ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಇನ್ನಷ್ಟು ಕತೆಗಳು / ಹರಿದು ಬಾ ತಾಯಿ
ಕೊಡಬೇಕಾದ ತಿಮ್ಮನೂ, ಅವನಂಥವರೂ ಕಂಗೆಟ್ಟು ಹೋದರು.
ಹೀಗೆ ಆಣೆಕಟ್ಟಿನ ಕೆಲಸ ಆಗೀಗ ನಿಂತು ಹೋಗುವುದು ಸಾಮಾನ್ಯವಾಗಿಬಿಟ್ಟಿತು. ಅದಕ್ಕೆ ಅಧಿಕಾರಿಗಳು ಹಲವಾರು ಕಾರಣಗಳನ್ನು ನೀಡುತ್ತಿದ್ದರು. ಸರಕಾರ ಹಣ ಕೊಟ್ಟಿಲ್ಲ ; ಸರಕಾರದ ಬಳಿ ಹನವೇ ಇಲ್ಲ ; ಸರಕಾರವೇ ಬದಲಾಗಿವೇ ಬದಲಾಗಿದೆ ; ಮಿನಿಸ್ಟರ್ ವಿದೇಶಕ್ಕೆ ಹೋಗಿದ್ದಾರೆ ; ಹಣಕಾಸು ವಿಭಾಗದ ಮುಖ್ಯಾಧಿಕಾರಿಗಳ ಮಗಳ ಲಗ್ನವಿದೆ ; ಮಿನಿಸ್ಟರಿಗೂ ಕಂತ್ರಾಟುದಾರರಿಗೂ ಹೊಂದಾಣಿಕೆ(!)ಯಾಗಿಲ್ಲ ; ಪ್ರಾಜೆಕ್ಟಿನಲ್ಲಿ ಮೂಲಭೂತ ಬದಲಾವಣೆ ಮಾದಬೇಕಾಗಿದೆ ; ತಜ್ಞರಸಮಿತಿ ಪರಾಮರ್ಶೆ ನಡೆಸುತ್ತಿದೆ ; ಹೀಗೆಯೇ ಏನೇನೋ ಕಾರಣಗಳು. ಪ್ರಾರಂಭದ ವಷಗಳಲ್ಲಿ ವಿಜಯಧ್ವಜರಾವ್ರಂತಹ ಒಂದಿಬ್ಬರು ಅಧಿಕಾರಿಗಳು ಮಾಡಿದ್ದ ಒಳ್ಳೆಯ ಕೆಲಸವನ್ನು ಕಣ್ಣಾರೆ ನೋಡಿದ್ದ ತಿಮ್ಮನಿಗೆ ಈ ನಂತರದ ವರ್ಷಗಳಲ್ಲಿ ನಡೆದ ವ್ಯವಹಾರಗಳನ್ನೆಲ್ಲ ನೋಡಿದಾಗ ರೋಸಿಹೋಗುತ್ತಿತ್ತು. ತನ್ನೊರಿಗೆ ಕಾಲುವೆಯಲ್ಲಿ ನೀರು ಹರಿದು ಬರುವುದಿರಲಿ, ಈ ಆಧಿಕಾರಿಗಳು ರಾಜಕಾರಣಿಗಳ ಕಾಗೆ ಬಳಗವೆಲ್ಲ ಸೇರಿ ಕೃಷ್ಣಾಪುರದ ಸುತ್ತಲಿನ ಪ್ರದೇಶದ ಸ್ವಾಭಾವಿಕ ನಿಸರ್ಗ ಸೌಂದರ್ಯವನ್ನೆಲ್ಲ ಹಾಳುಗೆಡವುತ್ತಿದ್ದಾರಲ್ಲ ಎಂದು ತಿಮ್ಮನಿಗೆ ದಿಗಿಲಾಗುತ್ತಿತ್ತು. ಅವನು ಚಿಕ್ಕಂದಿನಲ್ಲಿ ನೋಡಿ ಅನುಭವಿಸಿದ್ದ ಕೆನೆಮೊಸರು, ಗಟ್ಟಿಹಾಲು, ನಳನಳಿಸುವ ಬದನೆಕಾಯಿ, ಜುಳುಜುಳು ಹರಿಯುವ ಕೃಷ್ಣೆ, ಹಸಿರು ತುಂಬಿದ ಗುಡ್ಡಗಳು ಎಲ್ಲವೂ ಮಾಯವಾಗಿದ್ದವು. ಎಲ್ಲ ಕಡೆ ಸರಕಾರಿ ನೌಕರರಿಗಾಗಿ, ಕೂಲಿಗಳಿಗಾಗಿ ಕಟ್ಟಿದ್ದ ಕಾಂಕ್ರೀಟ್ ಮನೆಗಳು, ನೀರು ಬೆರೆಸಿದ ಹಾಲು, ಸತ್ವವಿಲ್ಲದ ಕಾಯಿಪಲ್ಲೆ, ಮಡುಗಟ್ಟಿ ನಿಂತ ಕೃಷ್ಣೆಯ ನೀರಲ್ಲಿ ಮೊಸಳೆಗಳ ಭೀತಿ, ಗೆಸ್ಟ್ ಹೌಸಿನಲ್ಲಿ ಬಾಟಲಿಗಳ ಸದ್ದು, ಕೋಳಿಮಾಮ್ಸದ ಗಬ್ಬುನಾತ, ನೋಟುಗಳ ಹಾರಾಟ, 'ಹೋಂದಾಣಿಕೆ'ಗಾಗಿ ಮಂತ್ರಿಗಳ ಬಾಗಿಲಿಗೆ ಎಡತಾಕುವ ಅಧಿಕಾರಿಗಳು, ಅವರ ಹಿಂದೆ ಕಂತ್ರಾಟುದಾರರು. ಹನುಮಾಪುರದ ಬರಗಾಲ ನೀಗಲು ಇನ್ನೆಷ್ಟು ವರ್ಷ ಕಾಯಬೇಕೋ ಎಂದು ತಿಮ್ಮ ತಪಿಸುತ್ತಿದ್ದ. * * *
ಕೃಷ್ಣಾಪುರದ ಆಣೆಕಟ್ಟಿನ ಕೆಲಸ ಇನ್ನೂ ನಡೆದೇ ಇದೆ.ತಿಮ್ಮ ತನ್ನ ಮಸುಕಾಗತೊಡಗಿರುವ ಕಣ್ಣುಗಳಿಂದ ಗಮನಿಸುತ್ತಲೇ ಇದ್ದಾನೆ. ಗೆಸ್ಟ್ ಹೌಸಿನ ಚಟುವಟಿಕೆಗಳು,ಮೊದಲು ಕತ್ತಲಾದ ನಂತರ ಮಾತ್ರ ನಡೆಯುತ್ತಿದ್ದಂತಹವು. ಈಗ ಹಾಡು ಹಗಲೇ ನಡೆಯುತ್ತಿವೆ. ಈಗ ಯಾರೂ ಲಕ್ಷಗಳ ಬಗ್ಗೆ ಮಾತಾಡುವುದಿಲ್ಲ.