ಪುಟ:ನನ್ನ ಸಂಸಾರ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಮಧುಸೂದನ 33

ದದ್ದಿಲ್ಲ. ಇಲ್ಲಿ ನಡೆಯುವ ವಿಷಯಗಳು ಸ್ವಲ್ಪಮಾತ್ರವೂ ಹೊರಗೆ ಕೇಳಿಸುತ್ತಿರಲಿಲ್ಲ. ಎಲ್ಲರೂ ಮದ್ಯಪಾನನಿಷೇಧಸಂಬಂಧವಾದ ಉಪನ್ಯಾಸವೆಂದೇ ತಿಳಿದುಕೊಂಡಿದ್ದರು. ಎಂ ಸಂಘದ ಮುಖ್ಯಸ್ಥನು ಅಗ್ರಾಸನಾಧಿಪತಿಯಾಗಿದ್ದನು. ಸಭೆಯ ಪ್ರಾರಂಭದಲ್ಲಿ ಅವನು ಅಲ್ಲಿದ್ದವರನ್ನು ಕುರಿತು " ಸಹೋದರಿರಾ ! ಈ ದಿವಸದ ಮೀಟಿಂಗ್ ಯಾವಕಾರಣಕ್ಕಾಗೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ನಮ್ಮ ಮೇಲೆ ಪೊಲೀಸಿನವರಿಗೂ, ಸರ್ಕಾರದವರಿಗೂ ಯಾವದೋ ಒಂದು ವಿಧವಾದ ಸಂದೇಹವುಂಟಾಗಿರುವುದಾಗಿ ತಿಳಿಯಬಂದಿದೆ. ಅದಕ್ಕೇನುಕಾರಣವೋ ತಿಳಿಯದು. ಸುಮಾರು ನಾವು ಈಗ ಒಂದು ತಿಂಗಳ ಹಿಂದೆ ನಡೆಸಿದ್ದ ದರೋಡೆಯ ವಿಷಯದಲ್ಲೇನಾದರೂ ಅವರಿಗೆ ಸಂಶಯವಿದೆಯೋ ಏನೋ ತಿಳಿಯದು? ನಾವು ಹೇಗಾದರೂ ಮಾಡಿ ಇನ್ನೊಂದು ತಿಂಗಳ ಕಾಲ ಕಳೆಯಬೇಕಾಗಿದೆ. ಆದ್ದರಿಂದ ನೀವೆಲ್ಲಾ ಹೆಚ್ಚಾಗಿ ಬೀದಿಯಲ್ಲಿ ತಿರುಗಾಡಬೇಡಿ: ಮತ್ತು ಹಾಗೆ ಬೀದಿಯಲ್ಲಿ ಹೋದರೂ ಜೊತೆಯಲ್ಲಿ ರಿವಾಲ್ವರುಗಳನ್ನು ತೆಗೆದುಕೊಂಡು ಹೋಗಬೇಡಿ. ಮದುವೆಯು ನೆರವೇರಿ ನಮ್ಮಿಷ್ಟವು ಕೈಗೂಡಿಬಿಟ್ಟರೆ ಸಾಕು.” ಎಂದು ಹೇಳಿ ಕುಳಿತುಕೊಂಡನು.

ಆಗ ಸಮೀಪದಲ್ಲೇ ಕುಳಿತಿದ್ದ ಈಶ್ವರಲಾಲನೆಂಬವನೊಬ್ಬನು ಮಾತನಾಡುವುದಕ್ಕಾಗಿ ಎದ್ದುನಿಂತನು. ಇವನು ಸರಿಯಾಗಿ ಆರುವರಡಿಗಳ ಎತ್ತರವೂ ಅದಕ್ಕೆ ತಕ್ಕ ಗಾತ್ರವೂ ಉಳ್ಳ ರಾಕ್ಷಸನಾಗಿದ್ದನು. ಅವನು ಅಲ್ಲಿದ್ದವರನ್ನು ಕುರಿತು " ಸಹೋದ ರರಾ! ನೀವೆಲ್ಲಾ ನಮ್ಮ ಪ್ರೀತಿಪಾತ್ರರಾದ ಯಜಮಾನರ ಮಾತನ್ನು ಕೇಳಿರುವಿರಿ. ಇಷ್ಟು ದಿವಸವೂ ಹೆದರದಿದ್ದ ನಾವು ಈಗತಾನೇ ಯಾಕೆ ಹೆದರಬೇಕು. ಸರ್ಕಾರದವರೂ ನಮ್ಮನ್ನೇನೂ ಮಾಡಲಾರರು. ನಿಮ್ಮಲ್ಲಿ ಹಾಗೇನಾದರೂ ಬಹಳ ಹೆದರಿಕೊಂಡಿರತಕ್ಕವರಿದ್ದರೆ ನಮ್ಮ ಗುಪ್ತಗೃಹದಲ್ಲಿ ಸ್ವಲ್ಪದಿವಸಗಳ ಮಟ್ಟಿಗೆ ವಾಸಮಾಡುತ್ತಿರಿ. ಅದರೊಳಗಾಗಿಮತ್ತೆರಡು ಮಂದಿ ಸಾಹುಕಾರರನ್ನು ಲೂಟಿಮಾಡಿಕೊಂಡು ಆ ಹಣದಿಂದ ಬೇರೆ ಬೇರೆ ಕಡೆ ಸುಖವಾಗಿ ಆ ಮೇಲೆ ವಾಸಮಾಡುತ್ತಿರಬಹುದು." ಎಂದು ಹೇಳಿ ಕುಳಿತನು. ಅಗ್ರಾಸನಾಧಿಪತಿಯು "ಹರಿಚಂದ್ರ! ನೀನೇನು ಹೇಳುವಿ! ಎಂದು ಕೂಗಿದನು.” ಭಾಸ್ಕರನು ಥಟ್ಟನೆ ಭಯಪಟ್ಟರೂ ಧೈರ್ಯವನ್ನು ತಂದುಕೊಂಡು "ಸಹೋದರರಾ! ನಾನು ಇನ್ನು ಹೆಚ್ಚಾಗಿ ಏನು ಹೇಳಲಿ? ಆದರೆ ನಮ್ಮ ಸಂಘವು ಜಯವನ್ನು ಹೊಂದಬೇಕಾಗಿದ್ದರೆ ದೊಡ್ಡಮನುಷ್ಯರ ಸಹಾಯವಿರಬೇಕು. ಇನ್ನು ಸ್ವಲ್ಪ ದಿವಸಗಳಲ್ಲೇ ಲಾಯರ್‌ ಕಾಳಿಕಿಶೋರರು ತಮ್ಮ ಮಗಳಾದ ಆನಂದಿಯೆಂಬ ವಿಧವೆಯನ್ನು ನನಗೆ ಮದುವೆ ಮಾಡಿಕೊಡುತ್ತಾರೆ. ಆ ಮೇಲೆ ನಮಗೆ ಅವರ ಸಹಾ 5