ಪುಟ:ನನ್ನ ಸಂಸಾರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಧುಸೂದನ



                                                                                  37
 ತರುಣರಾಗಿಯೇ ಕಂಡುಬಂದರೆಂದೂ ” ತಿಳಿಸಿತ್ತು. ಪೋಲೀಸಿನವರು ಅನೇಕ ತರುಣರನ್ನ ಸಂಶಯದಮೇಲೆ 
 ಹಿಡಿದು ಸೆರೆಮನೆಗೆ ಕೊಂಡೊಯ್ದರು. ಕಳ್ಳರನ್ನು ಪತ್ತೆ ಮಾಡಿಕೊಟ್ಟವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ 
 ಬಹುಮಾನ ಕೊಡುವುದಾಗಿ ಪ್ರಸಿದ್ಧ ಪಡಿಸಿದರು.
    ಅದೇ ದಿವಸ ಎಂ ಸಂಘದ ಮೆಂಬರುಗಳಲ್ಲ ನೇಕರು, ಗುಪ್ತಗೃಹಕ್ಕೆ ಬಂದ ವಾಸಮಾಡಲಾರಂಭಿಸಿದರು. 
 ಅವರ ಮುಖ್ಯಸ್ಥನು ಏನನ್ನೋ  ಅನೇಕರ ಕೈಲಿ ಹೊರಿಸಿ ಕೊ೦ಡುಬಂದು ಸಿದ್ದವಾಗಿದ್ದ ಗುಳಿಯಲ್ಲಿ 
 ಹೂಳಿಬಿಟ್ಟು ಹೊರಟುಹೋದನು. ಭಾಸ್ಕರನು ಅದೇನೆಂಬುದನ್ನು ತಿಳಿದುಕೊಂಡನು. ಆದರೆ ಅವನಿಗೆ 
 ಕೊಲೆಗಳ ವಿಷಯವೂ ದರೋಡೆಯ ವಿಷಯವೂ ಏನೂ ತಿಳಿಯದು. ಅಲ್ಲಿದ್ದ ವರೂ ಸಹ ಯಾವ 
 ಮಾತನ್ನೂ ಆಡಲಿಲ್ಲ. ಭಾಸ್ಕರನು ಅನೇಕಸಲ ಹೋಗಕೂಡದೆಂದು ಹೇಳಲ್ಪಟ್ಟಿದ್ದ ಕೊಠಡಿಯ ಕಡೆಗೆ 
 ಹೋಗಿ ಹಿಂದಕ್ಕೆ ಕಳುಹಲ್ಪಟ್ಟಿದ್ದನು. ಆದರೆ, ಎಲ್ಲಾ ವಿಷಯ ಗಳಲ್ಲಿಯೂ ಹರಿಚಂದ್ರನಂತೆ ನಟಿಸುತ್ತಿದ್ದ 
 ಭಾಸ್ಕರನ ವಿಷಯವಾಗಿ ಯಾರೂ ಸಂಶಯಪಡಲಿಲ್ಲ. ಅದೇ ದಿವಸ ಮಧ್ಯಾನ್ನ ಭಾಸ್ಕರನು ನೀರು 
 ಕುಡಿಯುತ್ತಿರುವಾಗ ಆ ಕೊಠಡಿಯಿಂದ ಒಬ್ಬ ಮನುಷ್ಯನು ಹೊರಕ್ಕೆ ಬಂದನು, ಭಾಸ್ಕರನು 
 ಹೋರಗಿನಿ೦ದ  ಅವನನ್ನು ನೋಡಲು ತಕ್ಷಣವೇ ಅವನಾರೆಂಬುದು ತಿಳಿಯಬಂತು. ಆ ಮನುಷ್ಯನ 
 ಮುಖವು ಬಾಡಿಹೋಗಿ ಬೆಳಿತುಕೊಂಡಿದ್ದರೂ, ಅವನು ಕುಡುಕನಂತೆ ನಡೆದರೂ, ಸೂಕ್ಷ್ಮದೃಷ್ಟಿಯುಳ್ಳ 
 ಭಾಸ್ಕರನು ತಾನು ಫೋಟೋ (Photo) ವಿನಲ್ಲಿ ನೋಡಿದ ಮಧುಸೂದನನು ಅವನೇ ಎಂದು 
 ತಿಳಿದುಕೊಂಡನು. ಆದರೆ ಅವನ ಕೂಡ ಮಾತನಾಡಲು ಆಗಲಿಲ್ಲವು. ಭಾಸ್ಕರನು ತಾನು ಬಂದಕಾರ್ಯವು 
 ಮುಗಿಯಿತೆಂದು ತಿಳಿದು ಕೊಂಡನು.
    ಕಲ್ಕತ್ತಾ ಪಟ್ಟಣದ ಪೊಲೀಸ್ ಇ೯ಸ್ಪೆಕ್ಟರ್‌ಗಳಲ್ಲೊಬ್ಬನಾದ ಮೋಸೆಸ್ ಎಂಬುವನು ಅನೇಕ 
   ದಿವಸಗಳಿಂದಲೂ, 'ಎ೦' ಪಂಗಡದವರ ಮೇಲೆ ಕಣ್ಣಿಟ್ಟಿದ್ದನು. ಅವರು ಚರ್ಮದ ವ್ಯಾಪಾರಿಯನ್ನು 
  ಲೂಟಿಮಾಡಿದಾಗ ಅವನು ಕೆಲವರನ್ನು ಹಿಂಬಾಲಿಸಿ ಮತ್ತೆಮಾಡುವುದರಲ್ಲಿದ್ದನು.  ಆದರೆ ಅವರು 
  ಅವನಿಗಿಂತಲೂ ಚುರುಕಾಗಿದ್ದದ್ದ ರಿಂದ ತಪ್ಪಿಸಿಕೊಂಡರು. ಅದರ ವಿಷಯವಾಗಿಯೇ ಅವನು ಹಗಲೂ 
  ರಾತ್ರಿಯೂ ಕಷ್ಟ ಪಡುತ್ತಿದ್ದನು, ಈ ವಿಷಯವು ' ಎ೦' ಪಂಗಡದ ಮುಖ್ಯಸ್ಥನಾದ ವಿಶ್ವನಾಥ ನೆಂಬ 
  ಒಬ್ಬ ಬಿ.ಎ.  ಬಿ.ಎಲ್. ಪರೀಕ್ಷೆಯನ್ನು ಕೊಟ್ಟಿದ್ದವನಿಗೆ ತಿಳಿದಿದ್ದಿತು. ಅದೇ ವಿಷಯವಾಗಿಯೇ ಅವನು 
  ಸ್ವಲ್ಪ ದಿವಸಗಳ ಹಿಂದೆ ನಡೆದ ವಿಾಟಿಂಗಿನಲ್ಲಿ ಸೂಚಿಸಿ.