ಪುಟ:ನನ್ನ ಸಂಸಾರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧ಲೆ ಕಾದಂಬರೀಸಂಗ್ರಹ

   ಅವರ ಅಪ್ಪಣೆಯಂತೆ ಆಚಾರ್ಯರು ಅವರಿಗೆ ವಂದನಾದಿಗಳನ್ನುಮಾಡಿ ಮಹೇಶ್ವರನ ರಾಜಧಾನಿಯಾದ ಕಾಶಿಗೆ ಹೋಗಿ ಭಾಗೀರಥಿಯಲ್ಲಿ ಸ್ನಾನಮಾಡಿ, ಅಲ್ಲಿ ಗಂಗಾ ಷ್ಟಕವೆಂಬ ಸ್ತೋತ್ರವನ್ನು ರಚಿಸಿ, ಕೈತ್ರಯಾತ್ರೆಯಂ ನೆರವೇರಿಸಿ ಧುಂಡಿರಾಜ, ಭೈರ ವಮಾಧವಾದ್ಯಷ್ಟಕಸ್ತವಗಳನ್ನು ಹೇಳಿ ದೇವಾದಿದೇವನಾದ ವಿಶ್ವೇಶ್ವರನನ್ನು ಪೂಜಿಸಿ, ಕಾಶಿಜನಗಳಿಂದ ಸೇವಿಸಲ್ಪಡುತ್ತಲೂ, ಸನ್ಯಾಸವನ್ನು ಪ್ರಚಾರಮಾಡುತ್ತಲೂ ಇದ್ದರು.
                -->•<--
                 ಷಷ್ಠವಲ್ಲರೀ.
                ---------
     ಕಾಶ್ಯಾಂ ವಸನ್ನಿ ಖಿಲದುಷ್ಟ ಮತಾನಿ ಭಿಂರ್ದ
     ಶಿಷ್ಯಂ ಸನಂದನಮವಾಪ್ತಮವೇಕ್ಷ್ಯ ತಸ್ಯ |
     ಚಕ್ರೇ ಹಿ ಪದ್ಮಚರಣಾಹ್ವಯಮಾತ್ಮಬುಧ್ಯಾ
     ಭಾಷ್ಯಾದಿಕಂ ಚ ಗಿರಿಜಾರಮಣಾನುಮತ್ಯಾ ||
               ----------

ಶಂ ಕರಾಚಾರ್ಯರು ಸನ್ಯಾಸಪ್ರಚಾರಮಾಡುತ್ತಿರುವ ಸಮಯದಲ್ಲಿ

  ಒಂದು ದಿನ ಒಬ್ಬ ಬ್ರಾಹ್ಮಣಬಾಲಕನು ಬಂದು ಆಚಾರ್ಯರಿಗೆ ನಮಸ್ಕರಿಸಿ ನಿಲ್ಲಲು, ಶಂಕರರು ಅವನನ್ನು “ನೀನು ದ್ವಿಜರಲ್ಲಿ ಯಾರು? ನಿನ್ನ ವಾಸವು ಎಲ್ಲಿ? ಇಲ್ಲಿಗೆ ಏತಕ್ಕೆ ಬಂದೆ?” ಎನ್ನಲು ಆ ಬಾಲಕನು"ಸ್ವಾಮಿ ! ನಾನು ದ್ವಿಜರಲ್ಲಿ ಬ್ರಾಹ್ಮಣನು; ನನ್ನ ವಾಸವು ಜೋಲದೇಶವು; ಈ ಸಂಸಾರಸಾಗರದಲ್ಲಿ ಮುಳಿ ಗಿದಂಥಾವನಾಗಿ ಏಳಲು ಶಕ್ತಿಯಿಲ್ಲದೇ, ಅದನ್ನು ನಿವಾರಿಸಲರ್ಹರಾದ ಗುರುಗಳನ್ನು ನಾನಾ ದೇಶಗಳಲ್ಲಿಯೂ ಹುಡುಕಿ ಎಲ್ಲಿಯೂ ಕಾಣದೇ ಇಲ್ಲಿಗೆ ಬಂದಿದ್ದೇನೆ; ಇದೇ ನನ್ನ ಉದ್ದೇಶವು; ಆದ್ದರಿಂದ ತಾವು ನನ್ನಲ್ಲಿ ದಯವಿಟ್ಟು ನನ್ನನ್ನು ತಮ್ಮ ಶಿಷ್ಯನನ್ನಾಗಿಮಾಡಿಕೊಳ್ಳಬೇಕು" ಎಂದು ಪ್ರಾರ್ಥಿಸಲಾಚಾರ್ಯರು, ತಮಗೆ ಆಹಿಂದಣರಾತ್ರಿಯಲ್ಲಿ ಬಿಂದುಮಾಧವಸ್ವಾಮಿಯು “ನನ್ನ ಅಂಶೋದ್ಭವನಾದ ಓರ್ವನು ಬಂದು ನಿನ್ನ ಶಿಷ್ಯನಾಗುವನು” ಎಂದು ಸ್ವಪ್ನದಲ್ಲಿ ಹೇಳಿದ್ದ‌ದ್ದು ನಿಜವೆಂದು ತಿಳಿದು ಅವನಿಗೆ ಸನ್ಯಾಸಾಶ್ರಮವಂ ಕೊಟ್ಟು ಸನಂದನನೆಂಬ ಹೆಸರಿನಿಂದ ಶಿಷ್ಯನನ್ನಾಗಿ ಮಾಡಿ ಕೊಂಡರು.