ಪುಟ:ನನ್ನ ಸಂಸಾರ.djvu/೨೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

14 ಕಾದಂಬ) ಸಂಗ್ರಹ

ನಾನು ಮಾತನಾಡದೆ ಹೋದೆನಲ್ಲಾ ! ಎಂಬ ವ್ಯಥೆಯು ನನ್ನ ಮನಸ್ಸನ್ನು ವ್ಯಗ್ರ ಮಾಡಿಬಿಟ್ಟಿತು. ಇನ್ನೆಂದಾದರೂ ಮಾತಾಡಿಸಿದರೆ ಮಾತನಾಡಿಬಿಡುವೆನೆಂದು ನಿರ್ಧರಿಸಿ ಕೊಂಡೆನು. ಆದರೆ ಪುನಃ ನನ್ನ ಮುಗ್ಧವಯಸ್ಸಿನಲ್ಲಿ ಅಂತಹ ಸಂಭವವೇ ಉಂಟಾಗಲಿಲ್ಲ. ಇಷ್ಟರಲ್ಲೇ ನನ್ನ ತಂದೆಯು ಬಂದು ನನ್ನನ್ನು ರಂಗಪುರಕ್ಕೆ ಕರೆದು ಕೊಂಡು ಹೊರಟು ಹೋದರು.

      ನಾನು ಮದುವೆಯಾದ ಮೇಲೆ ನಾಲ್ಕು ತಿಂಗಳು ಪತಿಗೃಹಕ್ಕೆ ಹೋಗಿದ್ದೆನು.
ನನ್ನ ತಂದೆಯು ಪತಿಗೃಹದಿಂದ ನನ್ನನ್ನು ರಂಗಪುರಕ್ಕೆ ಕರೆದುಕೊಂಡು ಬಂದ ಆರುತಿಂ
ಗಳಿಗೇ ನಾನು ದೊಡ್ಡವಳಾದೆನು. ಆಗ ನನನೆ ಹದಿನೈದುವರ್ಷ ತುಂಬಿ ಮೇಲೆ ಆರು
ತಿಂಗಳಾಗಿದ್ದಿತು. ನಾನು ದೊಡ್ಡವಳಾದ ಹದಿನಾರು ದಿನದೊಳಗಾಗಿ ಋತುಶಾಂತಿ
ಯನ್ನು ಮಾಡಿಕೊಡಲು ನನ್ನ ತಂದೆಗೆ ಸಾಕಾದಷ್ಟು ಅನುಕೂಲವಿರಲಿಲ್ಲ. ಆದುದ
ರಿಂದ ಹರಪುರಕ್ಕೆ ಬರದ ಕಾಗದದಲ್ಲಿ ಕಾಲವಿಳಂಬವನ್ನು ಸೂಚಿಸುವ ಅಭಿಪ್ರಾಯ
ವನ್ನು ತೋರಿಸಿ ಪತ್ರವನ್ನು ಬರದು ಹಾಕಿದರು.
ನಮ್ಮ ತಾತನವರಾದ ನೀಲಕಂಠಶಾಸ್ತ್ರಿಗಳು ನಮ್ಮ ತಂದೆಯ ಕಾಗದವ
ನ್ನೋದಿ ಕೋಪಗೊಂಡರು, ಋತುಶಾಂತಿಯನ್ನು ಸಾವಕಾಶವಾಗಿಡಲು ಅವರಿಗೆ ಮನ
ಸ್ಸಿರಲಿಲ್ಲ. ನಮ್ಮ ತಂದೆಯ ಪತ್ರಕ್ಕೆ ಬದುಲಾಗಿ ಅವರು. " ನಿಮ್ಮ ಕಾಗದವನ್ನು
ನೋಡಿ ಸಂತೋಷವಾಯಿತು. ತಾವು ಈ ಕಾಗದ ಕಂಡೊಡನೆಯೇ ಸಕುಟುಂಬರಾಗಿ
ಹುಡುಗಿಯನ್ನೂ ಕರದುಕೊಂಡು ಇಲ್ಲಿಗೇಬರಬೇಕು. ಲಗ್ನವನ್ನು ಹದಿನಾರು ದಿನ ದೊಳಗೇ ನಿಷ್ಕರ್ಷೆ ಮಾಡಿರು ತ್ತೇವೆ. ಎಂದು ಬರದು ಕಳುಹಿಸಿದರು. ನಮ್ಮ ತಂದೆಗೆ ಆ ಕಾಗದವನ್ನು ನೋಡಿ ತುಂಬಾಯೊಚನೆಗೆ ಪ್ರಾರಂಭವಾಯಿತು, ಪುನಃ"ನಾನು ಬಡವನಾದರೂ ಚಿಂತೆಯಿಲ್ಲ.ತಾವು ಸರ್ವರೊಡನೆ ರಂಗಪುರಕ್ಕೇ ದಯ ಮಾಡಿ ಲಗ್ನವನ್ನು ಬೆಳಸಿಕೊಂಡು ಹೋಗಬಹುದು” ಎಂದು ಪುನಃ ನಮ್ಮ ತಂದೆಯು ಹರಪುರಕ್ಕೆ ಪತ್ರವನ್ನು ಬರದು, ಸಾಹುಕಾರರಲ್ಲಿ ನೂರು ರೂಪಾಯಿ ಸಾಲಮಾಡಿ ನಿಷೇಕಲಗ್ನಕ್ಕೆ ತಕ್ಕ ಸಾಹಿತ್ಯಗಳನ್ನು ಅಣಿಮಾಡಿಕೊಂಡರು. ನಿರ್ದಿಷ್ಟ ದಿನಕ್ಕೆ ಸರಯಾಗಿ ಎಲ್ಲರೂ ರಂಗಪುರಕ್ಕೆ ಬಂದರು. ನಿಷೇಕದ ದಿವಸ ಹಗಲು ಹವನ ಹೋಮಾದಿಗಳೆಲ್ಲವೂ ಬೆಳೆದುವು, ಹಸೆಯ ಮೇಲೆ ಕುಳಿತು ಕೊಳ್ಳು ವಾಗ ನನಗೆ ಬಹುಕಡೆ ಎರವಲಾಗಿ ತಂದ ಅಸಂಖ್ಯಾತವಾದ ವಿಧ ವಿಧ ಆಭರಣಗಳನ್ನು ಅಲಂಕಾರ ಮಾಡಿದರು. ನನಗೆ ಒಡವೆಗಳ ಭಾರವನ್ನು ಹೊರುವುದು ಬಹು ಕಷ್ಟವಾಗಿ ಹೋಯಿತು. ಆದರೆ ಆ ಕಷ್ಟವೂ ಹೆಂಗಸರಿಗೆ ಅದೊಂದು ವಿಧವಾದ ಆನಂದವೇ ಸರಿ.