಳಿಯಲ್ಲೂ ಕೆಲವು ಜನರಿಗೆ ಮನಷ್ಯ ಸಹಜವಾದ ಕನಸುಗಲಿದ್ದವು. ಸರಳ ಸುಂದರ ಕನಸುಗಳು. ತಮ್ಮ ಹೊಲಗಳಲ್ಲಿ ಹಸಿರು ಪೈರು ಬೆಳೆದು ಕಂಗೊಳಿಸಿದಂತೆ, ತಮ್ಮ ತೊಟಗಳಲ್ಲಿ ತೆಂಗು-ಬಾಳೆಗಳು ಮೈದುಂಬಿ ನಿಂತಂತೆ, ತಮ್ಮ ಅಂಗಳಗಳಲ್ಲಿ ಮಲ್ಲಿಗೆ-ತುಳಸಿ- ಅರಳಿದಂತೆ ದನಗಳು ಕೆರೆಯ ದಡದಲ್ಲಿ ಮೇಯುತ್ತಿರುವಂತೆ, ಕನಸುಗಳು. ಹನುಮಾಪುರದ ಆಗಸಿಯ ಬಳಿ ಇರುವ ಹ