ಶಂಕರಕಥಾಸಾರ ೨೫ ಪದೇಶವನ್ನು ಮಾಡಬೇಕೆಂದು ಹೇಳಿ ಆಚಾರ್ಯರು ಬಂದ ಕಾರಣವನ್ನು ತಿಳಿದು ಕೊಂಡು • "ತಮ್ಮ ಭಾಷ್ಯಕ್ಕೆ ವಾರ್ತಿಕಮಾಡುವಬಗ್ಯೆ ನನ್ನ ಶಿಷ್ಯನೂ, ಕರ್ಮವಾ ದಿಯೂ , ಆದ ಮಂಡನಮಿಶ್ರನು ಆರ್ಯಾವರ್ತದಲ್ಲಿದ್ದಾನೆ; ನೀವು ಆತನನ್ನು ವಾದ ದಲ್ಲಿ ಸೋಲಿಸಿ ನಿಮ್ಮಿಷ್ಟವನ್ನು ನೆರವೇರಿಸಿಕೊಳ್ಳಬಹುದು' ಎಂದು ಆಚಾರ್ಯರಿಗೆ ಹೇಳಲು, ಆಚಾರ್ಯರು ಭಟ್ಟಪಾದರನ್ನು ಆ ವ್ರತವನ್ನು ಬಿಡುವಂತೆ ಬಹಳವಾಗಿ ಹೇಳಿ ದರೂ ಅದು ನಿಷ್ಟ್ರಯೋಜನವಾಗಲು, ಅವರ ಇಷ್ಟದಂತೆ ತಾರಕೋಪದೇಶವಂಗೈದು ಸಶಿಷ್ಯರಾಗಿ ಮಾಹಿಷ್ಮತೀನಗರದ ಕಡೆ ತೆರಳಿದರು. ಆ ನಗರವಂ ತಲಪಿದನಂತರ ಆಚಾರ್ಯರು ಮಂಡನಪಂಡಿತನ ಮನೆಯ ಸಮೀಪಕ್ಕೆ ಹೋದರು. ಆ ದಿನ ಮಂಡನಪಂಡಿತನ ತಂದೆಯ ಶ್ರಾದ್ಧವಾದ್ದರಿಂದ, ಮಂಡನಪಂಡಿತನು ಮನೆಬಾಗಿಲುಗಳನ್ನು ಮುಚ್ಚಿ ವ್ಯಾಸರನ್ನು ಪಿತೃಸ್ಥಾನದಲ್ಲಿಯೂ, ಜೈಮಿನಿಗಳನ್ನು ವಿಶ್ವೇದೇವಸ್ಥಾನದಲ್ಲಿಯೂ , (ಅವರಿಬ್ಬರಿಗೂ ಸಮಾನರಾದ ಬ್ರಾಹ್ಮಣರು ದೊರೆಯ ದಕಾರಣ) ಲಕ್ಷ್ಮೀನಾರಾಯಣಮೂರ್ತಿ ಸಾಲಿಗ್ರಾಮವನ್ನು ವಿಷ್ಣು ಸ್ಥಾನದಲ್ಲಿಯೂ ಇಟ್ಟು ಅರ್ಚಿಸುತ್ತಿದ್ದನು. ಆಗ ಶಂಕರರು ಯೋಗಶಕ್ತಿಯಿಂದ ಪಂಡಿತನ ಮನೆಯ ಒಳಕ್ಕೆಹೋಗಿ ಇದು ಒಳ್ಳೆಯಸಮಯವೆಂದರಿತು ಅವರ ಸವಿಾಪಕ್ಕೆ ಹೋದರು. - ಆಗ ಮಂಡನಪಂಡಿತನಿಗೂ ಆಚಾರ್ಯರಿಗೂ ಈರೀತಿ ಪ್ರಶೋತ್ತರಗಳು ನಡೆದವು : ಮಂ ಸಂ:-ಸನ್ಯಾಸಿಯು ಎಲ್ಲಿಂದಬಂದವನು” ಎಂಬರ್ಧದಿಂದ ಕುತೋ ಮುಂಡೀ” ಎನ್ನಲು. ಶಂ, ಯ.:-( ಮುಂಡೀ' ಎಂಬ ಶಬ್ದಕ್ಕೆ « ಬೋಳ?” ಎಂದರ್ಥವಂ ಮಾಡಿ, ಅಗಲನ್ಮು೦ಡೀ (ಕತ್ತಿ ನಿಂದಮೇಲೆ ಬೋಳ) ಎಂದರು. ಮಂ, ಸಂ:- ಕುತಃ' ಎಂಬ ಶಬ್ದದಿಂದ ದಾರಿಯನ್ನು ಕೇಳಿದ್ದೇನೆಂದು ಹೇಳಿ « ಪಂಥಾಸ್ತೀಹೃಚ್ಛತೇಮಯಾ” (ನಿನ್ನ ದಾರಿಯು ನನ್ನಿಂದ ಕೇಳಲ್ಪಡುತ್ತದೆ) ಎಂದನು. ಶಂ, ಯ.:- ನಿನ್ನನ್ನು ಕೇಳುವುದಿಲ್ಲ ; ನಿನ್ನ ದಾರಿಯನ್ನು ಕೇಳುತ್ತೇನೆ” ಎಂದರ್ಥಮಾಡಿಕೊಂಡು « ಕಿಮಾಹಪಂರ್ಥಾ' (ದಾರಿಯು ಏನುಹೇಳಿತು) ಎಂದರು. ಮಂ ಪಂ.- ತ್ವನ್ಮಾ ತಾಮುಂಡೇಶ್ಯಾಹ' (ನಿನ್ನ ತಾಯಿಯು ಮುಂಡೆ ಎಂದಿತು ಅಂದರೆ : ಮುಂಡೆಮಗನೇ' ಅಂದಿತು, ಎಂದುತ್ತರವಿತ್ತನು.
ಪುಟ:ನನ್ನ ಸಂಸಾರ.djvu/೧೬೩
ಗೋಚರ