ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸಾಹಿತ್ಯ ಪರಿಷತ್ತು

೧೩ ನೇ ನಿಬಂಧನೆ:-ಕಾ. ನಿ. ಮಂಡಲಿಯ ಒಟ್ಟು ಸಂಖ್ಯೆ ೫೦ ಎಂದು ಗೊತ್ತಾದಪಕ್ಷದಲ್ಲಿ ಕನಿಷ್ಠ ಸಂಖ್ಯೆಯನ್ನು ಹತ್ತಕ್ಕೆ ಏರಿಸಬಹುದು. ಮತ್ತು ಇವರಲ್ಲಿ ೬ ಜನರಾದರೂ ಅಧಿಕಾರಿಗಳಲ್ಲದವರಾಗಿರಬೇಕೆಂದು ಏರ್ಪಡಿಸಬಹುದು. ಅಸಾಧಾ ರಣ (Extraordinary) ಸಭ್ಯರನ್ನು ಕನಿಷ್ಠ ಸಂಖ್ಯೆಯಲ್ಲಿ ಗಣಿಸದಿರಬಹುದು.

ದಹಹದಹದದಹಜದ

೧೫ ನೇ ನಿಬಂಧನೆಗೂ ೧ ನೇ ಉಪನಿಬಂಧನೆಗೂ ಏನು ಭೇದವೆಂದು ಲಕ್ಷ ದಲ್ಲಿ ಬರುವುದಿಲ್ಲ. ಭೇದವಿಲ್ಲವೆಂದಾದರೆ ಉಪನಿಬಂಧನೆಯನ್ನು ನಿಬಂಧನೆಯಲ್ಲಿಯೇ ಸೇರಿಸಿ ಬಿಡಬಹುದು.
೧೭ ನೇ ನಿಬಂಧನೆಯಲ್ಲಿ ' No applicant for Honorary membership' ಎಂದರೆ ಸನ್ಮಾನಿತ ಸದಸ್ಯತ್ವಕ್ಕೆ ಮನುವೆ ಮಾಡುವ ಯಾವನಾದರೂ,” ಎಂಬ ಮಾತುಗಳು ಇಂಗ್ಲಿಷಪ್ರತಿಯಲ್ಲಿದೆ. ಈ ಬಹುಮಾನದ ಪದವಿಯನ್ನು ಮನು ವೆಮಾಡಿ ಪಡೆಯತಕ್ಕುದೇ ಅಲ್ಲವೆಂದು ನಾನು ಗ್ರಹಿಸುವೆನು. ಕನ್ನಡ ಪತ್ರಿಕೆಯಲ್ಲಿ ಆ ಮಾತುಗಳಿಲ್ಲ ವಾದುದರಿಂದ ಇಂಗ್ಲಿಷ್ ಪ್ರತಿಯನ್ನು ತಿದ್ದಿಕೊಳ್ಳಬೇಕಾಗಿದೆ. ಇದ ಲ್ಲದೆ ಇಂಥ ಸೂಚನೆಯು ಮೊತ್ತ ಮೊದಲು ಕಾರ್‍ಯ  ನಿರ್ವಾಹಕರ ಬಳಿಗೆ ಬಂದು ಅವರ ಒಪ್ಪಿಗೆಯಿಂದ ಮಹಾಸಭೆಯಲ್ಲಿ ಬಂದರೆ ಚೆನ್ನಾಗಿರುವುದೆಂದು ನನಗೆ ತೋರುತ್ತಿದೆ.
೨೨ ನೆಯ ನಿಬಂಧನೆಯಲ್ಲಿ :' ಅಧ್ಯ ಕ್ಷರ' ಎಂಬ ಪದದ ಬದಲಾಗಿ • ಅಗ್ರಾಸ ನಾಧಿಪತಿಗಳ ' ಎಂಬ ಮಾತನ್ನು ಹಾಕಬಹುದು. ನಾನು ಈ ಹಿಂದೆ ಮಾಡಿದ ಸೂಚನೆಯನ್ನು ಅಂಗೀಕರಿಸಿದ ಪಕ್ಷದಲ್ಲಿ ಇದು ಅಗತ್ಯವಾಗುವುದು.
೨೬ ನೇ ನಿಬಂಧನೆ:- (ಕನ್ನಡಪ್ರತಿಯಲ್ಲಿ ಇದನ್ನು ೨೮ ನೆಯವಾಗಿ ಕಾಣಿ ಸಿದೆ ಮತ್ತು ನಿಜವಾದ ೨೮ ನೇ ನಿಬಂಧನೆಯು ಕೈತಪ್ಪಿನಿಂದ ಬಿಟ್ಟುಹೋಗಿದೆ). ಸಭ್ಯರುಗಳು ದೇಶದ ದೂರದೂರವಾದ ಭಾಗಗಳಲ್ಲಿ ವಸಿಸತಕ್ಕವರಾದುದುರಿಂದ ಪರಿ ಷತ್ತಿನ ಸಾಮಾನ್ಯ (General) ಸಭೆಗಳ ನೋಟಿಸುಗಳನ್ನು ಒರೀ ೧ ತಿಂಗಳ ಮುಂಚೆ ಕೊಟ್ಟರೆ ಸಾಕಾಗಲಾರದೆಂದು ತೋರುತ್ತದೆ. ಮುಖ್ಯವಾಗಿ, ನಿಬಂಧನೆಗಳಲ್ಲಿ ಆಗ ಬೇಕಾದ ಬದಲಾವಣೆಗಳನ್ನು ಆ ನೋಟೀಸು ತಲುಪಿದಂದಿನಿಂದ ೧ ವಾರದೊಳಗಾಗಿ ಕಳುಹಿಸಬೇಕೆಂದು ೨೮ ನೇ ನಿಬಂಧನೆಯಲ್ಲಿ ಹೇಳಿರುವ ಅವಕಾಶವು, ವಿರಾಮವಾಗಿ ಕುಳಿತು ಆಲೋಚಿಸಿ ಬರೆಯುವುದಕ್ಕೆ ಕಡಿಮೆಯೆಂದು ಹೇಳಬೇಕಾಗಿದೆ. ಸಾಮಾನ್ಯ ಸಭೆಯ ನೋಟೀಸನ್ನು ೬ ವಾರಗಳಿಗೆ ಮುಂಚೆ ಕೊಟ್ಟು ಸೂಚನೆಗಳನ್ನು ೪ ವಾರಗ ಳಿಗೆ ಮುಂಚೆ ಬರಮಾಡಿಕೊಂಡು ಅವನ್ನು ಪುನಃ ೩ ವಾರಗಳಿಗೆ ಮುಂಚೆ ಸದಸ್ಯ