ಪುಟ:ನನ್ನ ಸಂಸಾರ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

38 ಕಾದಂಬರೀ ಸಂಗ್ರಹ

  ದ್ದನು. ವಿಶ್ವನಾಥನು ಮೋಸೆಸ್ಸನ್ನು ಹಿಂಬಾಲಿಸುತ್ತಲೂ ಅವನು ಇವನನ್ನು ಹಿಂಬಾಲಿ ಸುತ್ತಲೂ ಇದ್ದರು. 
  ಈ ದಿವಸ ನಡೆದ ಸುರತಪುರದ ಡಕಾಯತೀ ವಿಷಯವನ್ನು ಕೇಳಿದ ಕೂಡಲೇ ಅವನಿಗೆ 'ಎಂ' ಕೂಟದವರ 
  ಮೇಲೆ ಸಂದೇಹವುಂಟಾಯಿತು. ಅವನು ಇದಕ್ಕೆ ಮೊದಲೇ ಅವರ ಕಾಳೀಬೀದಿಯಲ್ಲಿದ್ದ ಮನೆಯನ್ನು ನೋಡಿ 
  ತಿಳಿದುಕೊಂಡಿದ್ದನು. ಆದ್ದರಿಂದ 'ಈ ದಿನ ಸಾಯಂಕಾಲ ಆರುಗಂಟೆಗೆ ಸರಿಯಾಗಿ ಸಂಗಡ ಒಬ್ಬ ಪೊಲೀಸ್ 
  ಜವಾನನನ್ನೂ ಕರೆದುಕೊಂಡು ಕಾಳಿಬೀದಿಯ ಮನೆಗೆ ಬಂದು ಬೀದಿಯಲ್ಲಿದ್ದ ಗಂಟೆಯ ದಾರವನ್ನು 
  ಹಿಡಿದೆಳದನು. ಸ್ವಲ್ಪಹೊತ್ತಿಗೆಲ್ಲಾ ಒಬ್ಬ ತರುಣನು ಬಂದು ಕರೆಯಲು ಕಾರಣವೇನೆಂದು ಕೇಳಿದನು.
  ಮೋಸೆಸ್ :--ಅಯ್ಯಾ ನಾನು ನಿಮ್ಮ ಕೂಟದ ಯಜಮಾನನನ್ನು ನೋಡಬೇಕು. ನಾನು ಸರ್ಕಾರದ 
              ಪರವಾಗಿ ಬಂದಿರುತ್ತೇನೆ.
  ತರುಣ :-- ತಾವು ಸರ್ಕಾರದ ಪರವಾಗಿ ಬಂದಿದ್ದರೆ ತಕ್ಷಣವೇ ಒಳಕ್ಕೆ ಬರಬಹುದು. ನಮ್ಮ 
             ಯಜಮಾನರು ಓದುತ್ತಾ ಕುಳಿತಿರುವರು.
  ಮೋಸೆಸ್ಸನು ತಾನು ಬರುವಾಗ ತನ್ನನ್ನು ತಡೆಯುವರೆಂದೂ, ಅದಕ್ಕಾಗಿ ಎರಡು ರಿವಾಲ್ವರುಗಳನ್ನು ತೆಗೆದುಕೊಂಡು ತನ್ನ ಸಂಗಡ ಕರತಂದಿದ್ದ ಸೇವಕರಿಗೆ ಏನಾದರೂ ಜಗಳವಾಗುವಹಾಗೆ ಕಂಡುಬಂದರೆ ತಕ್ಷಣವೇ ಸಮಿಾಪದಲ್ಲಿದ್ದ ಪೊಲೀ ಸ್‌ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಸಹಾಯವನ್ನು ತರಬೇಕೆಂದೂ ಹೇಳಿಕೊಟ್ಟಿದ್ದನು. ಆದರೆ ಅವನು ಇದನ್ನೆಲ್ಲಾ ಅರಿತ ಎಶ್ವನಾಥನ ಬುದ್ದಿಯನ್ನು ಇನ್ನೂ ಅರಿತಿರಲಿಲ್ಲ. ಇವನು ಬರುವನೆಂದು ತಿಳಿದೇ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದನು. ತನ್ನನ್ನು ಯಾವ ವಿಧವಾದ ಅಡಚನೆಯನ್ನೂ ಮಾಡದೆ ಒಳಕ್ಕೆ ಬಿಟ್ಟುದನ್ನು ನೋಡಿ ಮೋಸೆಸೃನು ಆಶ್ಚರ್ಯಪಡುತ್ತಾ ಒಳಕ್ಕೆ ಪ್ರವೇಶಮಾಡಿದನು. ಅಲ್ಲಿ "ಹಾಲಿನ (Ha11) ಮಧ್ಯದಲ್ಲಿ ಎರಡು ಮೂರು ಕುರ್ಚಿಗಳೂ ಒಂದು ದೊಡ್ಡ ಮೇಜೂ ಇಡಲ್ಪಟ್ಟಿದ್ದವು. ಒಂದು ಸುಖಾಸನ (Easy chair) ದಮೇಲೆ ವಿಶ್ವನಾಥನು ಕುಳಿತುಕೊಂಡು ಏನನ್ನೋ ಓದುತ್ತಿದ್ದನು. ಮೋಸೆಸ್ಸನು ಒಳಕ್ಕೆ ಬಂದುದನ್ನು ನೋಡಿ ಓದುತ್ತಿದ್ದ ವಸ್ತು ಕವನ್ನು ಮುಚ್ಚಿಟ್ಟು ಬಂದಂಥಾವನಿಗೆ ವಂದಿಸಿ ಒಂದು ಕುರ್ಚಿಯಮೇಲೆ ಕುಳಿತುಕೊಳ್ಳುವಹಾಗೆ ಹೇಳಿ, ಬಂದ ಕೆಲಸವೇನೆಂದು ಕೇಳಿದನು. ಮೊಸೆಸ್ಸು (ನಗುತ್ತಾ) ನಿಮಗೇ ತಿಳಿದಿರಬಹುದು. ನೀವು ನನ್ನನ್ನು ಮೋಸಪಡಿಸುವುದಕ್ಕೆ ಪ್ರಯತ್ನ ಪಟ್ಟರೆ ಅದು ಸಾಗಲಾರದು.