ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀಸಂಗ್ರಹ ಸಾಮಾನ್ಯವಾಗಿ ಚುನಾವಣೆಗಳಲ್ಲಿ ದುರಾಗ್ರಹವೇ ಮುಂತಾದುವುಗಳ ದೆಸೆಯಿಂದ ಉಂಟಾಗಬಹುದಾದ ಯಾವುವಾದರೂ ಅಕ್ರಮಗಳನ್ನು ಪರಿಹರಿಸಲು ಅವಕಾಶ ದೊರೆತಂತಾಗುವುದು. ಚುನಾವಣೆಯ ಮಟ್ಟಿಗೆ ಗೌರವಾರ್ಥ (Honorary) ಸಭಾಸದ ರನ್ನು ಮೇಲಿನ ಯಾವುದಾದರೊಂದು ವರ್ಗದವರೆಂದು ತಿಳಿಯತಕ್ಕದ್ದು. (೭) ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರು ೩ ವರ್ಷಗಳ ಕಾಲ ತಮ್ಮ ತಮ್ಮ ಸ್ಥಾನಗಳನ್ನು ವಹಿಸಿರಬೇಕೆಂದು ಸ್ಪಷ್ಟಪಡಿಸಬಹುದು. ಇದರ ಮಧ್ಯೆ ತೆರ ವಾಗುವ (Vacancies) ಸ್ಥಳಗಳನ್ನು ಕಾ, ನಿ. ಮಂಡಲಿಯವರೇ ತುಂಬಿಸಿ ಮುಂದಿನ ವಾರ್ಷಿಕ ಸಭೆಯ ಪರ್‍ಯಂತ ಊರ್ಜಿತವಿಡಬೇಕೆಂದು ಉಪನಿಬಂಧನೆಗಳಲ್ಲಿ ಹೇಳಿರುವುದನ್ನು ತೆಗೆದು ನಿಬಂಧನೆಗಳಲ್ಲಿಯೇ ಸಮಾವೇಶಗೊಳಿಸಬಹುದು.

 ೧೦ ನೇ ನಿಬಂಧನೆ,-ಇದರಲ್ಲಿ ಆಯಾ ಕಾಲದಲ್ಲಿ ನೆರೆದ ಕಾ. ನಿ. ಸಭಿಕರ ಬಹುಮತದಂತೆ ವರ್ತಿಸತಕ್ಕುದೆಂದು ಮಾತ್ರ ಹೇಳಿದೆ. ಆದರೆ ಮುಖ್ಯವಾದ ಕೆಲವು ವಿಷಯಗಳಲ್ಲಿ ಯಾವತ್ತು ಕಾರ್‍ಯನಿರ್ವಾಹಕರ ಮತಗಳನ್ನು ಪಡೆಯುವಂತೆ,-ಉದಾ ಹರಣೆಯಾಗಿ, (a) ತೆರವಾದ ಕಾ, ಸದಸ್ಯರ ಸ್ಥಳಗಳನ್ನು ತಾತ್ಕಾಲಿಕವಾಗಿ ತುಂಬಿ ಕೊಳ್ಳುವ ಸಂದರ್ಭದಲ್ಲಿ, (b) ಯಾವುದೊಂದು ನಿಬಂಧನೆಯ ಅರ್ಥದ ವಿಷಯದಲ್ಲಿ

ಮತಭೇದವುಂಟಾದಾಗ, (c) ವಾರ್ಷಿಕ ಮಹಾಸಭೆಗಾಗಿ ಯಾರಾದರೂ ಸೂಚನೆಗ ಳನ್ನು ಕಳುಹಿಸಿರುತ್ತ ಅವನ್ನು ಆ ಮಹಾಸಭೆಗೆ ತರಬೇಕೇ, ಬೇಡವೇ ? ಎಂಬುದನ್ನು ನಿರ್ಣಯಿಸುವಾಗ, ಕಾರನಿರ್ವಾಹಕಸಭ್ಯರೆಲ್ಲರ ಅಭಿಪ್ರಾಯವನ್ನು ಪಡೆಯುವುದು ಉತ್ತಮವೆಂದು ನನಗೆ ತೋರುತ್ತಿದೆ. ಮೊದಲಲ್ಲಿ,ಕಾರ್‍ಯನಿರ್ವಾಹಕರ ಬಳಿಗೆ ಕಳುಹಿ ಸಿದ ಪ್ರತಿಸೂಚನೆಯನ್ನೂ ಅವರು ಅಗತ್ಯವಾಗಿ ಮಹಾಸಭೆಗೆ ತರಬೇಕೆ ? ಅಥವಾ ತಮ್ಮ ವಿವೇಕ ಬುದ್ದಿಯನ್ನು ಪ್ರಯೋಗಿಸಿ ಹಾಗೆ ತಾರದೆ ಬಹುಮತದಿಂದ ತಮ್ಮ ಸಭೆಯಲ್ಲಿಯೆ ತಳ್ಳಿಬಿಡಬಹುದೇ ? ಎಂಬ ವಿಷಯವನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿ ಸುವುದು ಅಗತ್ಯವಾಗಿದೆ.

         ೧೧ ನೆಯ ನಿಬಂಧನೆಯನ್ನು ಸಂಪೂರ್ಣವಾಗಿ ತೆಗೆದುಬಿಡತಕ್ಕದ್ದು.
         ೧೨ ನೆಯ ನಿಬಂಧನೆಯನ್ನು ೭, ೮ ನೇ ನಿಬಂಧನೆಗಳನ್ನು ಸೇರಿಸಿ ಉಂಟಾ ಗುವ ಹೊಸ ನಿಬಂಧನೆಯಲ್ಲಿ ಸಮಾವೇಶಗೊಳಿಸಬಹುದು. ಮತ್ತು ಸಾಮಾನ್ಯತಃ ಕನಿಷ್ಠ ಪಕ್ಷ ಮೂರು ತಿಂಗಳಿಗೊಂದುಬಾರಿ ಸೇರಬೇಕಾಗಿದ್ದರೂ ೧೦ ಕ್ಕೆ ಕಡಿಮೆ ಯಲ್ಲ ದಷ್ಟು ಕಾರ್ಯನಿರ್ವಾಹಕ ಸಭಿಕರು ಅಪೇಕ್ಷಿಸಲಾಗಿ, ಆ ಅಪೇಕ್ಷೆಯು ತಲು ಸಿದ ೧೫ ದಿನದೊಳಗಾಗಿ ತಪ್ಪದೆ ಸಭೆ ಸೇರತಕ್ಕುದೆಂದು ಕೂಡ ಅದಕ್ಕೆ ಹೆಚ್ಚಾಗಿ ಸೇರಿ ಸಬಹುದು.