ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

32 ಕಾದಂಬರೀ ಸಂಗ್ರಹ

ಎಲ್ಲಿಯ ಸರ್ಕಾರ-ಬನ್ನಿ-ನಾವೆಲ್ಲಾ ಸರ್ಕಾರವನ್ನೇ ತಲೆಕೆಳಗುಮಾಡೋಣ, ಓಹೋ ನಮ್ಮ ಹೊಸ ಮನುಷ್ಯನೆಲ್ಲಿ " ಎಂದು ಹೇಳುವನು ” ಎಲ್ಲಿ ಇನ್ನಿಷ್ಟು ಮದ್ಯ ಕೊಡು ಹೊತ್ಕಾಯಿತಪ್ಪಾ ನಾನು ಹೊರಡುತ್ತೇನೆ (ಎಂದು ಬೀದಿಗೆ ಬಂದು ಭಾಸ್ಕರನು ಕೊಟ್ಟಿದ್ದ ಪುಡಿಯ ಮಾಹಾತ್ಮೆಯಿಂದ ಜ್ಞಾನ ಹೋಗಿ ನೆಲದಮೇಲೆ ಉರಳಿದನು.)

ಭಾಸ್ಕರನು:--ಸುತ್ತಲೂ ನೋಡಿ ಯಾರೂಇಲ್ಲದಿರುವುದನ್ನು ತಿಳಿದು ದೂರದಲ್ಲಿ ನಿಂತುಕೊಂಡಿದ್ದ ಗಾಡಿಯನ್ನು ಬರುವಂತೆ ಸನ್ನೇಮಾಡಿದನು. ಅವನು ಗಾಡಿಯೊಡನೆ ಬಂದಕೂಡಲೇ ಇಬ್ಬರೂ ಸೇರಿ ಹರಿಚಂದ್ರನನ್ನು ಗಾಡಿಯೊಳಕ್ಕೆ ಎತ್ತಿ ಕೂರಿಸಿ ಭಾಸ್ಕರನು ತಾನೂ ಕುಳಿತುಕೊಂಡು ಬಾಗಿಲನ್ನೂ ಕಿಟಕಿಗಳನ್ನೂ ಮುಚ್ಚಿ ಗಾಡಿಯನ್ನು ಮೆಲ್ಲಗೆ ಹೊಡೆಯುವಹಾಗೆ ಹೇಳಿದನು. ಗಾಡಿಯು ಹೋಗುತ್ತಿದ್ದ ಹಾಗೆಯೇ ಭಾಸ್ಕರನು ಹರಿಚಂದ್ರನ ಮೇಲಿನ ಉಡುಪುಗಳನ್ನು ಕಳಚಿಕೊಂಡು ತಾನು ಧರಿಸಿ ತನ್ನ ಮೀಶೆ ಮುಂತಾದವುಗಳನ್ನು ಅವನದರಹಾಗೇ ಮಾಡಿಕೊಂಡು ಗಾಡಿಯನ್ನು ನಿಲ್ಲಿಸುವಹಾಗೆ ಹೇಳಿ ತಾನು ಕೆಳಕ್ಕಿಳಿದು ಗಾಡಿಯನ್ನು ಗೋವಿಂದನಮನೆಗೆ ತೆಗೆದುಕೊಂಡುಹೋಗುವಹಾಗೆ ಹೇಳಿದನು. ಗಾಡಿಯು ಸ್ವಲ್ಪ ಹೊತ್ತಿಗೆಲ್ಲಾ ಗೋವಿಂದನ ಮನೆಯನ್ನು ಸೇರಿತು. ಅದನ್ನೇ ಕಾದಿದ್ದ ಗೋವಿಂದನು ತನ್ನ ಸೇವಕನ ಸಹಾಯದಿಂದ ಹರಿಚಂದ್ರನನ್ನು ಒಳಕ್ಕೆ ಸಾಗಿಸಿ ಅವನನ್ನೊಂದುಕಡೆ ಮಲಗಿಸಿ ಗಾಡಿಯವನನ್ನು ಕಾದಿರುವಹಾಗೆ ಅಪ್ಪಣೆಮಾಡಿದನು.

ಇತ್ತ ಗಾಡಿಯಿಂದಿಳಿದ ಭಾಸ್ಕರನು ಗೋಪ್ಯವಾದೊಂದು ಸ್ಥಳಕ್ಕೆ ಹೋಗಿ ಅಲ್ಲಿ ತನ್ನ ಚೀಲದಲ್ಲಿ ತುಂಬಿಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು ಒಂದು ಕನ್ನಡಿಯಿಂದ ದೀಪದ ಬೆಳಕಿನಲ್ಲಿ ತನ್ನ ಆಕಾರವನ್ನು ನೋಡಿಕೊಳ್ಳಲು ಹಚಂದ್ರನಹಾಗೇ ಕಂಡುಬರಲು ಇನ್ನು ಭಯವಿಲ್ಲವೆಂದು ಯೋಚಿಸಿ ನೆಟ್ಟಗೆ ತಾನು ಬೆಳಗ್ಗೆ ನೋಡಿಕೊಂಡು ಬಂದಿದ್ದ ಮನೆಯ ಬಳಿಗೆ ಹೋದನು. ಆಗಲೇ ಅನೇಕರು ಆ ಮನೆಯನ್ನು ಹೊಗುತ್ತಿದ್ದರು. ಭಾಸ್ಕರನು ತಾನೂ ಸಹಾ ಹಳಬನಂತೆ ಬಾಗಿಲಿಗೆ ಬರಲು ಅಲ್ಲಿದ್ದ ತರುಣರಿಬ್ಬರು " ಹರಿಚಂದ್ರಾ! ಗುಂಡಿಯೆಲ್ಲಿ? ನಿನಗೆಷ್ಟುದಿವಸ ಹೇಳುವುದು" ಎಂದರು. ಕೂಡಲೇ ಭಾಸ್ಕರನು ತನ್ನ ಕಿಶೆಯಲ್ಲಿಟ್ಟುಕೊಂಡಿದ್ದ ಗುಂಡಿಯನ್ನು ತೋರಿಸಲು ಅವರು ಇವನನ್ನು ಒಳಕ್ಕೆ ಬಿಟ್ಟುಬಿಟ್ಟರು, ಆಗಲೇ ಹತ್ತು ಗಂಟೆಯಾಗಿತ್ತು. ಮೆಂಬರುಗಳೆಲ್ಲಾ ಬಂದು ಸೇರಿದ್ದರು. ಇನ್ನು ಬರುವವರಾರೂ ಇಲ್ಲವೆಂದು ಹೊರಬಾಗಲು ಹಾಕಲ್ಪಟ್ಟಿತು, ನಮ್ಮ ಪಾಠಕರಿಗೆ ಈ ಮನೆಯು ಹೊಸದಲ್ಲವಾದ್ದರಿಂದ ಅದರ ವಿಷಯವಾಗಿ ಹೆಚ್ಚೇನೂ ಬರೆಯಬೇಕಾ