ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

36 ಕಾದಂಬರಿ: ಸಂಗ್ರಹ


 ಮೊಳೆಯನ್ನು ಅದುಮಿದರು. ಸ್ವಲ್ಪ ಹೊತ್ತಿಗೆಲ್ಲಾ ಎಲ್ಲೋ ಗಂಟೆಯ ಶಬ್ದವಾಗಿ ಒಂದು 
 ಸಣ್ಣಬಾಗಲು ನೆಲದಲ್ಲಿ ತೆರೆಯಲ್ಪಟ್ಟಿತು, ಭಾಸ್ಕರನು ಧೈರ್ಯವಾಗಿ ಒಳಕ್ಕೆ ಮೆಟ್ಟಿಲುಗಳನ್ನು 
 ಇಳಿದುಹೋಗಲು ಬಾಗಲನ್ನು ತೆರೆದ ಮನುಷ್ಯನು  'ಹರಿಚಂದ್ರಾ, ಈ ದಿನದ ಕೊಳ್ಳೆಗೆ 
 ನೀನೇಕೆ ಹೋಗಲಿಲ್ಲ' ಎಂದು ಹೇಳಿದನು.
          ಹರಿಚಂದ್ರ (ಭಾಸ್ಕರ)--ನನಗೆ ಅದರ ವಿಷಯವೇನೊ ಗೊತ್ತಿಲ್ಲವು, ನಾನು 
 ಹಗಲೆಲ್ಲಾ ಅಡಗಿಕೊಂಡಿದ್ದೆನು.  ನನ್ನ ಮೇಲೆ ಪೊಲೀಸಿನವರಿಗೆ ಕಣ್ಣು ಇರುವಹಾಗೆ 
 ಕಾಣುತ್ತೆ.   
 ಈ ದಿನದ ಕೊಳ್ಳೆ ಎಲ್ಲಿ ? 
    ಮನುಷ್ಯ :--ಈ ದಿವಸ ನಮ್ಮವರು ಹದಿನೆಂಟು ಜನಗಳು ಸೇರಿ ಸುರತಪುರದ 
 ಜಹಗೀರ್‌ದಾರನನ್ನು ಕೊಳ್ಳೇಹೊಡೆಯಲು ಹೋಗಿರುತ್ತಾರೆ. ಏನಿದ್ದರೂ ಹತ್ತು ಲಕ್ಷ 
 ರೂಪಾಯಿಗಳಿಗೆ ಕಮ್ಮಿ ಇಲ್ಲ.  ಅದೋ ಆ ಕೊಠಡಿಯಲ್ಲಿ ನೀನಿರು. ಇಮೋ ಈ ಕೊಠಡಿಯ 
 ಸವಿಾಪಕ್ಕೆ ಮಾತ್ರ ಬರಬೇಡ.
 ಭಾಸ್ಕರನು, ಬರಬೇಡವೆಂದು ಹೇಳಿದ ಕೊಠಡಿಯಲ್ಲಿಯೇ ಏನೋ ಇದೆಯೆಂದು 
 ತಿಳಿದುಕೊಂಡನು. ಆ ಗುಪ್ತ ಗೃಹವು ಭೂಮಿಯೊಳಗಿದ್ದರೂ ಮನೆಯಹಾಗೆ ಇದ್ದಿತು. 
 ಉದ್ದವಾದ ಕೊಳವಿಗಳನ್ನು ನೆಟ್ಟು ಅವುಗಳ ಮೂಲಕ ಯಂತ್ರಗಳ ಸಹಾಯದಿಂದ 
 ಗಾಳಿಯನ್ನು ಎಳೆದುಬಿಡುತ್ತಿದ್ದರು. ಅನೇಕ ದೀಪಗಳು ಉರಿಯು ತ್ತಿದ್ದವು. ಹೊರಗಿನ 
 ಪ್ರಪಂಚದ ವಿಷಯವು ಸ್ವಲ್ಪವಾದರೂ ಕೇಳಿಬರುತ್ತಿರಲಿಲ್ಲ.
 ಮಾರನೇದಿವಸ ಬೆಳಗ್ಗೆ ಕಲ್ಕತ್ತಾ ನಗರವೆಲ್ಲಾ ಒಂದು ಘೋರವಾದ ಡಕಾ ಯಿತಿ ಮತ್ತು ಕೊಲೆ 
 ಇವುಗಳ ವಿಷಯವನ್ನು ಕೇಳಿ ಭಯವನ್ನೂ ಆಶ್ಚರ್ಯವನ್ನೂ ಹೊಂದಿತು. ಸುರತಪುರದ 
 ಜಹಗೀರ್ದಾರನ ಮನೆಯನ್ನು ಅನೇಕ ಡಕಾಯಿತೀ ಕಳ್ಳರು ಆಯುಧಪಾಣಿಗಳಾಗಿ ನುಗ್ಗಿ, 
 ತಡೆಯಲು ಬಂದ ಹತ್ತು ಜನ ಸೇವಕರಲ್ಲಿ ಆರುಜನರನ್ನು ಕೊಂದು ಉಳಿದ ನಾಲ್ವರನ್ನು 
 ಬಹಳ ಘಾಯಮಾಡಿ ಜಮಿನ್ದಾರ ನನ್ನೂ ಅವನ ಹೆಂಡತೀಮಕ್ಕಳನ್ನೂ ಕಂಬಗಳಿಗೆ ಕಟ್ಟಿ 
 ಹಾಕಿಬಿಟ್ಟು ಐದಾರು ಲಕ್ಷ ರೂಪಾಯಿಬಾಳುವ ಜವಾಹಿರಿಯನ್ನೂ ಮೂರು ಲಕ್ಷ 
 ರೂಪಾಯನ್ನೂ ಹೊತ್ತು ಕೊಂಡು ಹೋದರೆಂದು ಕೇಳಲು ಯಾರಿಗೆ ತಾನೇ 
 ಭಯವಾಗಲಾರದು ? ಆ ದಿವಸದ ವೃತ್ತ ಪತ್ರಿಕೆಗಳೂ ಆ ವಿಷಯವನ್ನೇ ಕುರಿತು 
 ಮಾತನಾಡುತ್ತಿದ್ದವು. ಒಂದು ಪತ್ರಿಕೆಯು " ಬಂದಿದ್ದ ಕಳ್ಳರೆಲ್ಲಾ ಮುಖಕ್ಕೆ ಗುರುತು (Mark) 
 ಹಾಕಿಕೊಂಡು ಕೈಗಳಲ್ಲಿ ರಿವಾಲ್ವರುಗಳನ್ನು ಹಿಡಿದುಕೊಂಡಿದ್ದರೆಂತಲೂ, ಅವರಲ್ಲನೇಕರು 
 ಇನ್ನೂ.