ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಕೊನೆಯ ದಾರಿ / ಕೊನಯ ದಾರಿ
೭೫

ಹೆಚ್ಛಿನದು ಏನೂ ಇಲ್ಲ. ನಾನು ವಿರೋಧಿಸುತ್ತೀನಿ ಅಂತ ತಿಳಿದಿದ್ದನೇನೋ. ನಾನು
ಏನೂ ವಿರೋಧ ಮಾಡದೇ ಇದ್ದಾಗ ಎಷ್ಟು ಆಶ್ಚರ್ಯ ಆವನಿಗೆ!...
ಗೋವಿಂದಮೂರ್ತಿಯಿಂದ ಸಿಗಲಾರದ್ದು ಇವನಿಂದಲಾದರೂ ಸಿಕ್ಕೀತೆಂದು ಹ್ಞೂ
ಅಂದೆ. ಆದರೆ ಛೆ, ಇವನೂ ಹೇಡಿಯೇ 'ಏನಂದಿ ಲಿಲಿ? ಮಗು ಬೇಕೆ ನಿನಗೆ? ತೋಬಾ
ತೋಬಾ. ನೀನು ಇನ್ನೂ ಮದುವೆಯಾಗದ ಹುಡುಗಿ. ನಮ್ಮಿಂದ ಇಂಥ ಪಾಪದ ಕೆಲ್ಸ
ಆಗೋದಿಲ್ಲ. -'ಅಲ್ಲಾಕೆ ಕಸಮ್' - ಅಂತ ತಡವರಿಸಿದ. ಇವನ ಗಡ್ಡಕ್ಕೆ ಬೆಂಕಿ ಹಚ್ಚಬೇಕು. ಮದುವೆಯಾಗದ ಹುಡುಗಿಯ ಕೂಡ
ಮಲಗಲಿಕ್ಕೆ ಬೇಕು ಈ ಸಾಬನಿಗೆ. ಆದರೆ ಅವಳಿಗೆ ಇಷ್ಟೊಂದು ಅವಶ್ಯವಾಗಿರುವ
ಒಂದು ಸಣ್ಣ favour ಮಾಡಲಿಕ್ಕೆ ಬೇಡ ಅವನಿಗೆ. ಪಾಪವಂತೆ. ಥೂ....
- ಗೊವಿಂದಮೂರ್ತಿಯಿಂದ ಆಗಬೇಕಿತ್ತು ಈ ಕೆಲಸ. ಅವನೇನೂ ಪಾಪ-
ಪುಣ್ಯದ ಬಗ್ಗೆ care ಮಾಡುವುದಿಲ್ಲ. ಆದರೆ ಅವನು ಸದಾ ಜಾಗರೂಕನಾಗಿರುವ
ಮನುಷ್ಯ. ನನಗೆ ಬೇಕಾದ್ದನ್ನು ಕರುಣಿಸಿ ಬಂಧನದಲ್ಲಿ ಸಿಲುಕಿಕೊಳ್ಳುವ ಇಚ್ಛೆಯಿಲ್ಲ
ಅವನಿಗೆ. ಈ ಬಂಧನದ ಒಂದು ಎಳೆಯನ್ನು ಅವನಿಗೆ ಸೋಕಿಸಿಕೊಡುವುದಿಲ್ಲವೆಂದು,
ಈಗಿನ ಹಾಗೆಯೇ ನಂತರವೂ ಅವನು free ಆಗಿರಬಹುದೆಂದು ನಾನೆಷ್ಟು ಹೇಳಿದರೂ
ಕೇಳುವುದಿಲ್ಲ ಅವನು. 'ಲಿಲಿ, excuse me. ನನ್ನನ್ನ ಅಂಥ ಜಂಜಡದೊಳಗೆ
ಸಿಗಿಸಬೇಡ. ನಾನೇನು ಮನುಷ್ಯನಲ್ಲವೆ? ನೀನು ನನಗೆ ಬಂಧನ ಹಾಕದಿದ್ದರೂ
ನನ್ನಿಂದ ನಿನಗೆ ಹುಟ್ಟಿದ ಮಗು ಬಗ್ಗೆ ತಾನಾಗಿಯೇ ನನ್ನಲ್ಲಿ ಪ್ರೀತಿ-ಗೀತಿ ಹುಟ್ಟಿದರೆ?
ಆಗ? ನನ್ನ ಜೀವನದೊಳಗಿನ ಮಜಾ ಎಲ್ಲಾ ಖಲಾಸ್'- ಅನ್ನುತ್ತಾನೆ?
-ಇವರೆಲ್ಲ ನಿರುಪಯೋಗಿಗಳು.... ವಿನಯ ಸಾಳಕರನನ್ನೇ ಸಾದು ಮಾಡಬೇಕು. ೩೧ ಜುಲೈ, ೧೯೫೮ ಆಫೀಸಿನಿಂದ ಬರುವಾಗ ತಂದಿದ್ದ ಚಾಕಲೇಟನ್ನು ಬಾಗಿಲಲ್ಲಿ ನಿಂತಿದ್ದ ಮುನ್ನಿಗೆ ಕೊಟ್ಟಾಗ ಮುನ್ನಿಯ ಮಮ್ಮಿ ಕೇಳಿದಳು. ಮಕ್ಕಳನ್ನ ಇಷ್ಟು ಪ್ರೀತಿ ಮಾಡ್ತೀರಿ, ಲಗೂನ ಲಗ್ನ ಆಗಿ ಬಿಡ್ರೆಲ್ಲ?' ಹ್ಞ, ಲಗ್ನ. ಲಗ್ನ ಅಂದ ಕೂಡಲೇ ನೆನಪಾಗುವುದು ಆ ಕತೆಯೆಲ್ಲಾ. ಆ ಗದ್ದಲ ಬಜಂತ್ರಿ, ಅರಿಷಿಣ ಮತ್ತು ಆ ಮನು