ಪುಟ:ನನ್ನ ಸಂಸಾರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



             ನನ್ನ ಸಂಸಾರ              11
 *****************************************                 

ಪ್ರಯಾಣಮಾಡಿದಳು. ವಿನಾಯಕ ಶಾಸ್ತ್ರಿಗಳು ಗಾಡಿಯ ಮೇಲೆಯೇ ಮೂರ್ಛಿತರಾಗಿ ಬಿಟ್ಟರು, ರೋಗಿಯು ಮೃತಳಾದಸ್ಥಳಕ್ಕೂ ಹರಪುರದ ಸ್ಮಶಾನ ಭೂಮಿಗೂ ಮೂರು ಮೈಲಿದೂರವಿತ್ತು, ಬೆಳಗ್ಗೆ ಆರುಗಂಟೆಗೆ ವಿನಾಯಕ ಶಾಸ್ತ್ರಿಗಳ ಮನೆಯವರೆಲ್ಲರೂ ಸ್ಮಶಾನದಲ್ಲಿ ಬಂದಿಳಿದು ನಡೆದ ವರ್ತಮಾನವನ್ನು ನೀಲಕಂಠಶಾಸ್ತ್ರಿಗಳ ಮನೆಗೆ ಹೇಳಿ ಕಳುಹಿಸಿದರು. ನೀಲಕಂಠ ಶಾಸ್ತ್ರಿಗಳು ಆಗ ಊರಲ್ಲಿರಲಿಲ್ಲ, ಅವಶ್ಯವಾಗಿ ಸ್ಮಶಾನಕ್ಕೆ ಹೋಗಬೇಕಾದವರು ಹೋಗಿದ್ದುದೂ ಆಯಿತು, ಅಲ್ಲಿ ಲಕ್ಷ್ಮೀ ದೇವಿಯ ದೇಹವನ್ನು ಸಂಸ್ಕಾರಮಾಡಿ ಎಲ್ಲರೂ ಹಿಂತಿರುಗಿ ಮನೆಗೆ ಬಂದುದೂ ಆಯಿತು. ಅಂತು ಎರಡು ತಿಂಗಳು ಕಳೆವುದರೊಳಗಾಗಿ ಇಷ್ಟು ಕಥೆ ಕಳೆದುಹೋಯಿತು. ನಾನೇನೋ ಮದುವೆ ವಿಷಯವನ್ನು ಬರೆಯ ತೊಡಗಿ ಮಧ್ಯದಲ್ಲಿ ಇಂತಹ ಅಮಂಗಳವನ್ನು ಬರೆದುದಕ್ಕಾಗಿ ಪಾರಕಿಯರು ನನ್ನ ಮೇಲೆ ಆಗ್ರಹಪಡಬಹುದು. ಆದರೆ ನಡೆದವಿಷಯವೆಲ್ಲವನ್ನೂ ಬರೆದು ಬಿಡಬೇಕಾಗಿರುವುದರಿಂದ ಎಲ್ಲರೂ ನನ್ನನ್ನು ಮನ್ನಿಸಬೇಕು, ಈ ಪ್ರಪಂಚದಲ್ಲಿ ಮಂಗಳಾಮಂಗಳಗಳು ಬರುವುದೂ ಗೊತ್ತಿಲ್ಲ. ಹೋಗುವುದೂ ಗೊತ್ತಿಲ್ಲ, ಇದೆಲ್ಲಾ ನಾಟಕವಾಡಿದ ಹಾಗೆ, ನಾವು ರಾತ್ರಿ ಹೊತ್ತು ಮಲಗಿಕೊಂಡು ಕನಸನ್ನು ಕಂಡರೆ ಹೇಗೋ ಅದರಂತೆಯೇ ಈ ಲೋಕದ ಸುಖ ದುಃಖಗಳು. ನನಗೆ ಹದಿನಾಲ್ಕು ವರ್ಷ ತುಂಬುವುದಕ್ಕೆ ಇನ್ನು ಆರೇತಿಂಗಳು ಉಳಿದಿತ್ತು. ನಮ್ಮ ತಾತನಂತೂ ನನಗೆ ಮದುವೆ ಮಾಡದೆ ತಾನೆಲ್ಲಿ ಸತ್ತು ಹೋಗುವೆನೋ ಎಂದು ಕೊರಗಿಕೊರಗಿ ಕೃಶನಾಗುತ್ತಿದ್ದನು. ಕೊನೆಗೆ ಸೀಲಕಂಠಶಾಸ್ತ್ರಿಗಳಿಗೂ ನಮ್ಮ ತಾತನವರಿಗೂ ಪತ್ರ ವ್ಯವಹಾರ ಬೆಳೆದ ಮೇಲೆ ನೀಲಕಂಠಶಾಸ್ತ್ರಿಗಳು ದಯವಿಟ್ಟು ನಮ್ಮ ಮನೆ ಸಂಬಂಧಮಾಡುವುದಕ್ಕೆ ಒಪ್ಪಿಕೊಂಡರು. ನಮ್ಮ ತಾತನ ಸಂತೋಷವು ವಿವರಿಸಲಸದಳ. ಮಾಘ ಬಹುಳ ಬಿದಿಗೆ ದಿನ ನನಗೆ ಮದುವೆಯಾಯಿತು. ಮದುವೆಗಾಗಿ ಬಂದಿದ್ದ ಬೀಗರು ಹರಪುರಕ್ಕೆ ಪ್ರಯಾಣ ಬೆಳಸಿದರು, ಅವರು ಪ್ರಯಾಣಮಾಡುವಾಗ ನಮ್ಮ ತಾತನು ನೀಲಕಂಠಶಾಸ್ತ್ರಿಗಳನ್ನು ಕುರಿತು : ಸ್ವಾಮಿ ! ತಾವು ದೊಡ್ಡ ಮನಸ್ಸು ಮಾಡಿ ನನ್ನನು ಕನ್ಯಾದಾನದಿಂದಉದ್ಧಾರಮಾಡಿದುದಕ್ಕಾಗಿ ನಾನು ತಮಗೆ ಜೀವಾವಧಿ ಕೃತಜ್ಞನಾಗಿದೇನೆ, ನನ್ನ ಮನಸ್ಸಿನಲ್ಲಿ ಪೂರ್ವವಯಸ್ಕನೂ, ಸತ್ಕುಲ ಪ್ರಸೂತನೂ, ವಿದ್ಯಾವಂತನೂ ಆದ ವರಸಿಗೆ ಹುಡುಗಿಯನ್ನು ಕೊಡಬೇಕೆಂಬ ಆಶೆ