ಈ ಪುಟವನ್ನು ಪರಿಶೀಲಿಸಲಾಗಿದೆ
6 ಕಾದಂಬರೀಸಂಗ್ರಹ
(೧) ೭ನೇ ಮತ್ತು ೮ ನೇ ನಿಬಂಧನೆಗಳನ್ನು ಒಂದೇ ನಿಬಂಧನೆಯಾಗಿ ಏರ್ಪ ಡಿಸಬಹುದು. (೨) ಕಾರ್‍ಯ ನಿರ್ವಾಹಕಮಂಡಲಿಗೆ Executive Committee ಎಂಬ ಇಂಗ್ಲೀಷ್ ಹೆಸರಿನ ಬದಲಾಗಿ ಆಂಧ್ರ ಪರಿಷತ್ತಿನಂತೆಯೇ Senatus ಎಂಬ ಹೆಸರು ಕೊಟ್ಟರೆ ಕಿವಿಗೆ ಗಂಭೀರವಾಗಿಯ. ಪರಿಷತ್ತೆಂಬ ಮಾತಿಗೆ ಅನುಗುಣವಾಗಿಯೂ ಇರುವುದು. (೩) ಅಧ್ಯಕ್ಷ (President) ರನ್ನೇ ಕಾರನಿರ್ವಾಹಕಮಂಡಲಿಯ ಮುಖ್ಯರ ನ್ನಾಗಿ ಮಾಡುವುದಕ್ಕೆ ಬದಲಾಗಿ ಆ ಉದ್ಯೋಗದ ಬಹುಮಾನವು ಇತರ ಭಾಗಗಳ ದೊಡ್ಡ ಮನುಷ್ಯರಿಗೂ ದೊರೆಯಲು ಅವಕಾಶವಾಗುವಂತೆ, ಕಾರ್‍ಯನಿರ್ವಾಹಕಮಂಡಲಿಯ ಅಗ್ರಾಸನಾಧಿಪತಿಯಾಗಿ (chairman of the senatus) ಬೇರೊಬ್ಬರನ್ನು ನಿಯ ಮಿಸಿ, ಅಧ್ಯಕ್ಷರನ್ನು ಮುಂದೆ ಹೇಳುವ ಮೇರೆಗೆ ಅಸಾಧಾರಣಸಭ್ಯರನ್ನಾಗಿ ಇಟ್ಟು ಕೊಳ್ಳಬಹುದು. ಇಂಥ ಅಗ್ರಾಸನಾಧಿಪತಿಗಳು ಬೆಂಗಳೂರಿನವರೇ ಆಗಿರಬೇಕೆಂಬುದನ್ನು ಪ್ರತ್ಯೇಕವಾಗಿ ನಾನು ಹೇಳಬೇಕಾದುದಿಲ್ಲ. ಆಯಾ ಸಮ್ಮೇಳನದ ಅಧ್ಯಕ್ಷರೇ ಮುಂದಿನ ಸಮ್ಮೇಳನದ ಪರ್‍ಯಃತ ಪರಿಷತ್ತಿನ ಅಧ್ಯಕ್ಷರಾಗಿದ್ದರೆ ಚೆನ್ನಾಗಿರುವುದು. (೪) ಕಾ.ನಿ. ಮಂಡಲಿಯ ಸದಸ್ಯರ ಒಟ್ಟು ಸಂಖ್ಯೆಯನ್ನು ೫೦ ಕ್ಕೆ ಏರಿಸಬ ಹುದು. ಮತ್ತು ಇವರ ವಿನಾ ಮಹಾಪೋಷಕರೂ, ಪೋಷಕರ ಮೇಲೆ ಸೂಚಿಸಿದ (ನಡೆ ಯುವ ವರ್ಷದ ಮತ್ತು ಹಿಂದಿನ ವರ್ಷಗಳು) ಅಧ್ಯಕ್ಷರೂ ಅದರ ಯಾವಜೀವ ಅಸಾ ಧಾರಣ ಸಭಾಸದ(extraordinary members) ರಾಗಿರಬೇಕೆಂದು ಏರ್ಪಡಿಸ ಬಹುದು. *(೫) ಉಪಾಧ್ಯಕ್ಷರ ಸಂಖ್ಯೆಯ ಪರಮಾವಧಿಯು ೫ ಯೆಂದೂ, ಕಾರ್‍ಯದರ್ಶಿಗ ಳಿಗೂ ಕೋಶಾಧ್ಯಕ್ಷರಿಗೂ ಒಬ್ಬೊಬ್ಬರು ಜಂಟಿಯಾಗಿ (joint) ಅಥವಾ ಸಹಾಯಕ (Assistant) ರಾಗಿ ಇರಬಹುದೆಂದೂ, ಅಂತು ಉದ್ಯೋಗಪ್ರಯುಕ್ತ (Ex-officio) ಸದಸ್ಯರ ಸಂಖ್ಯೆಯ ಪರಮಾವಧಿಯು ೧೦ರವರೆಗೆ ಇರಬಹುದೆಂದೂ ಏರ್ಪಡಿಸಬಹುದು. ಬೇರೆಬೇರೆ ಪ್ರಾಂತ್ಯಗಳಲ್ಲಿಯ ದೊಡ್ಡ ಮನುಷ್ಯರಿಗೆ ಪರಿಷತ್ತಿನ ಬೇರೆ ಯಾವ ಅಧಿಕಾ ರವೂ ಲಭಿಸುವಂತಿಲ್ಲವಾದುದರಿಂದ ಅವರನ್ನು ಗೌರವಿಸುವುದಕ್ಕಾಗಿ ಉಪಾಧ್ಯಕ್ಷರ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಆದರೆ ಯಾವುದೊಂದು ಪ್ರಾಂತ್ಯದಿಂದ ಕನಿಷ್ಠ ಪಕ್ಷ ೨೫ ಮಂದಿ ಸಭಾಸದರಾದರೂ ಇಲ್ಲದೆ ಅವರಿಗೆ ಆ ಪ್ರಾಂತ್ಯದ ಬಗ್ಗೆ ಉಪಾಧ್ಯಕ್ಷರನ್ನಾ ರಿಸಲು ಬಿಡದಿರಬಹುದು. * ತೆಲುಗು ಸಾ. ಪರಿಷತ್ತಿಗೆ ಕಾಯ್ಯದರ್ಶಿಗಳು ಮೂವರೂ ಕೋಶಾಧ್ಯಕ್ಷರಿಬ್ಬರೂ ಇರುವರು ಮರಾಟೀ ಸಾ. ಪರಿಷತ್ತಿಗೆ ಉಪಾಧ್ಯಕ್ಷರೈವರೂ ಕಾರ್‍ಯದರ್ಶಿಗಳಿಬ್ಬರೂ ಕೋಶಾಧ್ಯಕ್ಷರೊಬ್ಬರೂ ಇರುವರು.