ಪುಟ:ನನ್ನ ಸಂಸಾರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಂಕರಕಥಾಸಾರ ೨೬ ರಲ್ಲಿ ಸೋಮಾರಿಯಾಗಿ ಸಮಾವರ್ತನೆ ಎಂಬ ನೆವದಿಂದ, ಹೆಂಗಸರನ್ನು ಸೇವಿಸಲೋ ಸುಗ ನಿನ್ನಿಂದ ಕರ್ಮಠತ್ವವು ತೋರಿಸಲ್ಪಡುತ್ತದೆ) ಎಂದರು. ಮಂ, ಪಂ.:-( ಸ್ಥಿತೋಸಿ ಯೋಷಿತಾಂ ಗರ್ಬೆ ತಾಭಿರೇವ ವಿವರ್ಧಿತಃ | ಅಹೋಕೃತಘ್ನುತಾ ಮೂರ್ಖ ಕಥಂ ತಾಏವ ನಿಂದಸಿ” (ಹೆಂಗಸರ ಗರ್ಭದಲ್ಲಿದ್ದು, ಅವರಿಂದಲೇ ವರ್ಧಿಸಲ್ಪಟ್ಟವನಾಗಿ ಅವರನ್ನೇ ನಿಂದಿಸುವ ನೀನು ಕೃತಘ್ನ ನೇಸರಿ) ಎನ್ನಲು ಶಂ, ಯ.!- ಯಾಸಾಂ ಸ್ತನ್ಯಂ ತ್ವಯಾ ಪೀತಂ ಯಾಸಾಂ ಜಾತೋಸಿ ಯೋನಿತಃ | ತಾಸು ಮೂರ್ಖತನ ಸ್ತ್ರೀಷು ಪಶುವದ್ರಮಸೇ ಕಥಮ್ ”(ಎಲೈ ಮರ್ಖನೇ ! ಯಾರ ಸ್ತನ್ಯವು ನಿನ್ನಿಂದ ಕುಡಿಯಲ್ಪಟ್ಟಿತೋ, ಯಾರಯೋನಿಯ ದೆಸೆಯಿಂದ ನೀನು ಹುಟ್ಟಿದೆಯೋ, ಅಂಥಾ ಹೆಂಗಸರಲ್ಲಿಯೇ ಪಶುಜಾತಿಯಂತೆ ಹೇಗೆ ರಮಿಸುವೇ ?) ಎಂದರು. ಮಂ, ಪಂ.:- ವೀರಹತ್ಯಾಮವಾಪ್ರೊಸಿ ವಿಹ್ನಿನುದ್ವಾಸ್ಯ ಯತ್ನತಃ ಆತ್ಮ ಹತ್ಯಾಮವಾಸ್ತ ಸ್ತ್ವಮವಿದಿತ್ವಾ ಪರಂ ಪದಮ್ || ದೌವಾರಿರ್ಕಾವಂಚಯಿತ್ವಾ ಕಥಂ ಸ್ತೇನವದಾಗತಃ '(ನೀನು ಗಾರ್ಹಪತ್ಯಾದ್ಯಗ್ನಿಪರಿತ್ಯಾಗವನ್ನು ಮಾಡಿರುವುದರಿಂದ ವೀರಹತ್ಯಾದೋಷಕ್ಕೆ ಪಾಸಾದೆ; ಕೇವಲ ಬ್ರಹ್ಮಸ್ವರೂಪವೂ ತಿಳಿಯದೇಇರುವುದ ರಿಂದ ಆತ್ಮಹತ್ಯಾದೋಷಕ್ಕೆ ಗುರಿಯಾದೆ; ಆದರೂ ಬಾಗಲಿನಲ್ಲಿದ್ದವರನ್ನು ವಂಚಿಸಿ ಒಳಗೆ ಹೇಗೆ ಬಂದೆ ?) ಎನ್ನಲು - ಶಂ, ಯ,:-"ಭಿಕ್ಷುಭ್ಯೂ s ನ್ನಮದತ್ವಾ ತ್ವಂ ಶ್ಯೇನವದೃಕ್ಷಸೇ ಕಥಮ್ ” (ಮಧ್ಯಾಹ್ನ ಕಾಲಕ್ಕೆ ಬಂದ ಭಿಕ್ಷುಕರಿಗೆ ಅನ್ನವನ್ನು ಕೊಡದೆ ಗಿಡುಗನಂತೆ ನೀನು ಹೇಗೆ ಅನ್ನವನ್ನು ತಿನ್ನುವೆ ?) ಎಂದರು. ಮಂ. ಸಂ.:-II "ಕರ್ಮಕಾಲೇ ನ ಸಂಭಾಷ್ಯತಿ ಅಹಂ ಮೂಖೇಣ ಸಂಪ್ರತಿ” (ಕರ್ಮಮಾಡತಕ್ಕ ಸಮಯದಲ್ಲಿ ನಾನು ಮೂರ್ಖರೊಡನೆ ಮಾತನಾಡಲರ್ಹನಲ್ಲವು) ಎನ್ನಲು-ಶಂಕರರು ಮಂಡನನು ಹೇಳಿದ ವಾಕ್ಯದಲ್ಲಿ ಯತಿಭಂಗದೋಷವನ್ನು ಕಂಡು 11 ಅಹೋ ಪ್ರಕಟಿತಂ ಜ್ಞಾನಂ ಯತಿಭಂಗೇನ ಭಾಷಿಣಾ ” (ಯತಿಭಂಗದಿಂದ ಮಾತನಾಡಿದ ನಿನ್ನ ಮಾತಿನಲ್ಲಿ ನಿನ್ನ ಜ್ಞಾನವು ಕಪಟವಾಯಿತು) ಎಂದರು. ಮಂ. ಸಂ.:-( ಯತಿಭಂಗೇ ಪ್ರವೃತ್ತಸ್ಯ ಯತಿಭಂಗೋ ನ ದೋಷಭಾಕ್ " (ಯತಿಭಂಗದಲ್ಲಿ ತೊಡಗಿರುವವನಿಗೆ ಯತಿಭಂಗದೋಷವಿಲ್ಲ) ಎನ್ನಲು