ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೮
ನಡೆದದ್ದೇ ದಾರಿ

ಮಾಡಿದ್ದರು."
"ಏನ೦ತ ?"-ಬೇಡವೆನಿಸಿದ ಅವನ ವಿಶಾಲವಾದ ಎದೆಗೆ ಸ್ವಲ್ಪ-ಸ್ವಲ್ಪವಾಗಿ
ಸಮೀಪ ಬರುತ್ತ ಎ೦ಥದೋ ಭಯದಿ೦ದ ಕೇಳಿದಳು ಸರಯೂ.
"ನಿನಗ ಏನು ಧಾಡಿ ಆಗೇದ೦ತ."
"ಛೇ,ನನಗೇನಾಗೇದ ? ಡಾಕ್ಟರು ಏನು ಹೇಳಿದ್ರು ಹರೀಶ? ನೀ ಹೀಂಗ್ಯಾಕ
ನೋಡಲಿಕ್ಹತ್ತೀದಿ ನನ್ನ?"-ಅವಳಿಗರಿಯದಂತೆಯೇ ದನಿ ನದಡುಗಿತು.
ಅವಳ ಕಣ್ಣಲ್ಲಿ ಕಣ್ಣಿಡುತ್ತ ಕೇಳಿದ ಹರೀಶ,'ನಿನಗೇನಾಗೇದನ್ನೂದು ಖರೇನs
ನಿನಗ ಗೊತ್ತಿಲ್ಲs ಸರೂ?"
-ದಾಂಡೇಲಿಯ ಅಡವಿಯ ಕನಸನ್ನು ಕಸಿದುಕೊಳ್ಳಲೆತ್ನಿಸುತ್ತಿದ್ದ ಆ ನೋಟ
ವನ್ನೆದುರಿಸುವುದು ಸಾಧ್ಯವಾಗದೆ ಕಣ್ಣು ಮುಚ್ಚಿಕೊಂಡು ತಲೆ ಕೊಡಹಿದಳು ಆಕೆ.
"ಹಂಗಾರ ನಾ ಹೇಳ್ತೀನಿ ಕೇಳು. ಇನ್ನೂ ಸಮೀಪ ಬಾ. ನಿನ್ನ ಕಿವಿಯೊಳಗೆ
ಹೇಳತೀನಿ."
ತನ್ನ ಕಿವಿಗೆ ಆತನ ತುಟಿಗಳ ಬೆಚ್ಚಗಿನ ಸ್ಪರ್ಶವಾಗಿ,ಆತ ಹೊತ್ತು ತಂದ
'ಸ್ವೀಟ್ ನ್ಯೂಜು'ಕಾದ ಪಾದರಸದಂತೆ ಕಿವಿಗುಂಟು ಒಳಗಿಳಿದಾಗ, ಒಂದು ಕ್ಷಣ
ಅವಳಿಗೆ ಜಗತ್ತೆಲ್ಲ ಕತ್ತಲಿನಿಂದ ತುಂಬಿದಂತೆನಿಸಿತು. ಮರುಕ್ಷಣ ಆಕೆ ಆತನನ್ನು
ಗಟ್ಟಿಯಾಗಿ ತಬ್ಬಿಕೊಂಡಳು.
ಎಷ್ಟೋ ಹೊತ್ತಿನ ವರೆಗೆ ಹರೀಶನ ಕೈ ಹವುರಗೆ ಅವಳ ಬೆನ್ನು-ಮುಖ-
ತಲೆಯನ್ನು ಸವರುತ್ತಲೇ ಇತ್ತು.
ಎಂಥದೋ ತೃಪ್ತಿ;ಏನೋ ವೇದನಾಮಯ ಸುಖ,'ಹರಿ ಹರಿ' ಎಂದು
ಕಿರುಚುವ ಗಿಳಿಯ ದನಿಯಲ್ಲಿ ಸರಯೂಗೆ ಈಗ ಹೊಂದಿನ ರೊಚ್ಚು ಕಾಣುವುದಿಲ್ಲ;
ಕಳವಳ ಕಾಣುವುದಿಲ್ಲ;ಅದೂ ಯಾಕೋ ಈಗ ಒದರುವುದನ್ನು ಕಡಿಮೆ ಮಾಡಿದೆ,
ಆದರೆ ಅದರ ಈ ಮೌನ ಅದರ ಸಮಾಧಾನದ ಲಕ್ಷಣವೋ ಅಥವಾ
ಅಸಮಾಧಾನವನ್ನು ಬಚ್ಚಿಡುವ ಪ್ರಯತ್ನವೋ ಅಥವಾ ಅಸಮಾಧಾನವನ್ನು
ಪ್ರಲಕಗೊಳಿಸಲು ಸಾಧ್ಯಾವಾಗದ ಅಸಹಾಯಕತೆಯೋ ತನಗೆ ತಿಳಿಯುವುದಿಲ್ಲ...
ಇದು ತೃಪ್ತಿ ಎನ್ನಲು, ಸುಖ ಎನ್ನಲು,ಏನು ಆಧಾರ?
ಹಾಗಾದರೆ ಇದು ಸ್ಥಿತಪ್ರಜ್ಞತೆಯೇ?
ಇರಬಹುದು.
-ಯಾರಿಗಾಗಿ? ಯಾರಿಗಾಗಿ ಈ ಸ್ಥಿತಪ್ರಜ್ಞತೆ(ಯ ಭ್ರಮೆ)?
ಹರೀಶನಿಗಾಗಿ ಅಲ್ಲ; ಆವನಿಗಾಗಿಯಂತೂ ಅಲ್ಲವ್ವೇ ಅಲ್ಲ; ತನಗಾಗಿಯೂ