ಪುಟ:ನನ್ನ ಸಂಸಾರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                       ಮಧುಸೂದನ                                 31

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ಳಲ್ಲಿ ಸುರಿದು ಕೊಟ್ಟು ತಾನೂ ಕುಡಿಯುವವನಂತೆ ನಟಿಸಿದನು. ಹರಿಚಂದ್ರನು ಭಾಸ್ಕರನ ಉದಾರತ್ವಕ್ಕಾಗಿ ಅವನನ್ನು ವಂದಿಸುತ್ತಾ ಕೊಟ್ಟಿದ್ದನ್ನೆಲ್ಲಾ ಕುಡಿದು ಇನ್ನು ಸಾಕು ಹೋಗೋಣವೆಂದು ಹೇಳಿದನು.

     ಅಷ್ಟು ಹೊತ್ತಿಗೆ ಆ ಮದ್ಯದಂಗಡಿಯ ಯಜಮಾನನು ಅಲ್ಲಿಗೆ ಬಂದು ಭಾಸ್ಕರನನ್ನು ಕುರಿತು " ಅಯ್ಯಾ ಈಗತಾನೇ ನನ್ನ ಸೇವಕನು ಹೊಸದಾಗಿ ಬಂದ ಪ್ರಾಂಸ್ ದೇಶದ ಹಳೆಯ ದ್ರಾಕ್ಷಾರಸವನ್ನು ತಂದಿರುತ್ತಾನೆ. ಅದರ ಗುಣವನ್ನು ನಾನು ಇಷ್ಟೆಂದು ಹೇಳಲಾರೆನು. ಬಹಳ ದೊಡ್ಡ ಮನುಷ್ಯರೆಲ್ಲರೂ ಅದನ್ನು ನನ್ನಿಂದ ತರಿಸಿ ಕುಡಿಯುತ್ತಾರೆ. ನಿಮಗಾಗಿ ಮೂರು ಶೀಸೆಗಳನ್ನು ತಂದು ಕೊಡಲಾ” ಎಂದು ಕೇಳಿದನು. ಭಾಸ್ಕರನ ಹರಿಶ್ಚಂದ್ರನ ಮುಖವನ್ನು ನೋಡಲು ಅವನು ತರಿಸೆಂದು ತಲೆಯನ್ನಲ್ಲಾಡಿಸಿದನು. ಭಾಸ್ಕರನು ಮದ್ಯದಂಗಡಿಯವನನ್ನು ಮರು ಶೀಸೆಗಳನ್ನು ತರು ವಹಾಗೆ ಹೇಳಿದನು. ಅವನು ತರುವುದಕ್ಕೆ ಹೋದನು. ಅಷ್ಟರಲ್ಲೇ ಭಾಸ್ಕರನು ತನ್ನ ಬಳಿಯಲ್ಲಿಟ್ಟು ಕೊಂಡಿದ್ದ ಒಂದು ಪುಡಿಯನ್ನು ತೆಗೆದು ಯಾರೂ ಕಾಣದಹಾಗೆ ಒಂದು ಬಟ್ಟಲಿಗೆ ಹಾಕಿ ಸಿದ್ದವಾಗಿಟ್ಟು ಕೊಂಡಿದ್ದನು. ಮದ್ಯದ ಶೀಸೆಗಳು ಬಂದಕೂಡಲೇ ಆ ಬಟ್ಟಲಿಗೆ ಅದನ್ನು ಸುರಿದು ಹರಿಚಂದ್ರನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿಸುತ್ತಾ ಆಹಾ! ಎಷ್ಟು ರುಚಿಯಾಗಿದೆ ಎಂದು ಕೂಗುತ್ತಾ ಬಟ್ಟಲುಗಳಾದಮೇಲೆ ಬಟ್ಟಲುಗಳನ್ನು ತುಂಬಿ ಹರಿಚಂದ್ರನಿಗೂ ಕೊಡುತ್ತಾ ತಾನು ಕುಡಿಯುವಂತೆ ನಟಿಸುತ್ತಾ ಬಂದನು. ಮದ್ಯದ ವೇಗವು ಹರಿಚಂದ್ರನ ತಲೆಯನ್ನೇರಿತು. ಉನ್ಮಾದಾವಸ್ಥೆಯು ಬಂದಿತು, ಅದನ್ನರಿತ ಭಾಸ್ಕರನು ತಾನೂ ಮತ್ತೇರಲ್ಪಟ್ಟವನಹಾಗೆ ಮಾತನಾಡುತ್ತಾ ಮದ್ಯವು ಮುಗಿದುಹೋಗಲು ಇನ್ನೂ ಮದ್ಯ ಎಂದು ಕೂಗಿದನು, ಕಾದು ಕೊಂಡಿದ್ದ ಮದ್ಯದಂಗಡಿಯವನು ಇನ್ನೆರಡು ಶೀಸೆಗಳನ್ನು ತಂದಿಟ್ಟನು. ಹರಿಚಂದ್ರನು ಅವುಗಳನ್ನೂ ಕುಡಿದುಬಿಟ್ಟು ಕುಣಿಯತೊಡಗಿದನು. ಆಗ ಭಾಸ್ಕರನು "ವಹವಾ ! ಇದೀಗೆ ಒಳ್ಳೇಮದ್ಯ!! ಅಲ್ಲವೇ? ಅಣ್ಣಾ ನೀನೇಹೇಳು ಹೊತ್ತಾಗಲಿಲ್ಲವೆ? ಹೋಗೋಣ ನೀನು-ನೀನೆಲ್ಲಿಗೋ ಹೋಗಬೇಕೆಂದೆಯಲ್ಲಾ? ಆಗಲಿ ಹೋಗೋಣ. ಎಲ್ಲಿಗಣ್ಣಾ ಹೋಗುವುದು ?

ಹರಿಚಂದ್ರ;-ಅಹಹ ! ಹಿ! ಹಿ! ಓಹೋ ಹೊತ್ತಾಯಿತೆ ? ಹತ್ತು ಗಂಟೆಗೆ ಸರಿ ಯಾಗಿ ಮೀಟಿಂಗ್. ನಾನು ಆಹಾ ಹವುದು ನಾನು ಬಿ. ಎ. ಪರೀಕ್ಷೆ ಕೊಟ್ಟಿಲ್ಲವೇ ? ನಾನು ನಾಳೇದಿವಸ ಒಬ್ಬ ವಿಧವೆಯನ್ನು ಮದುವೆಯಾಗುತ್ತೇನೆ. ನೀವೆಲ್ಲಾ ಮೂಢರು-ಆಹಾ ! ನಾವು ಪೋಲೀಸಿನವರನ್ನೆಲ್ಲಾ ಶೀಕ್ಷಿಸಬೇಕು, ಸರ್ಕಾರವಂತೆ--------