ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮ ಕಾದಂಬರೀಸಂಗ್ರಹ

ಶಂ. ಯ.:-"ಯತಿಭಂಗೆ ಪ್ರವೃತ್ತಸ್ಯ ಪಂಚಮ್ಯಂತಂ ಸಮಸ್ಯತಾಮ್ " (ಯತಿಭಂಗವೆಂಬ ಶಬ್ದದಲ್ಲಿ ಷಷ್ಠೀತತ್ಪುರುಷಕ್ಕೆ ಬದಲಾಗಿ ಪಂಚಮಾತತ್ಪುರುಷವನ್ನು ಮಾಡು) ಎಂದರು.

ಮಂ. ಪ.:- "ಕ್ವ ಬ್ರಹ್ಮ ಕ್ವ ಚ ದುರ್ಮೇಧಾಃ ಕ್ವ ಸನ್ಯಾಸಃ ಕ್ವ ವಾ ಕಲಿಃ | ಸ್ವಾದ್ವಿನ್ನಂಜಗ್ಧು ಕಾಮೇನ ವೇಷೋಯಂ ಯೋಗಿನಾ ಧೃತಃ ”(ಬ್ರಹ್ಮವೆಲ್ಲಿ? ದುರ್ಬುದ್ಧಿಯಾದನೀನೆಲ್ಲಿ? ಸನ್ಯಾಸವೆಲ್ಲಿ? ಕಲಿಯುಗವೆಲ್ಲಿ? ರುಚಿಯಾದ ಅನ್ನಭಕ್ಷಣೆಗೋಸ್ಕರ ಯೋಗಿಯಾದ ನಿನ್ನಿಂದ ಈ ವೇಷವು ಧರಿಸಲ್ಪಟ್ಟಿದೆ.) ಎನ್ನಲು-
 ಶಂ. ಯ.:-"ಕ್ವ ಸ್ವರ್ಗಃ ಕ್ವ ದುರಾಚಾರಃ ಕ್ವಾಗ್ನಿಹೋತ್ರಂ ಕೈ ವಾ ಕಲಿಃ | ಮನ್ಯೇ ಮೈಥುನಕಾಮೇನ ವೇಷೋ S ಯ: ಕರ್ಮಿಣಾ ಧೃತಃ || " ಸ್ವರ್ಗ ವೆಲ್ಲಿ ? ದುರಾಚಾರಿಯಾದ ನೀನೆಲ್ಲಿ ? ಅಗ್ನಿಹೋತ್ರವೆಲ್ಲಿ ? ಕಲಿಯುಗವೆಲ್ಲಿ ? ಮೈಥುನಾಭಿಲಾಷೆಯಿಂದ ಕರ್ಮಿಷ್ಠರ ವೇಷವನ್ನು ಧರಿಸಿರುತ್ತೀಯೇ) ಎಂದರು.
 ಹೀಗೆಯೇ ಇವರಿಬ್ಬರಿಗೂ ಬಹಳಕಾಲ ವಕ್ರೋಕ್ತಿಯುಕ್ತಗಳಾದ ಪ್ರಶ್ನೋತ್ತರಗಳು ನಡೆದವು.
 ಅನಂತರ ಮಂಡೆನಮಿಶ್ರನು ವೇದವ್ಯಾಸ ಜೈಮಿನಿಗಳ ಬುದ್ದಿವಾದದಿಂದ ವಕ್ರೋಕ್ತಿಯನ್ನು ಬಿಟ್ಟು, ಆಚಾರ್ಯರನ್ನು ವಿಷ್ಣುಸ್ಥಾನದಲ್ಲಿ ಕೂಡುವಂತೆ ಪ್ರಾರ್ಥಿ ಸಿದನು.
 ಅದಕ್ಕೆ ಆಚಾರ್ಯರು "ನಾನು ಅನ್ನ ಭಿಕ್ಷಾರ್ಥಿಯಾಗಿ ಬಂದವನಲ್ಲ; ವಾದಭಿ ಕ್ಷಾರ್ಥಿಯಾಗಿ ಬಂದಿರುವೆನು ” ಎಂದರು.
 ಆ ವಾಕ್ಯವನ್ನು ಕೇಳಿ ಮಂಡನಪಂಡಿತನು " ನಾನೂ ಅದನ್ನೇ ಅಪೇಕ್ಷಿಸುತ್ತ ಲಿದ್ದೆನು; ನಾಳೆಯದಿನ ವಾದಭಿಕ್ಷೆಯಾಗಲೀ; ಈ ದಿನ ಅನ್ನ ಭಿಕ್ಷೆಯಾಗಲೀ; " ಎಂದುತ್ತರವನ್ನೀಯಲು ಆಚಾರ್ಯರು ಅವನ ಮಾತಿನಂತೆ  ವಿಷ್ಣುಸ್ಥಾನದಲ್ಲಿ ಕುಳಿ ತರು. ಆಕರ್ಮಾನಂತರ ಆಚಾರ್ಯರು ಯೋಗಕ್ತಿಯಿಂದ ಊರುಹೊರಗಿಳಿದಿರುವ ತಮ್ಮ ಶಿಷ್ಯರಲ್ಲಿಗೆ ಬಂದು ಅಂದಿನ ಸಂಗತಿಗಳನ್ನೆಲ್ಲಾ ಅವರಿಗೆ ತಿಳಿಯಿಸಿ ಮಾರನೇದಿನ ಪ್ರಾತಃಕಾಲ ಸ್ವಕರ್ಮಾನಂತರ ಸಶಿಷ್ಯರಾಗಿ ಮಂಡನಪಂಡಿತನ ಮನೆಗೆ ಹೋದರು. ಸರಸ್ವತಿಯೇ ಮಾಧ್ಯಸ್ಥ್ಯವನ್ನು ವಹಿಸಿದಳು.
 ಆಗ ಸರಸ್ವತಿಯು ಇಬ್ಬರ ಕೊರಳಿನಲ್ಲೂ ಒಂದೊಂದು ಪುಷ್ಪಮಾಲಿಕೆ ಯನ್ನು ಹಾಕಿ "ಯಾರಕೊರಳಿನ ಪುಷ್ಪಮಲೆಯು ಬಾಡುವುದೋ ಅವರು ಸೋತ ವರಂತೆ ಎಣಿಸಲ್ಪಡುತ್ತಾರೆ' ಎಂದಳು.