ಪುಟ:ನನ್ನ ಸಂಸಾರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಕಾದಂಬರಿ? ಸಂಗ್ರಹ ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ದುಕೊಂಡು ಪುನಹಾ ಅವನನನ್ನು ಎಚ್ಚರಿಸಿಬಿಟ್ಟು ಮದ್ಯದಂಗಡಿಯನ್ನು ಹೊಕ್ಕನು.

          ಈ ದಿವಸ ಭಾಸ್ಕರನು ಕುಡಿದವನಂತೆ ನಟಿಸದೆ ನೆಟ್ಟಗೆ ಒಳಕ್ಕೆ  ಹೋಗಿ ಸುತ್ತಲೂ ನೋಡಲು ಹರಿಚಂದ್ರನು ಮೊದಲನೇದಿವಸದಲ್ಲಿ ಕುಳಿತಿದ್ದ ಸ್ಥಳದಲ್ಲೇ ಕುಳಿತಿರುವುದನ್ನು ನೋಡಿಕೊಂಡು ಅವನನ್ನರಿಯದವನಹಾಗೆ ಬೇರೇ ಒಂದುಕಡೆ ಕುಳಿ ತುಕೊಂಡನು. ಇವನು ಬಂದದ್ದನ್ನು ನೋಡಿದ ಹರಿಚಂದ್ರನು ನಿನ್ನೇದಿವಸ ಬಂದಿದ್ದ ಮನುಷ್ಯನು ಇವನೇ ಎಂದು ತಿಳಿದು ಅವನನ್ನು ಬರುವಹಾಗೆ ಕರೆದನು. ಭಾಸ್ಕರನು ಸಮಿಾಪಕ್ಕೆ ಹೋಗಿ ಕರೆಯಲು ಕಾರಣವೇನೆಂದು ಕೇಳಿದನು. ಅದಕ್ಕೆ ಹರಿಚಂದ್ರನು ಇವನು ಎಲ್ಲಾ ವಿಷಯಗಳನ್ನೂ ಮರೆತುಬಿಟ್ಟಿದ್ದಾನೆಂದು ತಿಳಿದು "ಅಯ್ಯಾ ನೀನು ನೀಲಕಂಠಬಾಬುವಲ್ಲವೇ ?” ಎಂದು ಕೇಳಿದನು.

ಭಾಸ್ಕರ:- -ಹೌದು ನನ್ನ ಹೆಸರು ನೀಲಕಂಠಬಾಬು-ಆದರೆ ನನ್ನ ಹೆಸರು ನಿನಗೆ ಹೇಗೆ ತಿಳಿಯಿತು ?

ಹರಿಚಂದ್ರ:-ನಿನ್ನೆದಿವಸ ನೀನು ಇಲ್ಲಿಗೆ ಬಂದು ಕುಡಿದು ನಿನ್ನ ಹೆಸರನ್ನು ಹೇಳಲಿಲ್ಲವೇ ? ಮತ್ತೇರಿತ್ತಾದ್ದರಿಂದ ಆಗ ನಡೆದ ವಿಷಯಗಳನ್ನು ಮರೆತುಬಿಟ್ಟಿರುವಿ. ನೀನು ನಿನ್ನೇದಿವಸ ನನಗೆ ಕೊಡಿಸಿದ ಮದ್ಯಕ್ಕಾಗಿ ನಿನಗೆ ವಂದನೆಯನ್ನು ಸಮರ್ಪಿಸುತ್ತೇನೆ.

ಭಾಸ್ಕರ:-ಏನೋ ಸ್ವಾಮಿ ! ನನಗೇನೂ ಜ್ಞಾಪಕವಿಲ್ಲವು. ನಾನು ಇಲ್ಲೇ ಇರುವ ಮೈದಾನದಲ್ಲಿ ಬಿದ್ದಿದ್ದು ಜ್ಞಾನಬಂದಮೇಲೆ ಎದ್ದು ಹೋದದ್ದು ಮಾತ್ರ ಜ್ಞಾಪಕವಿದೆ. ನಾನು ನನ್ನ ಹೆಸರನ್ನು ಹೇಳಿದ್ದ ಮೇಲೆ ನಿಮ್ಮ ಹೆಸರನ್ನು ನೀವು ಹೇಳಿದ ಜ್ಞಾಪಕವಿಲ್ಲ ವಲ್ಲಾ. ಬೇಕಾಗಿದ್ದರೆ ಈ ದಿವಸವೂ ಬೇಕಾದಷ್ಟು ಮದ್ಯವನ್ನು ಕುಡಿಸುತ್ತೇನೆ.

ಹರಿಚಂದ್ರ:-ನನ್ನ ಹೆಸರನ್ನು ಹೇಳಲು ನನಗಿಷ್ಟವಿಲ್ಲ. ಮದ್ಯವನ್ನು ಕುಡಿಯೋಣ. ನನಗೆ ಬಹಳ ಅವಸರವಾದ ಕೆಲಸವೊಂದಿದೆ. ಆಗಲೇ ಎಂಟು ಗಂಟೆಯಾಯಿತು. ನಾನು ಹೋಗಬೇಕು.

ಭಾಸ್ಕರನು:-ಮದ್ಯವನ್ನು ತಾನೇ ತರುವುದಾಗಿ ಹೇಳಿ ಮದ್ಯವನ್ನು ಮಾರುವನ ಬಳಿಗೆ ಹೋಗಿ "ಅಯ್ಯಾ ! ಆಗಾಗ್ಯೆ ನಾನಾ ವಿಧವಾದ ಮದ್ಯಗಳ ಹೆಸರನ್ನು ಹೇಳಿ ಅವುಗಳ ಗುಣವನ್ನು ಹೊಗಳುತ್ತಾ ಇರು. ನಾನು ಕರೆದಾಗಲೆಲ್ಲಾ ಬೇರೆಬೇರೆ ವಿಧದ ಮದ್ಯಗಳನ್ನು ತೆಗೆದುಕೊಂಡುಬಾ. ಇದೋ ಇಲ್ಲಿ ಐವತ್ತು ರೂಪಾಯಿಗಳಿವೆ” ಎಂದು ಹೇಳಿ ಮರು ಶೀಸೆ ವ್ಹಿಸ್ಕಿ ಎಂಬುದನ್ನು ತೆಗೆದುಕೊಂಡುಬಂದು ಬಟ್ಟಲುಗ