ಪುಟ:ನನ್ನ ಸಂಸಾರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




                                   ಶಂಕರಕಥಾಸಾರ                      ೧೯
                                                                     
              ಆ ಸನಂದನನ ಹಸ್ತಗಳಲ್ಲಿ ಶಂಖಚಕ್ರರೇಖೆಗಳೂ, ಹೃದಯದಲ್ಲಿ ವನಮಾ
       ಲಾವೈಜಯಂತೀ ರೇಖೆಗಳೂ, ಪಾದಗಳಲ್ಲಿ ಪದ್ಮರೇಖೆಗಲೂ, ಇದ್ದವು. ಆತನ ವಕ್ಷ          
       ಸ್ಥಲವು ವಿಶಾಲವಾಗಿದ್ದಿತು;ಆತನು ಆಜಾನುಬಾಹುವಾಗಿದ್ದನು; ನೇತ್ರಗಳು ಪದ್ಯಗಳಂತೆ 
       ವಿಸ್ತಾರವಾಗಿದ್ದವು; ಈ ಮೇಲಿನ ಲಕ್ಷಣಗಳಿಂದ ಅವನನ್ನು ವಿಷ್ಣಂಶಸಂಭೂತನೆನ್ನ 
       ಬಹುದಾಗಿದ್ದಿತು.
             ಆಚಾರ್ಯರು  ಅಲ್ಲಿರುವಾಗ ಪ್ರತಿದಿನವೂ ಒಂದೊಂದು ದೇವರುಗಳನ್ನು ಸ್ತುತಿ 
       ಸುತ್ತಾ ಅನೇಕಸಾವಿರ ಸ್ತೋತ್ರಗ್ರಂಥಗಳನ್ನೂ, ಆತ್ಮಬೋಧ, ಅಪರೋಕ್ಷಾನುಭೂತಿ, 
       ಜ್ಞಾನವಾಸಿಷ್ಠಸಾರೋದ್ಧಾರೇತ್ಯಾದ್ಯನೇಕಪ್ರಕರಣಗ್ರಂಥಗಳನ್ನೂ ರಚಿಸಿ, ಶಿಷ್ಯರಿಗೆ 
       ಕೊಡುತ್ತಾ, ದರ್ಶನಮಾತ್ರದಿಂದ ಕಾಶೀಜನಗಳ ಕಷ್ಟ ನಿವಾರಣೆಯಂಮಾಡುತ್ತಾ
       ದುಷ್ಟನಿಗ್ರಹಶಿಷ್ಟ ಪರಿಪಾಲನಾಚಾರರೆನಿಸಿಕೊ೦ಡು ವರ್ಣಾಶ್ರಮಧರ್ಮಗಳಂ ನ್ಯಾಯ   
       ದಿಂದ ಪರಿಪಾಲಿಸುತ್ತಿದ್ದರು,
              ಶಂಕರರು ಅಲ್ಲಿಗೆಬಂದ ತೊಂಭತ್ತು ಸಹಸ್ರಮಂದಿ ದ್ವೆ‌ತಿಗಳನ್ನು ನಾಶಮಾಡಿ 
       ಗೋವಿಂದಭಗವತ್ಪಾದರು ತಮಗೆ   ಕೊಟ್ಟಿದ್ದ   ಶ್ರೀಚಂದ್ರಮೌಳೀಶ್ವರಲಿಂಗವನ್ನೂ                 
       ರತ್ನ ಗರ್ಭಗಣಪತಿಯನ್ನೂ, ಶ್ರೀಚಕ್ರ, ನವಗ್ರಹಯಂತ್ರ, ನೃಸಿಂಹಸಾಲಗ್ರಾಮಾದಿಗ         
       ಳನ್ನು ಸನಂದನರಿಗೆ ಪೂಜೆಮಾಡಿಕೊಂಡಿರುವಂತೆ ಕೊಡಲು ಅವರು ಅವುಗಳನ್ನು 
       ಪೂಜಿಸುತ್ತಾ ಜನರಿಗೆ ತನ್ಮಹಿಮೆಗಳು ಹೇಳುತ್ತಾ ಧರ್ಮರತರಾಗಿದ್ದರು. 
             ಒಂದುದಿನ ಶಂಕರಾಚಾರ್ಯರು, ಶಿಷ್ಯಸಹಿತರಾಗಿ, ಗಂಗಾಸ್ನಾನಕ್ಕೆ ಹೋಗಿಬರು   
       ತ್ತಿರುವಾಗ, ದಾರಿಯಲ್ಲಿ, ಓರ್ವಚಂಡಾಲನು, ಮದ್ಯಘಟವನ್ನು ತಲೆಯಮೇಲೆ ಹೊತ್ತು    
       ಕೊಂಡು ನಾಲ್ಕು ನಾಯಿಗಳನ್ನು ಹಿಡಿದುಕೊಂಡೆದುರಿಗೆ ಬರುತ್ತಿರಲು, ಆಚಾರ್ಯರು,
      'ಗಚ್ಛಗಚ್ಛ' ಎಂದು ಕೈಸನ್ನೆಮಾಡಲಾಗಿ, ಆ ಚಂಡಾಲನು ಅಲ್ಲಿಯೇ ನಿಂತು, "ಓಯತಿ    
       ವರನೇ ! ಅನ್ನಮಯವಾದ ಶರೀರದ ಸಮಿಪದಿಂದ ಅನ್ನ ಮಯವಾದ ಮತ್ತೊಂದು  
       ಶರೀರವನ್ನು ದೂರಹೋಗಹೇಳುತ್ತೀಯೋ ? ಒಂದೇಜಾತಿಯಲ್ಲಿ ಭೇದವು ಇಬ್ಬರಿಗೂ 
       ಯುಕ್ತವಲ್ಲವು,  ಪರಮಾರ್ಥವಾದ ಅದ್ವೆತವನ್ನು  ವಿಚಾರಿಸುವ   ಪರಮಹಂಸರಿಗೆ                 
       ಈ ಭೇದಗಣನೆಯು, ಸತ್ಯವಲ್ಲವಷ್ಟೆ? ಓರ್ವ ಸೂರ್ಯನೇ ಗಂಗೆಯಲ್ಲೂ, ಹೊಲಗೇ           
       ರಿಯ ಬಚ್ಚಲಿನಲ್ಲೂ ಪ್ರತಿಬಿಂಬಿಸಿ ಅನೇಕವಾಗಿ ತೋರಿದಮಾತ್ರಕ್ಕೆ ಅನೇಕ ಸೂರ್ಯ          
       ರು ದಿಟರಾಗಿಹರೋ ”? ಎನ್ನಲು, ಆಚಾರ್ಯರು ಅವನ ವಾಕ್ಯಗಳಿಂದ ಸಂತುಷ್ಟ          
       ರಾಗಿ, "ಆಹಾ ! ವೇದಾಂತರಹಸ್ಯವು ಈ ಚಂಡಾಲನಿಗೆ ಹೇಗೆ ತಿಳಿಯುವುದು ! ಶರೀ       
       ರಕ್ಕಿ೦ತ ಜ್ಞಾನವೇ ಪ್ರಧಾನವಾದ್ದರಿಂದ ಇವನು ಪರಬ್ಬಹ್ಮಸ್ವರೂಜನೇ ಸಾ ಅಂಡಳಿ