ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೬೨ ಕಾದಂಬರೀಸಂಗ್ರಹ
ಅದಕ್ಕೆ ಶಂಕರರು "ನಿನ್ನಿಂದ ಚೆನ್ನಾಗಿ ಹೇಳಲ್ಪಟ್ಟಿತು; ನೀನು ನನ್ನ ಸಮೀಪದಲ್ಲಿಯೇ ಇರು; ಪರೀಕ್ಷಾ ಸಮಯಬಂದಾಗ ನಿನ್ನನ್ನು ಕೇಳುತ್ತೇನೆ” ಎನ್ನಲು ಅವನು ಹಾಗೆಯೇ ಆಗಲೆಂದು ಒಪ್ಪಿ ಅವರ ಸಮೀಪದಲ್ಲಿದ್ದನು. ಅನಂತರ ಶಂಕರರು ಶಂಬಲನೆಂಬ ಬೌದ್ಧಮತವಾದಿಯನ್ನೂ, ಮಲ್ಲಾರಿ ಮತೋಪಾಸಕರನ್ನೂ, ವಿಷ್ವಕ್ಸೀನ ಮತಾನುಯಾಯಿಗಳನ್ನೂ, ಮನ್ಮಥ ಭಕ್ತರನ್ನೂ, ಕುಬೇರೋಪಾಸಕರನ್ನೂ, ಇಂದ್ರಭಕ್ತರನ್ನೂ, ಯಮೋಪಾಸಕರನ್ನೂ, ಪ್ರಯಾಗದಲ್ಲಿದ್ದ ವರುಣೋಪಾಸಕರನ್ನೂ, ಶೂನ್ಯಮತವಾದಿಯನ್ನೂ, ಪರಾಹೋಪಾಸಕರನ್ನೂ, ಸಾಂಖ್ಯಮತಾನುಯಾಯಿಗಳನ್ನೂ, ಕಾಪಿಲಮತಾನುಯಾಯಿಗಳನ್ನೂ, ಸುಧೀರಶಿವರೆಂಬ ಅಣುಕಮತದವರನ್ನೂ, ಭರಣನೇ ಮೊದಲಾದ ಚಂದ್ರೋಪಾಸಕರನ್ನೂ. ಮತ್ತು ಭೌಮಾದಿಗ್ರಹೋಪಾಸಕರನ್ನೂ, ಸೋಲಿಸಿದಮೇಲೆ, ಮೇಲೆ ಹೇಳಲ್ಪಟ್ಟ ಕ್ಷಪಣಕನು ಆಚಾರ್‍ಯರನ್ನು ವಂದಿಸಿ ಸ್ವಾಮಿ? ನಿಮ್ಮ ಅಧೀನದಲ್ಲಿಯೇ ನನಗೆ ಆರು ತಿಂಗಳು ಕಾಲವು ಕಳೆದುಹೋಯಿತು; ಕಾಲಬ್ರಹ್ಮಬೋಧಕವಾದ ನನ್ನ ಮತವನ್ನು ನೀವು ಆಶ್ರಯಿಸಿ ಮುಕ್ತರಾಗಿ” ಎನ್ನಲು ಆಚಾರ್‍ಯರು 'ಈ ಕಾಲವು ಸಂವತ್ಸರವಾಯಿತು' ಎಂಬ ಶ್ರುತಿಯಿಂದ ಕಾಲಕ್ಕೆ ನಿತ್ಯತ್ವವು ಹೇಗೆ? ಆದ್ದರಿಂದ ಎಲ್ಳೆ, ಮೂಧನೇ! ನಿನ್ನ ಕುಬುದ್ಧಿಯನ್ನು ಬಿಟ್ಟು, ಶುದ್ದಾದ್ವೈತಮತವನ್ನು ಆಶ್ರಯಿಸಿ ಮುಕ್ತನಾಗು ಎನ್ನಲು ಅವನು, ಆಚಾರ್‍ಯರಿಗೆ ನಮಸ್ಕರಿಸಿ ಅದ್ವಯಬ್ರಹ್ಮದಲ್ಲಿ ಅನುರಕ್ತನಾದನು, ಮಲ್ಲಾರಿಮತಖಂಡನವು. ಅನಂತರ ಆಚಾರ್‍ಯರು ಅನುಮಲ್ಲಪುರಕ್ಕೆ ಹೋಗಿ ಅಲ್ಲಿ ಇಪ್ಪತ್ತೊಂದು ದಿನ ಇದ್ದು, ಅಲ್ಲಿನವರನ್ನು 'ನೀವು ಪ್ರಭಾತಾದಿಕಾಲದಲ್ಲಿ ಮಾಡುವ ಕಾರ್‍ಯವನ್ನು ತಿಳಿಸಿ, ಎನ್ನಲು, ಅವರು "ಸ್ವಾಮೀ! ನಾವು. ಮಲ್ಲಾಸುರನನ್ನು ಸಂಹರಿಸಿ ಮಲ್ಲಾರಿಯೆಂದು ಪ್ರಸಿದ್ಧನಾದ ಆ ಸ್ವಾಮಿಯನ್ನೂ, ಅವನವಾಹನವಾದ ಶುನಕವನ್ನೂ, ತ್ರಿಕಾಲದಲಿಯೂ ನೃತ್ಯವಾದ್ಯಾದಿಗಳಿಂದ ಪೂಜಿಸಿ, ಕತ್ತಿನಲ್ಲಿ ವರಾಟಕ (ಕವಡೆ)ಗಳನ್ನು ಧರಿಸಿ ಸ್ವಾಮಿಯನ್ನು ಪ್ರಸನ್ನನಾಗಿ ಮಾಡಿಕೊಂಡಿದ್ದೇವೆ; ಆ ಸ್ವಾಮಿಯ ಕಟಾಕ್ಷದಿಂದ ಸುಖಸಾಗರಗಳು ಅಭಿವೃದ್ಧಿಯಾಗುವುವು; ಇದಲ್ಲದೆ ಅವನವಾಹನಕ್ಕೆ ವೇದದಲ್ಲಿ
'ಶ್ವಭ್ಯಶ್ವಪತಿಭ್ಯಶ್ವವೋನಮಃ' ಎಂದು ಮಹಿಮೆಯು ಹೇಳಲ್ಪಟ್ಟಿದೆ; ನಾವು ನಿಮಗೆ ಉತ್ತಮಗಳಾದ ವರಾಟಕಗಳನ್ನು ಕೊಡುತ್ತೆವೆ; ನೀವೂ ಅದನ್ನು ಧರಿಸಿ ನಮ್ಮಂತೆ ಮುಕ್ತಿಯಂ ಪಡೆಯಿರಿ' ಎಂದರು.