ಪುಟ:ನನ್ನ ಸಂಸಾರ.djvu/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ನನ್ನ ಸಂಸಾರ 15

ಆದಿನ ಎರಡು ಬಾರಿ ಆರತಕ್ಷತೆಗಳಾದುವು. ರಾತ್ರಿ ಹನ್ನೆರಡು ಘಂಟೆಗೆ ನಾನು ನನ್ನ ಸ್ವಾಮಿಯೊಡನೆ ಶಯನಗೃಹಕ್ಕೆ ಪ್ರವೇಶ ಮಾಡಿದೆನು. ಅಲ್ಲಿಗೆ ಪ್ರವೇಶ ಮಾಡಿದ ಎರಡು ಗಳಿಗೆಯವರಿಗೂ ಫಲದಾನವೇ ಮುಂತಾದ ಶಾಸ್ತ್ರಗಳು ನಡೆಯುತ್ತಿದ್ದುವು. ಪುರೋಹಿತರು ಬಂದು ನಾಲ್ಕಾರು ವೇದಋಕ್ಕುಗಳನ್ನು ನಮ್ಮ ಯಜಮಾನರಿಂದ ಹೇಳಿಸಿ ಹೊರಟು ಹೋದರು. ಶಯನ ಗೃಹಕ್ಕೆ ಪ್ರವೇಶಿಸಿದ್ದ ಸುವಾಸಿನಿಯರು ಯಥಾಯಥ ವಾಗಿ ಹೊರಟು ಹೋದರು. ಈಗ ಶಯನ ಗೃಹದಲ್ಲಿ ನಾನೂ ನನ್ನ ಸ್ವಾಮಿಯೂ ವಿನಹ ಇತರರಾರೂ ಇರಲಿಲ್ಲ.
       ನಮ್ಮ ಯಜಮಾನರು ನನ್ನನ್ನು ಆದಿನ ಆದರ ಪೂರ್ವಕವಾಗಿ ಕುಶಲಪ್ರಶ್ನೆ ಯನ್ನು ಮಾಡಿದರು. ನಾನೂ ಬಹುಸಂಕೋಚದಿಂದ ಅವರ ಪ್ರಶ್ನೆಗಳಿಗೆ ಉತ್ತರಕೊಟ್ಟೆನು. ನಮ್ಮ ಯಜಮಾನರು ಸತೀ ಧರ್ಮವನ್ನು ಕುರಿತು ಬಹುಹೊತ್ತಿನವರಿಗೆ ಉಪನ್ಯಾಸ ಮಾಡಿದರು. ಅವರ ನೀತಿಗಳನ್ನು ಕೇಳಿ ನನಗೂ ಬಹಳ ಸಂತೋಷವಾಯಿತು. ಅವರ ಉಪನ್ಯಾಸದಿಂದ ತಿಳಿದು ಬಂದುದೇನಂದರೆ; - ಗೃಹಿಣಿಯಾದವಳಿಗೆ, ಪತಿವಿನಹ ಬೇರೆ ದೇವರಿಲ್ಲ, ಬೇರೇವ್ರತವಿಲ್ಲ. ಬೇರೆ ಉಪವಾಸಗಳಿಲ್ಲ. ಪ್ರತ್ಯೇಕವಾದ ತೀರ್ಥಯಾತ್ರೆಗಳಿಲ್ಲ. ಇತರವಾದ ಪುಣ್ಯ ಕ್ಷೇತ್ರಗಳೂ ಇಲ್ಲ. ಪತಿಗಿಂತಲೂ ಸ್ವರ್ಗ ಸುಖವಿಲ್ಲ; ಹೀಗೆಯೇ ಮಾತನಾಡುತ್ತಿದ್ದಾಗಲೇ ಬೆಳಗಿನಝಾವದ ಕೋಳಿಯು ಕೂಗಿಬಿಟ್ಟಿತು.

ಗೃಹಿಣಿಯರಾದ ಸೋದರಿಯರಿರಾ: ಈ ದಿನ ನಾನು ಎಷ್ಟು ಆನಂದದಿಂದಿರು ವೆನೆಂಬುದನ್ನು ಅನುಭವಿಗಳಾದ ನೀವೇ ಊಹಿಸಿಕೊಳ್ಳ ಬೇಕಲ್ಲದೆ ಅದನ್ನು ಮಾತಿನಿಂದ ಹೇಳಲಾಗುವುದಿಲ್ಲ. ಯಾವ ರಮಣಿಯು, ಪತಿಯ ಆದರಕ್ಕೆ ಪಾತ್ರಳಾಗಿ, ಪತಿಯೇ ಸರ್ವಸ್ವವೆಂದು ನಂಬಿ ಪತಿದೇವನನ್ನು ಅನವರತವೂ ಎಡೆಬಿಡದೆ ಪತಿಭಕ್ತಿಪರಾಯಣ ೪ಾಗಿರುವಳೋ ಅಂತಹ ರಮಣಿಯಸುಖದ ಮುಂದೆ ಇತರ ವಿಧವಾದ ಪ್ರಾಪಂಚಿಕ ಸುಖಗಳನ್ನು ತೃಣದಂತೆ ಭಾವಿಸಬೇಕು.

                 IV 
    ಪ್ರಸ್ತವಾದಮೇಲೆ ಹದಿನೈದುದಿನ ನಾನು ತೌರುಮನೆಯಲ್ಲಿಯೇ ಇದ್ದೆನು. ಇನ್ನೆಷ್ಟು ದಿನ ತಾನೇ ಹೆಣ್ಣು ಮಕ್ಕಳು ತೌರುಮನೆಯಲ್ಲಿರುವುದಕ್ಕಾದೀತು ? ಹೆಣ್ಣು ಮಕ್ಕಳು ಹುಟ್ಟುವುದು ಪರರ ಮನೆಯಲ್ಲಿರುವುದಕ್ಕಾಗಿಯೇ. ಗಂಡನ ಮನೆಗೆ ಹೋದಮೇಲೂ ಹೆಣ್ಣು ಮಕ್ಕಳಿಗೆ ತೌರುಮನೆಯ ಆಶೆಯಿದ್ದೇ ಇರುತ್ತದೆ. ಅದಕ್ಕಾ ಗಿಯೇ ಗಂಡನ ಮನೆಯಲ್ಲಿ ಸಂಸಾರಮಾಡುತ್ತಿರುವ ಹೆಣ್ಣುಮಕ್ಕಳನ್ನು ತಂದೆತಾಯಿ