ಪುಟ:ನನ್ನ ಸಂಸಾರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

47 ಮಧುಸೂದನ ಅವನ ಕ್ಷಮಾಪಣೆಯನ್ನು ಕೇಳಿದನು. ಕರುಣಾಶಾಲಿಯಾದ ಸೋಮಸುಂದರನು ತನ್ನ ಮಗನನ್ನು ಕ್ಷಮಿಸಿ ಅವನಿಗೆ ಪ್ರಾಯಶ್ಚಿತ್ತಮಾಡಿಸಿ ಅನೇಕ ಬ್ರಾಹ್ಮಣರಿಗೆ ದಾನಾದಿಗಳನ್ನು ಕೊಟ್ಟನು. ಭಾಸ್ಕರನನ್ನು ಆಗ ಅವನು ಯಾವ ರೀತಿಯಲ್ಲಿ ಮಾತನಾಡಿಸಿದನೆಂಬುದನ್ನು ಹೇಳಬೇಕಾಗಿಲ್ಲ. ಸೆರೇ ಸಿಕ್ಕಿದ ಏಳುಮಂದಿಯನ್ನೂ ವಿಚಾರಣೇ ಮಾಡುವುದಕ್ಕಾಗಿ ಬೇರೆ ಒಂದು ನ್ಯಾಯಸ್ಥಾನವು ಏರ್ಪಾಡಾಯಿತು. ವಿಚಾರಣೆಯ ದಿವಸ ನ್ಯಾಯಸ್ಥಾನವೆಲ್ಲಾ ಜನಗಳಿಂದ ಕಿಕ್ಕಿರಿದು ಹೋಗಿತ್ತು. ಒಂದು ಬೆಂಚಿನ ಮೇಲೆ ಮಧುಸೂದನ, ಸೋಮ ಸುಂದರ, ತ್ರಿಯಂಬಕಶಾಸ್ತ್ರಿ ಗೋವಿಂದ ಮೊದಲಾದವರು ಕುಳಿತಿದ್ದರು. ಅಪರಾಧಿ ಗಳ ಪಕ್ಷ ಯಾವ ಲಾಯರೂ ಬಂದಿರಲಿಲ್ಲ. ಸರ್ಕಾರದ ಕಡೆ ಸಾಕ್ಷಿ ಹೇಳುವುದಕ್ಕಾಗಿ ಬಂದಿದ್ದ ಹರಿಚಂದ್ರನು ಅಪರಾಧಿಗಳ ಪಕ್ಕದಲ್ಲಿ ನಿಂತಿದ್ದನು. ಭಾಸ್ಕರನೂ ಇತರ ಪೋಲೀಸ್ ಅಧಿಕಾರಿಗಳೂ ಕುರ್ಚಿಗಳ ಮೇಲೆ ಕುಳಿತಿದ್ದರು. ಜನಗಳೆಲ್ಲರೂ ಭಾಸ್ಕರನನ್ನೇ ನೋಡುತ್ತಿದ್ದರು. ನ್ಯಾಯಾಧಿಪತಿಯು ಬಂದು ತನ್ನಾಸನದಲ್ಲಿ ಕುಳಿತು ಮಧುಸೂದನ, ಹರಿಚಂದ್ರ ಇವರ ಹೇಳಿಕೆಗಳನ್ನು ತೆಗೆದುಕೊಂಡನು. ಮಧುಸೂದನನ ಹೇಳಿಕೆಯಿಂದ ಅವನು ತಾನು ಮಾಡಿದ್ದ ಸಾಲದ ಭಯಕ್ಕಾಗಿ ವಿಶ್ವನಾಥನ ಮಗಳನ್ನು ಮದುವೆಯಾಗುವುದಾಗಿ ಮಾತುಕೊಟ್ಟಿದ್ದಹಾಗೂ, ತನ್ನ ತಂದೆಯ ಬಳಿ ಅದನ್ನು ಹೇಳುವುದಕ್ಕೆ ಹೆದರಿ, ಅವನ ಮಾತಿನಂತೆ ಸರಳಬಾಲೆಯನ್ನು ವಿವಾಹ ಮಾಡಿಕೊಳ್ಳುವುದಕ್ಕೊಪ್ಪಿದ ವಿಷಯವು ವಿಶ್ವನಾಥನಿಗೆ ತಿಳಿದು ಮದುವೆಯ ದಿನ ಸವೇ ಬಂದು ಎಲ್ಲಾ ಸಂಗತಿಗಳನ್ನೂ ಬಹಿರಂಗಪಡಿಸುವುದಾಗಿ ಹೇಳಿ ಕಳುಹಲು, ತಾನು ಹೋಗಿ ತನ್ನ ಕೊಠಡಿಯಲ್ಲಿ ಆರು ಜನಗಳೊಡನೆ ಬಂದಿದ್ದ ವಿಶ್ವನಾಥನನ್ನು ಕಂಡಹಾಗೂ ಅವನು ಕೂಡಲೇ ತನ್ನನ್ನು ಹಿಡಿದು ಕೈಕಾಲುಕಟ್ಟಿ ಅವರಿಗೆ ತಾನೇ ಹೇಳಿದ್ದ ಸುರಂಗ ಮಾರ್ಗವಾಗಿ ಸಾಗಿಸಿಕೊಂಡು ಹೋಗಿ ಕಲ್ಕತ್ತೆಗೆ ಕರೆದುತಂದು ಅಲ್ಲಿ ಗುಪ್ತಗೃಹದಲ್ಲಿ ಶೆರೇ ಇಟ್ಟಹಾಗೂ ಬಲವಂತದಿಂದಲೂ, ಹೆದರಿಕೆಯಿಂದಲೂ ಅವರ ಮಾತಿಗೊಪ್ಪಿ ವಿಶ್ವನಾಥನ ಕನ್ಯೆಯನ್ನು ವಿವಾಹಮಾಡಿಕೊಳ್ಳುವುದರಲ್ಲಿದ್ದೆ ನೆಂದೂ, ಮಧುಸೂದನನು ತಿಳಿಸಿದನು. ಹರಿಚಂದ್ರನು ಅಲ್ಲಿದ್ದ ಏಳು ಅಪರಾಧಿಗಳನ್ನೂ ತೋರಿಸಿ ಅವರೆಲ್ಲರೊಡನೆ ತಾನೂ ಚರ್ಮದ ವ್ಯಾಪಾರಿಯನ್ನು ಸುಲಿಗೇ ಮಾಡಿದಹಾಗೂ ಆ ಮೇಲೆ ನಡೆದ ಕೃತ್ಯಗಳಲ್ಲಿ ಭಾಸ್ಕರನ ದೆಶೆಯಿಂದ ತಾನು ಸೇರಿರಲಿಲ್ಲವೆಂದೂ ತಿಳಿಸಿದನು.