ಈ ಪುಟವನ್ನು ಪರಿಶೀಲಿಸಲಾಗಿದೆ
೯೨
ನಡೆದದ್ದೇ ದಾರಿ
*
*
'ಏ ಏಳು, ಎಷ್ಟೊತ್ತದು ಮಲಗೋದು ? ಕವಿತಾ ಬರದು ಮುಗಿಸಿಯೇ
ಬಿಟ್ಟಿಯೇನು ನಿನ್ನೆ ರಾತ್ರಿ ? ಚಹಾದ ಹೊತ್ತಾತು ಏಳಿನ್ನ.' -ಹೊದಿಕೆಯನ್ನೆಳೆದು
ಎಬ್ಬಿಸಲು ಪ್ರಯತ್ನಿಸುತ್ತಿದ್ದ ಶ್ರೀ.
ನಿಧಾನವಾಗಿ ಕಣ್ಣು ಬಿಟ್ಟೆ, ಆ ಹೂ....ಏನಂದೀ ?'
'ಕವಿತಾ ಬರದು ಮುಗಿಸಿದೇನು ಅಂದೆ.'
'ಕವಿತಾ ? ಛೇ ಇಲ್ಲ. 'ಆಗೂದಿಲ್ಲ, Excuse me' -ಅಂತ ಈಗ ಮೊದಲ
ಒಂದು ಪತ್ರಾ ಬರೀಬೇಕು ಆ ಸಂಪಾದಕಗ. ನಿನಗ ಚಹಾ ಆಮ್ಯಾಲೆ ಮಾಡ್ತೀನಿ.'