ಪುಟ:ನನ್ನ ಸಂಸಾರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನನ್ನ ಸಂಸಾರ. 13 A Ar r * , * * \h 1 * * * * * * * \ಗಿ ೧೧೧ ೧೧೧೧ ನೀಲಕಂಠಶಾಸ್ತ್ರಿಗಳ ಕಿರೀಮೊಮ್ಮಕ್ಕಳಾದ ವಾಸುದೇವಶಾ• ... ... .... .. ಆಹಾ ! ಮರೆತುಬಿಟ್ಟೆನು, ಏನೋಜ್ಞಾನದಿಂದ ನನ್ನ ಸ್ವಾಮಿಯ ಹೆಸರನ್ನು ಬಾಯಿಂದ ಮರೆತು ಹೇಳುಬಿಡುತ್ತಿದ್ದೆನು. ವಾಚಕಿಯರು ದಯವಿಟ್ಟು ಕ್ಷಮಿಸಬೇಕು. ಈಗ ಈ ಗ್ರಂಥದಲ್ಲಿ ಇನ್ನು ಮುಂದೆ ನನ್ನ ಜೀವಿತಸರ್ವಸ್ವರಾದ ಸ್ವಾಮಿಯವರ ಹೆಸರನ್ನು ಆಗಾಗ್ಗೆ ಉಚ್ಚರಿಸ ಬೇಕಾಗುತ್ತದೆ. ಆದುದರಿಂದ ಅವರಿಗೆ ಯಾವ ಹೆಸರಿಟ್ಟು ಕರೆಯ ಬೇಕೋ ತಿಳಿಯದು ನೀವಾದರೂ ಐದು ಮಂದಿ ಮುತ್ತೈದೆಯರು ಸೇರಿ ನನಗೆ ಈ ವಿಷ ಯದಲ್ಲಿ ಬುದ್ದಿವಾದವನ್ನು ಹೇಳಿಕೊಡಬೇಕು, ನಾವು ನಿಮ್ಮ ಮಾತನ್ನು ಮೀರುವವಳಲ್ಲ, ಲೋಕನ್ಯಾಯದಂತೆ ನಾನು ವರ್ತಿಸುವವಳೇ ವಿನಹ ಅನ್ಯಥಾ ಇಲ್ಲ. ನಮ್ಮ! ಮನೆಯವರೆಂದು ಕರೆಯಲೆ? ಅಥವಾ ಪ್ರಾಣನಾಯಕ ; ಪ್ರಾಣಪ್ರಿಯ ! ಪ್ರಿಯನಾಥ ಪ್ರಾಣಕಾಂತ ! ಮುಂತಾದ ಯಾವುದಾದರೊಂದು ಹೆಸರಿನಿಂದ ಕೂಗಲೆ ? ಅಥವಾ My Dear Husband ಎಂದು ಕರೆಯುತ್ತಾ ಬರಲೇ? ಉಹು-ಇದಾವುದೂ ಸರಿಯಲ್ಲ, ಏನೆಂದು ಕರೆದರೂ ಆಕ್ಷೇಪಣೆ ಮಾಡುವವರ ಮಾಡಿಯೇಮಾಡುತ್ತಾರೆ. ಆದುದರಿಂದ ನಮ್ಮ ಸೋದರೀಮಣಿಯರು ಈಗ ವರ್ತಿಸುತ್ತಿರುವಂತೆ ನಾನೂಸಹ ನಮ್ಮ ಯಜಮಾನರೆಂದು ಸಂಬೋಧಿಸುತ್ತಾ ಬರುವೆನು. ಇದರಲ್ಲೇನೂ ದೋಷ ವಿರುವಂತೆ ತೋರದು. - ಒಂದುದಿನ ನನ್ನ ಯಜಮಾನರು ನನ್ನನ್ನು ತಮ್ಮ ಚಿಕ್ಕ ಮನೆಗೆ ಕರೆದು ನನ್ನೆರಡು ಕೈಗಳನ್ನೂ ಹಿಡಿದುಕೊಂಡು ನನ್ನ ಗಲ್ಲವನ್ನು ಮುದ್ದಿಟ್ಟು,ಪ್ರಿಯಳೆ! ಈಗ ನೀನು ನನ್ನ ಸಂಗಡ ಮಾತನಾಡಲು ನಾಚಿಕೆ ಪಡಬೇಡ; ನೀನು ಪುಸ್ತಕಗಳನ್ನೋದುವುದನ್ನು ಬಲ್ಲೆಯಾ? ಎಂದು ಕೇಳಿದರು. ನನ್ನನ್ನು ಅವರು ಮುಟ್ಟುತ್ತಲೇ ನನಗೆ ಮೈಯೆಲ್ಲಾ ನಡುಗಿಹೋಯಿತು, ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕೆಂದು ಪ್ರಯತ್ನ ಪಟ್ಟೆನು, ಆದರೆಆ-ಹಾಳು ನಾಚಿಕೆಯೊಂದು ಅಡ್ಡವಾಗಿ ಬಂದು ನನ್ನನ್ನು ಮಾತನಾಡಗೊಡಿಸದೆ ಹೋಯಿತು. ಅರ್ಧ ಗಂಟೆವರಿವಿಗೆ ನಮ್ಮ ಯಜಮಾನರು ನನ್ನನ್ನು ವಿವಿಧವಾಗಿ ಕೇಳಿದರೂ ನಾನು ಯಾವಮಾತನ್ನಾಡಲೂ ಶಕ್ತಳಾಗಲಿಲ್ಲ. ಕೊನೆಗೆ ಅವರಿಗೇ ಬೇಸರವಾಗಿ ನನ್ನನ್ನು ಬಿಟ್ಟು ಬಿಟ್ಟು, ಇಂತಹ ಮೂಢತನವನ್ನು ನೀನು ಇನ್ನು ಮೇಲೆ ಬಿಟ್ಟು ನನ್ನೊಡನೆ ಸರಿಯಾಗಿ ಮಾತನಾಡದಿದ್ದರೆ ನನಗೆ ಬಹು ಕೋಪ ಬರುವುದೆಂದು ಹೇಳಿಬಿಟ್ಟರು. ಅವರು ನನ್ನ ಕೈಬಿಟ್ಟೊಡನೆಯೇ ನಾನು ಆ ಸ್ಥಳ ವನ್ನು ಬಿಟ್ಟು ಒಳಕ್ಕೆ ಹೊರಟು ಹೋದೆನು. ಒಳಕ್ಕೆ ಹೋದ ಮೇಲೆ ನನ್ನನ್ನು ನಾನೇ ನಿಂದಿಸಿಕೊಳ್ಳಬೇಕಾಯಿತು, ನನ್ನನ್ನು ಯಜಮಾನರು ಆದರದಿಂದ ಮಾತನಾಡಿಸಿದರೂ