ಪುಟ:ನನ್ನ ಸಂಸಾರ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶಂಕರಕಥಾಸಾರ ೨೯

 ಅವರ ಶಪಥವೇನೆಂದರೆ ಶಂಕರಯತಿಯು ಸೋತರೆ, ಸನ್ಯಾಸವನ್ನು ಬಿಟ್ಟು ಮಂಡನಪಂಡಿತನ ಶಿಷ್ಯನಾಗಬೇಕು; ಮಂಡನಪಂಡಿತನು ಸೋತರೆ ಗೃಹಸ್ಥಾಶ್ರ ಮವನ್ನು ಬಿಟ್ಟು ಸನ್ಯಾಸಾಶ್ರಮ ಸ್ವೀಕಾರಮಾಡಿ ಶಂಕರಯತಿಯ ಶಿಷ್ಯನಾಗಬೇಕು. ಹೀಗೆ ಶಪಥಮಾಡಿ ವಾದಮಾಡಲುಕ್ರಮಿಸಿದರು.
 ಆಗ ಮಂಡನಪಂಡಿತನು " ಕಲಿಯುಗದಲ್ಲಿ ಸನ್ಯಾಸವು ” ಅಶ್ವಾಲಂಭಂಗವಾ ಲಂಭಂ ಸನ್ಯಾಸಂ ಪಲಪೈತೃಕಮ್ | ದೇವರೇಣಸುತೋತ್ಪತ್ತಿಃ ಕಲೌಪಂಚವಿವರ್ಜ ಯೇತ್, ಎಂಬ ಪ್ರಮಾಣವಚನದಿಂದ ತಿರಸ್ಕರಿಸಲ್ಪಟ್ಟಿದ್ದರೂ ನಿನ್ನಿಂದ ಹೇಗೆ ಸ್ವೀಕರಿಸಲ್ಪಟ್ಟಿತು ?
 "ಯಜ್ಞೋಪವೀತಂ ಸರ್ವೇಷಾಂದ್ವಿಚಾನಾಂಮುಕ್ತಿ ಸಾಧನಮ್ | ಪರಿತ್ಯಜಂತಿ ಯೇಮೋಹಾತ್ತೇವೈನಿರಯಗಾಮಿನಃ ||” ಎಂಬ ಪ್ರಮಾಣದಂತೆ ಯಜ್ಞೋಪವೀತತ್ಯಾ ಗವು ದೂಷ್ಯವಲ್ಲವೆ?
 'ಚತ್ವಾರೋಪ್ಯಾಶ್ರಮಾಹ್ಯೇತೆಯಾಜ್ಞಾಧ್ಯಯನವರ್ಜಿತಾಃ | ಬ್ರಾಹ್ಮಣ್ಯಾದೇವ ಪೀಯಂತೆ' ||.....ಎಂಬ ವಚನದಂತೆ ಯಜ್ಞಾದಿಕರ್ಮಪರಿತ್ಯಾಗವು ಬ್ರಾಹ್ಮಣ್ಯಕ್ಕೆ ಹಾನಿಕರವಲ್ಲವೇ?
 'ವೇದೋಕ್ತ ಮಾಚರನ್ಮತ್ಯೋ೯ನರಕಂ ನೈವಪಶ್ಯತಿ' ಎಂಬ ಆಧಾರದಿಂದ ವೇದೋಕ್ತಕರ್ಮಗಳಂ ಮಾಡುವವನಿಗೆ ನರಕಬಾಧಗಳು ತಪ್ಪುವುದಲ್ಲವೇ?
 'ಸತ್ಕರ್ಮಾಚರಣಿನಿಷ್ತಂಜ್ಞಾನರ್ವಾ ಭಕ್ತಿರ್ಮಾವಿದುಃ ' ಎಂಬ ಪ್ರಮಾಣ ದಿಂದ ವೇದೋಕ್ತಕರ್ಮಮಾಡುವವನೇ ಜ್ಞಾನಿಯಲ್ಲವೇ?
 ಇತ್ಯಾದಿ ವಚನಗಳಿಂದ ನಿಷಿದ್ಧವಾದ ಸನ್ಯಾಸವನ್ನು ನೀನು ಹೇಗೆ ಸ್ವೀಕರಿಸಿದೆ? ಎನ್ನಲು-

ಶಂಕರದೇಶಿಕರು " ಎಲೈ, ಮೂಢನೇ! 'ಯಾವದ್ವರ್ಣವಿಭಾಗೋಸ್ತಿಯವದ್ವೇ ದಃಪ್ರವರ್ತತೇ | ಸನ್ಯಾಸಶ್ವಾಗ್ನಿಹೋತ್ರಂ ಚ ತಾವದೇವಕಲೌಯುಗೇ|| ' ಎಂಬ ವಾಕ್ಯದಿಂದ ಚಾತುರ್ವಣ್ಯ೯ವಿಭಾಗವೂ, ವೇದಗಳೂ, ಎದುವರಿವಿಗೆ ಪ್ರಚಾ ರದಲ್ಲಿರು ವುವೋ ಅದುವರಿವಿಗೂ ಸನ್ಯಾಸವೂ, ಅಗ್ನಿ ಹೋತ್ರವೂ, ಕಲಿಯುಗದಲ್ಲಿ ಉಂಟು' ಎಂದು ಇರುವುದರಿಂದ ಸನ್ಯಾಸವು ಹೇಗೆ ನಿಷಿದ್ದವು?