೧೪ ಕಾದಂಬರೀಸಂಗ್ರಹ ಆಗ ಶಂಕರನು « ಅಮ್ಮಾ ! ಒಂದು ಮೊಸಳೆಯು ನನ್ನ ಪಾದವನ್ನು ಹಿಡಿದು ಶೆಳೆಯುತ್ತಿದೆ; ಏನುಮಾಡಲಿ? ಪ್ರಾಣಾಪಾಯಕ್ಕೆ ಸಿಕ್ಕಿದೆನಲ್ಲಾ ! ಅನ್ಯಾಯವಾಗಿ ದುರ್ಮರಣವಾಗುವ ಸಂದರ್ಭವು ಬ೦ತು; ನನ್ನ ಪ್ರಾಣಗಳು ಇನ್ನು ಕೆಲವು ನಿಮಿಷ ಗಳು ಮಾತ್ರ ಬದುಕಬಯವಾದಷ್ಟು ವ್ಯವಧಾನವಿದೆ; ನಾನು ಬದುಕಿರಬೇಕೆಂದು ನಿನಗಿಷ್ಟವಿದ್ದರೆ ಸನ್ಯಾಸಕ್ಕಾದರೂ ತಡಮಾಡದೆ ಅಪ್ಪಣೆಯನ್ನು ಕೊಡು,” ಒಂದು ವ್ಯಸನದಿಂದ ಘಟ್ಟಿಯಾಗಿ ಕೂಗಿದನು. ನದಿಯ ದಡದಮೇಲಿದ್ದ ಬ್ರಾಹ್ಮಣರು, ಸನ್ಯಾಸಕ್ಕಾದರೂ ಅಪ್ಪಣೆ ಕೊಡ ಬಹುದೆಂದರು. ಆಗ ಆಕಾಶವಾಣಿಯು "ಈಗಲೆ ತಡಮಾಡದೇ ಸನ್ಯಾಸಗ್ರಹಣವಂ ಮಾಡಿ ದರೆ ಇನ್ನೂ ಕೆಲವುಕಾಲ ಬದುಕಬಹುದು” ಎಂದಿತು. - ಆರ್ಯಾಂಬೆಯು ಇದನ್ನೆಲ್ಲಾ ನೋಡಿ ಬೇರೆ ಮಾರ್ಗವಿಲ್ಲದೇ"ಮಗುವೇ ! ನೀನು ಸನ್ಯಾಸವನ್ನಾ ದರೂ ತೆಗೆದುಕೊಂಡು ಸುಖವಾಗಿ ಬದುಕು" ಎಂದು ಚಿಂತೆಯಿಂದ ಕೂಗಿ ಹೇಳಿದಳು, - ತಾಯಿಯ ಉತ್ತರವನ್ನು ಕೇಳಿದಕೊಡಲೇ ಶಂಕರನು ಈಷಣಾಧ್ಯಭಿಮಾನ ಗಳಂ ತೊರೆದು ಬ್ರಹೀಭೂತನಾಗಿ « ಅಭಯಂ ಸರ್ವಭೂತೇಭ್ಯಃ" ಎಂದು ಎರಡು ಕೈಗಳನ್ನೂ ಮೇಲಕ್ಕೆತ್ತಲು, ನಾವು ಶಂಕರನನ್ನು ಬಿಟ್ಟು ಗಂಧರ್ವರೂಪವಂ ಪೊಂದಿ ಶಂಕರಯತಿಗೆ ನಮಸ್ಕರಿಸಿ ಹೊರಟುಹೊ ಯಿತು. - ಶಂಕರರು ಸಂಸಾರಸಾಗರವಂ ದಾಂಟಿದಮೇಲೆ ಸ್ನಾನಮಾಡಿಕೊಂಡು ಮೇಲಕ್ಕೆ ದ್ದು ಬಂದು ತಾಯಿಗೆ ವಂದಿಸಿ, ದುಃಖಪಡುತ್ತಿದ್ದ ತಾಯಿಯಂ ಸಮಾಧಾನಗೊಳಿಸಿ ಕಷ್ಟಕಾಲದಲ್ಲಿ ಸ್ಮರಿಸಿಕೊಳ್ಳುವಂತೆ ಹೇಳಿ, ಅವಳಪ್ಪಣೆಯಂ ಪಡೆದು ಕ್ರಮಸನ್ಯಾ ಸವಂ ತೆಗೆದುಕೊಂಡು ನೈಷ್ಕರ್ಮಸಿದ್ದಿಯನ್ನು ಹೊಂದಬೇಕೆಂದು ತಕ್ಕ ಗುರುವನ್ನು ಹುಡುಕುತ್ತಾ ಹೊರಟರು. ಆ ಅಗ್ರಹಾರದ ಜನರು ಶಂಕರರನ್ನು ಆ ದಿನ ಅಲ್ಲಿಯೇ ಇದ್ದು ಮಾರ ನೆಯದಿನ ಹೊರಡಬಹುದೆಂದರು, ಶಂಕರರು ಅವರ ಮಾತಿನಂತೆ ಆ ದಿನವೆಲ್ಲಾ ಅಲ್ಲಿನ ಕೃಷ್ಣ ದೇವಾಲಯದಲ್ಲಿ ಜನರಿಂದ ಸೇವಿಸಲ್ಪಡುತ್ತಿದ್ದರು.
ಪುಟ:ನನ್ನ ಸಂಸಾರ.djvu/೧೫೨
ಗೋಚರ