ಪುಟ:ನನ್ನ ಸಂಸಾರ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸಾಹಿತ್ಯ ಪರಿಷತ್ತು

      (೬) ನಲವತ್ತು ಸ್ಥಾನಗಳನ್ನು ಸಭಾಸದರು ಆಯ್ದು ಕೊಳ್ಳುವುದಕ್ಕಾಗಿ ಇಟ್ಟುಕೊಳ್ಳಬಹುದು.
       ಈ ವಿಷಯವನ್ನು ಒಂದಿಷ್ಟು ಸೂಕ್ಷ್ಮವಾಗಿ ಪರೀಕ್ಷಿಸಬೇಕಾಗಿದೆ. ಇಂಥ ಪ್ರಾಂತ್ಯದಿಂದ ಇಷ್ಟೇ ಪ್ರತಿನಿಧಿಗಳು ಕಾರ್ಯನಿರ್ವಾಹಕಮಂಡಲಿಯಲ್ಲಿರಬೇಕೆಂದು ಕಳೆದ ಸಮ್ಮೇಳನದಲ್ಲಿ ಗೊತ್ತು ಪಡಿಸಿದಾಗ ಯಾವ ಪ್ರಾಂತ್ಯದಿಂದಲೂ ಸಭಾಸದರಿರಲಿಲ್ಲ ವಷ್ಟೇ ಅಲ್ಲದೆ, ಎಲ್ಲಿಂದ ಎಷ್ಟು ಮಂದಿ ಪರಿಷತ್ತಿಗೆ ಸೇರಬಹುದೆಂಬುದೂ ತಿಳಿದಿರಲಿಲ್ಲ. ಇಂಥ ಸ್ಥಿತಿಯಲ್ಲಿ ಆಗ ಮಾಡಿದ ಕ್ರಮವೇ ಚೆನ್ನಾಗಿತ್ತೆನ್ನಬಹುದು. ಆದರೆ ಈಗ ಆಯಾ ಪ್ರಾಂತ್ಯದ ಸಭಿಕರಿಷ್ಟೇ ಜನರಿರುವರೆಂದು ತಿಳಿದಿರುವುದರಿಂದ ಬರೀ (Province) ಸೀಮಾನುಸಾರವಾಗಿ ಪ್ರತಿನಿಧಿಗಳನ್ನು ಆಯ್ದುಕೊಳ್ಳುವುದಕ್ಕಿಂತ ಬೇರೊಂದು ರೀತಿಯಾಗಿ ಆರಿಸುವುದು ಯುಕ್ತವೆಂದು ನನಗೆ ತೋರುತ್ತಿದೆ. ಆದುದರಿಂದ ಈ ಕೆಳಗಿನಂತೆ ನಿಬಂಧಿಸಿದರೆ ಅನುಕೂಲವಾಗಬಯದು:-

(¡) ೨೦ ಮಂದಿಯನ್ನು ಆಯಾ ಪ್ರಾಂತ್ಯದ ಸದಸ್ಯರ ಪ್ರಮಾಣಾನುಸಾರವಾಗಿ ಆರಿಸುವುದು. ಉದಾಹರಣೆಯಾಗಿ, ಎಲ್ಲಾ ವರ್ಗಗಳು ಸೇರಿ ಒಟ್ಟು ೪೦೦ ಸಭಿಕರಿದ್ದು ಅವರಲ್ಲಿ ೨೦೦ ಮಂದಿ ಮೈಸೂರಿನವರೂ ೧೦೦ ಬೊಂಬಾಯಿಯವರೂ, ೭೫ ಮದ್ರಾಸಿನವರೂ, ೨೫ ಕೊಡಗಿನವರೂ ಇದ್ದರೆ ಕ್ರಮವಾಗಿ ಮೈಸೂರಿಗೆ ೧:, ಬೊಂಬಾಯಿಗೆ ೫, ಮದ್ರಾಸಿಗೆ ೪, ಕೊಡಗಿಗೆ ಒಂದರಂತೆ ಪ್ರತಿನಿಧಿಗಳನ್ನು ಕೊಡಬೇಕಾಗುವುದು. ಈ ಪ್ರಮಾಣವನ್ನು ಆಯಾ ಚುನಾವಣೆಯ ಕಾಲದಲ್ಲಿರುವ ಸಭಾಸದರ ಸಂಖ್ಯೆಗೆ ಸರಿಪಡಿಸಿಕೊಳ್ಳಬೇಕು. ಬೊಂಬಾಯಿಯ ದೇಶೀಯ ಸಂಸ್ಥಾನಗಳನ್ನು ಪ್ರತ್ಯೇಕವಾಗಿ ಗಣಿಸಬೇಕಾದ ಅವಶ್ಯಕತೆ ತೋರಲಿಲ್ಲ.

(ii) ಉಳಿದ ೨೦ ಮಂದಿ ಪ್ರತಿನಿಧಿಗಳನ್ನು ದೇಶಭೇದವಿಲ್ಲದೆ ಆಯಾ ವರ್ಗಗಳಿಗೆ ಹಂಚಿಹಾಕಬಹುದು. ಉದಾಹರಣೆಯಾಗಿ, ನಾನು ಹಿಂದೆಕೊಟ್ಟ ವರ್ಗೀ  ಕರಣವು ಅಂಗೀಕರಿಸಲ್ಪಟ್ಟ ಪಕ್ಷದಲ್ಲಿ, ಉಪಪೋಷಕ, ಆಶ್ರಯದಾತ, ಪ್ರೋತ್ಸಾಹಕ ರೆಂಬ ಈ ಮೂರು ವರ್ಗಗಳಿಂದ ಒಬ್ಬರು ಅಥವಾ ಇಬ್ಬರು, ಒಂದನೇ ವರ್ಗದ ಆಜೇವಸಭಾಸದರಿಂದ ೫ ಜನರು, ಎರಡನೇ ವರ್ಗದ ಆಜೀವ ಸಭ್ಯರಿಂದ ೪ ಜನರು, ೧ ನೇ ವರ್ಗದ ಸಾಮಾನ್ಯ ಸಭಾಸದರಿಂದ ಮೂವರು, ೨ ನೇ ವರ್ಗದ ಸಾಮಾನ್ಯ ಸರ್ಭಾದರಿಂದ ಇಬ್ಬರು, ಮತ್ತು ಇದುವರೆಗೆ ಆಯ್ದುಕೊಳ್ಳಲಾದ ಅಧಿಕಾರಿಗಳೂ ಕಾರ್‍ಯನಿರ್ವಾಹಕ ಸಭಿಕರೂ ಒಟ್ಟಾಗಿ ಆಯ್ದುಕೊಳ್ಳುವ ೪ ಅಥವಾ ೫ ಜನರು ಹೀಗೆ ೨೦ ಜನರನ್ನು ಆರಿಸಿಕೊಳ್ಳಬಹುದು. ಈ ಕೊನೆಗೆ ಹೇಳಿದ ೪ ಅಥವಾ ೫ ಮಂದಿಯನ್ನು ಕಾರ್‍ಯ    ನಿರ್ವಾಹಕರೇ   ಆಯ್ದುಕೊಳ‍್ಳುವ ಕ್ರಮದ ಮೂಲವಾಗಿ,