ಪುಟ:ನಡೆದದ್ದೇ ದಾರಿ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೮

ನಡೆದದ್ದೇ ದಾರಿ

ಬದುಕಬೇಕು,ಅಂದರ ಬರತದ ಅದು.'
—ಬೇಡ. ಆ ಕಲ್ಲು ಮುಳ್ಳಿನ ದಾರಿಯಲ್ಲಿ, ಗುಡ್ಡಬೆಟ್ಟಗಳ, ಆ
ಜೀವನ ಸಾವಿನ ನೆನಪು ಈಗೇಕೆ ಎಲ್ಲ ಮುಗಿದು ಇಷ್ಟು ವರ್ಷಗಳಾದ ನಂತರ?
ಕಳೆದ ಜನ್ಮದ ಕತೆ ನೆನೆದು ಕತ್ತಲಲ್ಲಿ ಕೂತು ಆಳುವವರು ಪೈಕಿ ಅಲ್ಲಿ ನಾನು. ಆ ಎಲ್ಲ
ನೆನಪನ್ನು, ಆಗಿನ ಕನಸುಗಳನ್ನು ಕೊಂದುಹಾಕಿದನು ಹೊಸ ಜೀವನ ಸುರುಮಾಯೇ
ಹಳೇಯ ಕಾಲವಾಯಿತು.
'ಆಗ ಎಷ್ಟು ಸಲೀಸಾಗಿ ಬರೀತಿದ್ದಿ ನೆನಪಿದೆ ಏನು ?'
ಹೌದು. ಆಗ ಬೆಂಕಿ ಉರಿಯುತ್ತಿತ್ತು ; ಕನಸುಗಳು-ಅನಿಸಿಕೆಗಳು
ಜ್ವಲಂತವಾಗಿದ್ದವು. 'ಆಗ ನಾನು ಬದುಕಿದ್ದೆ' –ಮತ್ತೆ ಮಾತನಾಡಿದರು ಹೆಣ.
ಈಗೆಲ್ಲಾ ತಣ್ಣಗಾಗಿದೆ ; ಬೂದಿಯಾಗಿದೆ.
'ನಾ ಹಿಂಗ ಹೆಣಾ ಆದಾಗಿನಿಂದ ಒಂದಕ್ಷರ ಬರಿಯೂದಾಗಿಲ್ಲ ನಿನಗೆ.'
ಇರಬಹುದು, ಆದರೆ ಮತ್ತೆ ಆದರೆ ಅಗ್ನಿಕುಂಡ ಹೋಕ್ಕು ನೋಡದ ಹೋರತು ಈಗ
ಬರೆಯುವುದು ಸಾಧ್ಯವಿಲ್ಲವೇ ?
'ಬರ್ತಿಯೇನು ನಮ್ಮೊರಿಗೆ ?'
'ಊಹ್ಞೂ.'
—ಮೊಟಕಾಗಿ ಉತ್ತರಿಸಿ ಪೆನ್ನು-ನೋಟಬುಕ್ಕು ಅಲ್ಲೇ ಒಗೆದು ಎದ್ದು ಹೊರಗೆ
ಬಂದು ನಿಂತು. ಕ್ಲಬ್ಬಿನಿಂದ ಮರಳಿದ್ದು ಶ್ರೀನಿವಾಸ ಕೆಳಗಡೆ ಕಾರು ನಿಲ್ಲಿಸಿ ಹಾರ್ನ
ಮಾಡುತ್ತಿದ್ದ. ಗೇಟು ತೆರೆಮೇಲೆ ಕಂದು ಓಡಿದೆ.
'ಕವಿತಾ ಬರದೇನ ?'. —ರಾತ್ರಿ ಕೇಳಿದ್ದು ಶ್ರೀ.
'ಇಲ್ಲ ಇನ್ನೂ. ಆದರೆ ಇವತ್ತು ಬರೀತೀನಿ. ನಾಳೆ ಕಳಸ್ಲಿಕ್ಕೇಬೇಕಲ್ಲ.'
'ತಿಂಗಳಾತಲ್ಲ ಬರೀಲಿಕ್ಕೆ ಸುರುಮಾಡಿ ? ಅದೇನು ಮುಗಿಯೊಹಾಂಗ
ಕಾಣೂದಿಲ್ಲ.'
'ಇವತ್ತ ಮುಗಿಸೇಬಿಡಬೇಕಂತ ಮಾಡೀನಿ.'
'ಹಂಗಾದರ ನಿನ್ನ ಮಾತಾಡ್ಸೂದಿಲ್ಲ ಇವತ್ತು'— ಎಂದು ಆತ ಮಗ್ಗುಲಾಗಿದ್ದ.
—ಅವನ ಗೊರಕೆಯ ಸದ್ದು ಕೇಳುತ್ತಾ ಶೂನ್ನದತ್ತ ದ್ರುಷ್ಟಿ ನೆಟ್ಟು —ಹೀಗೆ ಕೂತು
ಎಷ್ಟೋ ಹೋತ್ತಾಯಿತು....ನಿದ್ರೆ....ಬರತೋಡಗಿದೆ....
'ಹೆಲೋ.'
'ಹಲೋ' ಎಂದು ಕತ್ತೆತ್ತಿ ನೋಡಿದರೆ ಬಾಗಿಲು ಚೌಕಟ್ಟಿಗೆ ಆತು ನಿಂತಿತ್ತು,
—ಆ ಹೆಣ.