ವಿಶ್ವನಾಥ:-----ಸ್ವಾಮಿಾ ! ನೀವೇನು ಹೇಳುತ್ತಿರುವಿರಿ? ನೀವು ಹೇಳುವದೊಂದೂ ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ ತಿಳಿದುಕೊಳ್ಳಲಿ.?
ಮೋಸೆಸ್:-ಅಯ್ಯೋ! ಸಾಕು!!! ವೃಥಾ ಏಕೆ, ನನ್ನನ್ನು ಮೋಸಗೊಳಿಸಲು ಪ್ರಯತ್ನ ಮಾಡುವಿರಿ. ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟೀ ಮಾಡಲಿಲ್ಲವೆಂದೂ ನಿನ್ನೇ ದಿವಸ ನೀವು ದರೋಡೆಯನ್ನು ನಡಿಸಲಿಲ್ಲವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
ವಿಶ್ವನಾಥ:-ಇದೀಗ ಸರಿಯಾದ ಮಾತು. ಏನು? ನಾನು ದರೋಡೇ ಮಾಡತಕ್ಕ ಕಳ್ಳನೋ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದಕ್ಕಾಗಿ ಬಂದಿರುವಿರಲ್ಲವೇ? ವಾರಂಟನ್ನು ಸ್ವಲ್ಪ ತೋರಿಸಿ! ನೋಡೋಣ! ಯಾರಾರನ್ನು ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ? ಸ್ವಾಮೀ! ನಿಶ್ಚಯವಾಗಿಯೂ ತಮ್ಮ ಮಾತುಗಳು ನನಗೆ ಆಶ್ಚರ್ಯವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ ಕಷ್ಟಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ ಕೊಲೆಪಾತಕನೆಂದೂ!! ಅಪರಾಧವನ್ನು ಹೊರಿಸುವಿರಾ? ನೀವು ಪೋಲೀಸ್ ಇಲಾಖೆಗೇ ಗೌರವವನ್ನು ತರತಕ್ಕವರಲ್ಲವೇ!!!
ಮೋಸೆಸ್:-(ಆಶ್ಚರ್ಯದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗಳೆಲ್ಲಾ ಹಾಳಾದವೆಂದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲದಿದ್ದರೆ ನೀವು ಇಷ್ಟು ದಿನಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ. ಈಗತಾನೇ ಏನು? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ?
ವಿಶ್ವನಾಥ:-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕುವಿರಿ? ಒಂದುವೇಳೆ ನಾನು ನಿಮ್ಮನ್ನು ತಡದರೋ? ಪೋಲೀಸ್-(ಆಹಾ ಈಗಲೀಗ ಸಿಕ್ಕಿಬಿದ್ದನೆಂದು ಯೋಚಿಸಿ) ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮೆಯಿಂದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮೆಯಿಂದಲೂ ನಾನು ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ ಕ್ಷಣದಲ್ಲಿ ಕೈದಿಯನ್ನಾಗಿ ಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
ವಿಶ್ವನಾಥ:-ಸ್ವಾಮೀ ನೀವು ಅಷ್ಟು ಆಗ್ರಹಮಾಡಿದಮೇಲೆ ನಾನೇನು ಮಾಡುವದು? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ