ಪುಟ:ನನ್ನ ಸಂಸಾರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಕಾದಂಬರೀಸಂಗ್ರಹ

ವೆನೆನ್ನಲು, ಸೋದರಮಾವನು ಅಸೂಯೆಂದ ಪದ್ಮಪಾದರಿಗೆ ಭಿಕ್ಷಾನ್ನದಲ್ಲಿ ಮದ್ದು ಹಾಕಿ ಬುದ್ದಿಯು ಕೆಡುವಂತೆ ಮಾಡಿದನು. ಅನಂತರ ಪದ್ಯಪಾದರು ಅದೇ ಚಿಂತೆಯಿಂದ ಕೃಶರಾಗಿ ಕೇರಳದೇಶದ ಬಳಿ ಮಹಾಸುರಾಯದಲ್ಲಿದ್ದ ಗುರುಗಳ ಬಳಿಗೆ ಬಂದು, ತಮ್ಮ ಸಂಕಟವನ್ನು ತಿಳಿಸಲವರು ' ನಿನಗೆ ಹೀಗಾಗುವುದೆಂದು ನಾನು ಸುರೇಶ್ವರರಿಗೆ ಮೊದಲೇ ತಿಳಿಸಿದ್ದೆ ; ಕರ್ಮಗತಿಯನ್ನು ಮೀರಲು ಯಾರುತಾನೇ ಶಕ್ತರು ? ಶೃಂಗಗಿರಿಯಲ್ಲಿ ನಾವು ಕೇಳಿದ್ದಷ್ಟು ನಿನ್ನ ಗ್ರಂಥವನ್ನು ಹೇಳುವೆವು' ಎಂದು ಹೇಳಿ ಪಂಚವಾದಿಕೆಯಂ ಬರೆಯಿಸಲು ಪದ್ಮಪಾದರು ಅಷ್ಟಕ್ಕೇ ತೃಪ್ತರಾದರು. ಇದಾದಮೇಲೆ ಕೇರಳದೇಶದ ರಾಜನು ಗುರುದರ್ಶನಕ್ಕೆ ಬರಲು ಶಂಕರರು ' ನೀನು ಬರೆದಿದ್ದ ಮೂರು ನಾಟಕಗಳೂ ಪ್ರಚಾರಕ್ಕೆ ಬಂದಿವೆಯೋ' ಎನ್ನಲು, ಅವು ಕಾರಣಾಂತರದಿಂದ ಸುಟ್ಟುಹೋದವು' ಎಂದು ವ್ಯಸನದಿಂದ ನಿರೂಪಿಸಲು ' ಶಂಕರದೇಶಿಕರು ತಾವು ಕೇಳಿದ್ದಷ್ಟು ಭಾಗವನ್ನು ಈಗ ಬರೆಯಿಸುವೆವು' ಎಂದು ಹೇಳಿ, ತಾವು ಕೇಳಿದ್ದಷ್ಟು ಭಾಗವನ್ನು ಆಗ ಒರೆಯಿಸಿ ಕಳುಹಿಸಿದರು. ________________________________________________________ ದ್ವಾದಶವಲ್ಲರೀ

          ಅಥಾಚಾರ್ಯಃಶಿಷ್ಯೆರವಿಸಹಸುಧನ್ವಕ್ಷಿತಿಭೃತಾ
         ಕಥಾವಾದೈರ್ಯುಕ್ಕೆರ್ನಿಗಮನಗಸೋಪಾನಪಥಿಕೃತಿ |
            ಪ್ರಥಾಭಾಜಶ್ಯಾಕ್ತಕ್ಷಪಣಕಕಪಾಲ್ಯಾದಿವಿಮರ್ತಾ 
          ಕಥಾಶೇಷೀಕೃತ್ಯಾದ್ವಯಮತಮುತಾಬ್ರಹ್ಮಯದಹೋ || 
              ಆಚರ್ಯಕೃತದಿಗ್ವಿಜಯವರ್ಣನವು.

ಅನಂತರ ಶ್ರೀಮಚ್ಚಂಕರಭಗವತ್ಪಾದರು, ದಿಗ್ವಿಜಯವಂ ಮಾಡಬೇಕೆಂದು " ಪದ್ಮಪಾದಾಚಾರ್ಯರು, ಹಸ್ತಾಮಲಕಾಚಾರ್ಯರು, ತೋಟಕಾಚಾರ್ಯರು, ಸಮಿತ್ಸಾಣ್ಯಾಚಾರ್ಯರು, ಜ್ಞಾನಕಂದಾ