ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ದಾರಿ/ಹೆಣ
೯೧

ಒಂದು ಕ್ಷಣದ ಮಟ್ಟಿಗೆ ಬದುಕು ಸಾರ್ಥಕವೆನ್ನಿಸುವ ಆ ಘಳಿಗೆ ಕೈಗೆಟಕಿ-ಎಟಕಿ ಎಟಕದೇ
ಹೋದದ್ದು ;ಭೂತ-ವರ್ತಮಾನಗಳ ಸಂಬಂಧ ತಟ್ಟೆಂದು ಕಟಗರಿಸಿದ್ದು-
-ಇಲ್ಲೇ. ಇಲ್ಲೇ ಎಲ್ಲ ಮುಗಿದಿದ್ದು.
'ಇಲ್ಲೇ ನೀನು ನನ್ನನ್ನು ಕೊಂದದ್ದು....ನೆನಪಿದೆಯೇ'-ಹೆಣದ ದನಿಯೂ
ಸಹ ಹೆಣವಾಗಿಹೋಗಿದೆ....
ಇಲ್ಲ ,ನನಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ .ಅಯ್ಯೋ, ನಾನು ಈಗಿಂದೀಗ
ಮನೆಗೆ ಹೋಗಬೇಕು....
'ನೋಡು, ಅಲ್ಲಿದೆ ನನ್ನ ಗೋರಿ. ನನ್ನನ್ನು ಅಲ್ಲೇ ಬಿಟ್ಟು ಮುಂದೆ ಹೋದಿ―
ಆಮ್ಯಾಲ ಆದದ್ದಲ್ಲsನಿನಗ ಆ ಡಾಕ್ಟರನ ಭೆಟ್ಟಿ?.ಹ್ಞು ,ನಿನ್ನ ಲಗ್ನಕ್ಕನನ್ನ ಕರೆಯಲೇ
ಇಲ್ಲ ನೀನು―, ಗುಡ್ ಬೈ ಹೇಳಿ ಹೋದಾಕಿ ತಿರುಗಿ ಈ ಕಡೆ ಹಾಯಲೇ ಇಲ್ಲ ನೀನು.'
―ಸ್ಮಶಾನ ಮೌನ.
ಇದ್ದಕ್ಕಿದ್ದಂತೆ ಉದ್ವೇಗದಿಂದ ಮಾತನಾಡಿತು ಹೆಣ.‛ನನ್ನನ್ನು ಬದುಕಿಸು.
ನೀನು ಮತ್ತೆ ಟನ್ ಗಟ್ಟಲೆ ಕವನ ಬರೆಯುವಂತೆ ಮಾಡುವೆ. ಮತ್ತೆ ನಾವು ಈ ಗುಡ್ಡಾ
ಹತ್ತೋಣ, ಕುಣಿದಾಡೋಣ, ಹಕ್ಕೀಹಾಂಗ ಹಾರಾಡೋಣ, ಮೀನಿನ್ಹಾಂಗ
ಈಸಾಡೋಣ, ಬದುಕೋಣ....’
―‛ಸತ್ ಸತ್ತು ಬದುಕೋಣ? ಊಹ್ಞೂ. ನಾ ಒಲ್ಲೆ. ನನಗೆ ಬ್ಯಾಡ. ನಾ ಈಗ
ಆರಾಮಿದ್ದೀನಿ. ನಿನ್ನ ಕುಣಿದಾಡೋದು, ಹಾರಾಡೋದು, ಹತ್ತೋದು, ಇಳಿಯೋದು,
ಏಳೋದು,ಬೀಳೋದು,ಸಾಯೋದು―ಎಲ್ಲಾ ನಿನಗs ಇರ್ಲಿ.'
‛ಮತ್ತ ಕವನ?’
ದೇವರಾಣೆ ನಾ ಇನ್ನ ಕಲನಾ ಬರಿಯೋ ಹುಚ್ಚುತನಾ ಮಾಡೋದಿಲ್ಲ.ನನಗ ಯಾವುದೂ ಬ್ಯಾಢ.ನಾ ಹೊರಟೆ.’
'ಖರೇನ?
'ಖರೆ,ಖರೆ,ಖರೆ’.
....ಹೆಣ ಶೂನ್ಯದತ್ತ ನೋಡುತ್ತ ಮೌನವಾಗಿ ನಿಂತಿತು. ನಾನೇ ಮತ್ತೆ ಕೇಳಿದೆ,
‛ನನ್ನ ಕಳಿಸಲಿಕ್ಕೆ ಬರ್ತಿಯೇನು ಆಲ್ಲೀತನಕ?'
‛ಒಲ್ಲೆ.ಕವನಾ―ಗಿವನಾ ಬರಿಯೂದಿಲ್ಲ ಆಂತೀ.ಇನ್ನ ನಂದೇನು ಕೆಲಸದ
ಅಲ್ಲೆ? ನಾ ಇಲ್ಲೆ ನನ್ನ ಗೋರಿಯೊಳಗ ಇರ್ತೀನಿ. ಹೋಗಿ ಬಾ,ಗಡ್ ಬೈ.’
‛ಹೋಗತೀನಿ.ತಿರಿಗಿ ಬರೂದಿಲ್ಲ.ನೀನೂ ಆ ಕಡೆ ಬರಬ್ಯಾಡ’.

*